ಪವಿತ್ರ ವರ್ಷ 2025 ಕ್ಕೆ ಪ್ರಾರ್ಥನಾ ಕೈಪಿಡಿಯನ್ನು ಬಿಡುಗಡೆಗೊಳಿಸಿದ ಭಾರತದಲ್ಲಿನ ಧರ್ಮಸಭೆ
"ಪವಿತ್ರ ವರ್ಷ 2025 ಕ್ಕೆ ಪ್ರಾರ್ಥನಾ ಕೈಪಿಡಿ" ಎಂಬ ನಾಲ್ಕು ಸಂಪುಟಗಳ ಪುಸ್ತಕಗಳನ್ನು ಭಾರತದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರಾಗಿರುವ ಕಾರ್ಡಿನಲ್ ಫಿಲಿಪ್ ನೇರಿ ಫೆರ್ರಾವೋ ಅವರು ಬಿಡುಗಡೆಗೊಳಿಸಿದ್ದಾರೆ. ಗೋವಾ ರಾಜ್ಯದ ರಾಜಧಾನಿ ಪಣಜಿಯಲ್ಲಿನ ಮಹಾಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದನ್ನು ಬಿಡುಗಡೆಗೊಳಿಸಿದ್ದಾರೆ.
ವರದಿ: ಲಿಕಾಸ್ ನ್ಯೂಸ್

ಇದು ಗುರುಗಳು, ಕನ್ಯಾಸ್ತ್ರೀಯರೂ ಸೇರಿದಂತೆ ಎಲ್ಲಾ ಭಕ್ತಾಧಿಗಳು ಪವಿತ್ರ ವರ್ಷಕ್ಕೆ ಸೂಕ್ತ ರೀತಿಯಲ್ಲಿ ಆಧ್ಯಾತ್ಮಿಕವಾಗಿ ಸಿದ್ಧತೆಗೊಳ್ಳಲು ಪೂರಕವಾಗುತ್ತದೆ. ಈ ಪ್ರಾರ್ಥನೆಗಳನ್ನು ದ್ವಿತೀಯ ವ್ಯಾಟಿಕನ್ ಸಮ್ಮೇಳನ ಸೇರಿದಂತೆ ಧರ್ಮಸಭೆಯ ವಿವಿಧ ಪಾರಂಪರಿಕ ದಾಖಲೆಗಳಿಂದ ಆಯ್ದುಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಗೋವಾ ಮಹಾಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷ ಸಿಮಿಯಾವ್ ಪ್ಯೂರಿಫಿಕಸಾವೋ ಫೆರ್ನಾಂಡಿಸ್, ಸಿಸಿಬಿಐ ಪ್ರಧಾನ ಕಾರ್ಯದರ್ಶಿ ವಂ. ಡಾ. ಸ್ಟೀಫನ್ ಅಲತ್ತರ, ಫಾದರ್ ಡುಮಿಂಗ್ ಗೊನ್ಸಾಲ್ವೆಸ್ ಸೇರಿದಂತೆ ಇತರರು ಭಾಗವಹಿಸಿದ್ದರು.
30 July 2024, 17:32