ಜಪಾನಿನ ಮೊದಲ ಕ್ರೈಸ್ತ ದೇವಾಲಯಕ್ಕೆ ನೂರೈವತ್ತು ವರ್ಷಗಳ ಸಂಭ್ರಮ
ಜಪಾನಿನ ಕಥೋಲಿಕ ಪರಂಪರೆಯ ಮೂಲೆಗಲ್ಲಾಗಿರುವ ಸುಕಿಜಿ ಕ್ರೈಸ್ತ ದೇವಾಲಯವು ತನ್ನ ಸ್ಥಾಪನೆಯ ನೂರೈವತ್ತು ವರ್ಷಗಳ ಸಂಭ್ರಮಾಚರಣೆಯನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಜೂನ್ ೩೦ ರಂದು ಸಾಂಭ್ರಮಿಕ ಬಲಿಪೂಜೆಯನ್ನು ಅರ್ಪಿಸಲಾಗಿದ್ದು, ಮಹಾಧರ್ಮಾಧ್ಯಕ್ಷ ಇಸಾವೋ ಕಿಕುಚಿ ಅವರು ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ವರದಿ: ಮಾರ್ಕ್ ಸಾಲುದೆಸ್, ಲಿಕಾಸ್ ನ್ಯೂಸ್
ಜಪಾನಿನ ಕಥೋಲಿಕ ಪರಂಪರೆಯ ಮೂಲೆಗಲ್ಲಾಗಿರುವ ಸುಕಿಜಿ ಕ್ರೈಸ್ತ ದೇವಾಲಯವು ತನ್ನ ಸ್ಥಾಪನೆಯ ನೂರೈವತ್ತು ವರ್ಷಗಳ ಸಂಭ್ರಮಾಚರಣೆಯನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಜೂನ್ ೩೦ ರಂದು ಸಾಂಭ್ರಮಿಕ ಬಲಿಪೂಜೆಯನ್ನು ಅರ್ಪಿಸಲಾಗಿದ್ದು, ಮಹಾಧರ್ಮಾಧ್ಯಕ್ಷ ಇಸಾವೋ ಕಿಕುಚಿ ಅವರು ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ಸಂತ ಜೋಸೆಫರ ಹಳೆಯ ಪ್ರಧಾನಾಲಯ ಎಂದು ಕರೆಯಲ್ಪಡುವ ಸುಕಿಜಿ ಕ್ರೈಸ್ತ ದೇವಾಲಯವು ಜಪಾನಿನ ಮೊದಲ ಕಥೋಲಿಕ ಕ್ರೈಸ್ತ ದೇವಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ.
ಈ ದೇವಾಲಯವನ್ನು ಪ್ರಪ್ರಥಮ ಬಾರಿಗೆ ಎಂಇಪಿ ಸಭೆಯ ಗುರುಗಳು ೧೮೭೪ ರಲ್ಲಿ ಆರಂಭಿಸಿದರು. ಇದನ್ನು ೧೮೯೧ ರಲ್ಲಿ ಪೂರ್ಣಗೊಳಿಸಲಾಗಿ, ಇದು ೧೯೨೦ ರವರೆಗೂ ಪ್ರಧಾನಾಲಯವಾಗಿ ಕಾರ್ಯನಿರ್ವಹಿಸುತ್ತಿತ್ತು. ತದನಂತರ ಇದರ ಪ್ರಧಾನಾಲಯ ಎಂಬ ಪದವಿಯನ್ನು ಸೆಕಿಗುಚಿ ದೇವಾಲಯಕ್ಕೆ (ಸಂತ ಮರಿಯ ಪ್ರಧಾನಾಲಯ) ವರ್ಗಾಯಿಸಲಾಯಿತು.
02 July 2024, 18:31