ಇಂಡಿಯಾ: ಬುದ್ಧಿಮಾಂದ್ಯ ಮಕ್ಕಳ ಆರೈಕೆಯ ಸೇವೆಯನ್ನು ಮಾಡುತ್ತಿರುವ ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜರೆತ್

ಭಾರತದ ತಮಿಳುನಾಡಿನ ತಿರಚಿಯಲ್ಲಿರುವ ಆಶಾದೀಪಂ ಶಾಲೆಯ ಮೂಲಕ ಸತತ 30 ವರ್ಷಗಳಿಂದ ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜಾರೆತ್ ಎಂಬ ಧಾರ್ಮಿಕ ಸಹೋದರಿಯರ ಸಂಸ್ಥೆಯು ಬುದ್ಧಿಮಾಂದ್ಯ ಮಕ್ಕಳ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ.

ವರದಿ: ಸಿಸ್ಟರ್ ಪ್ರಶಾಂತಿ ಮಾದಂಪಟ್ಟಿ, ಎಸ್ ಸಿ ಎನ್, ಅಜಯ್ ಕುಮಾರ್

ಭಾರತದ ತಮಿಳುನಾಡಿನ ತಿರಚಿಯಲ್ಲಿರುವ ಆಶಾದೀಪಂ ಶಾಲೆಯ ಮೂಲಕ ಸತತ 30 ವರ್ಷಗಳಿಂದ ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜಾರೆತ್ ಎಂಬ ಧಾರ್ಮಿಕ ಸಹೋದರಿಯರ ಸಂಸ್ಥೆಯು ಬುದ್ಧಿಮಾಂದ್ಯ ಮಕ್ಕಳ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ.

1995ರಲ್ಲಿ ಆರಂಭವಾದ ಆಶಾದೀಪಂ ಶಾಲೆಯು ಸಿಸ್ಟರ್ಸ್ ಆಫ್ ಚಾರಿಟಿ ಆಫ್ ನಜರತ್ ಎಂಬ ಧಾರ್ಮಿಕ ಸಭೆಯ ಭಗಿನಿಯರ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬುದ್ಧಿಮಾಂದ್ಯತೆ, ಮಾನಸಿಕವಾಗಿ ವಿಕಲರಾಗಿರುವ ಮಕ್ಕಳಿಗೆ ನಿರಂತರ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಸತತ ಮೂವತ್ತು ವರ್ಷಗಳಿಂದ ತಮ್ಮ ಪರಿಶ್ರಮ ಹಾಗೂ ಬದ್ಧತೆಯಿಂದಲೇ ಆಶಾ ದೀಪಂ ಶಾಲೆಯು ಈ ರೀತಿಯ ಮಕ್ಕಳ ಸೇವೆಗೆ ಹೆಸರುವಾಸಿಯಾಗಿದೆ.

ಇಲ್ಲಿನ ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಗೆ ವಿದ್ಯಾಭ್ಯಾಸವನ್ನು ನೀಡುವುದು, ದೈನಂದಿನ ಚಟುವಟಿಕೆಗಳನ್ನು ಕಲಿಸುವುದು, ಸಾಧ್ಯವಾಗುವ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ಅವರನ್ನು ಒಳ್ಳೆಯ ನೌಕರಿಗೆ ಸೇರಿಸುವುದು ಸೇರಿದಂತೆ ಇತ್ಯಾದಿ ಕೆಲಸಗಳನ್ನು ಉಚಿತವಾಗಿ ಮಾಡಿಕೊಂಡು ಬರುತ್ತಿದೆ. ಈ ಕಾರ್ಯವನ್ನು ಸೇವೆಯಾಗಿ ಪರಿಗಣಿಸುತ್ತಿರುವ ಇಲ್ಲಿನ ಭಗಿನಿಯರ ಪರಿಶ್ರಮ ಮತ್ತು ಸೇವಾ ಮನೋಭಾವವನ್ನು ಸ್ಥಳೀಯರು ಸೇರಿದಂತೆ ಎಲ್ಲರೂ ಸಹ ಮುಕ್ತ ಕಂಠದಿಂದ ಶ್ಲಾಘಿಸುತ್ತಾರೆ.

15 July 2024, 19:02