ಹುಡುಕಿ

ಭೂಕುಸಿತ ಸಂತ್ರಸ್ಥರಿಗೆ ನೆರವಿನ ಮುಂಚೂಣಿಯಲ್ಲಿ ಇಥಿಯೋಪಿಯನ್ ಧರ್ಮಸಭೆ

ಇಥಿಯೋಪಿಯಾದಲ್ಲಿ ಉಂಟಾಗಿರುವ ಭೂಕುಸಿತದಿಂದ ಮೃತ ಹೊಂದಿದವರ ಸಂಖ್ಯೆ ಏರುತ್ತಲೇ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಧರ್ಮಸಭೆಯು ಈವರೆಗೂ ಸುಮಾರು ಐವತ್ತು ಸಾವಿರ ಜನರಿಗೆ ಮಾನವೀಯ ನೆರವನ್ನು ನೀಡಿದೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಇಥಿಯೋಪಿಯಾದಲ್ಲಿ ಉಂಟಾಗಿರುವ ಭೂಕುಸಿತದಿಂದ ಮೃತ ಹೊಂದಿದವರ ಸಂಖ್ಯೆ ಏರುತ್ತಲೇ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಧರ್ಮಸಭೆಯು ಈವರೆಗೂ ಸುಮಾರು ಐವತ್ತು ಸಾವಿರ ಜನರಿಗೆ ಮಾನವೀಯ ನೆರವನ್ನು ನೀಡಿದೆ.

ಇಥಿಯೋಪಿಯಾದ ಕೆಂಚೋ ಶಾಚಾ ಗೊಜಡಿ ಎಂಬಲ್ಲಿ ಮೊದಲ ಬಾರಿಗೆ ಉಂಟಾಗಿರುವ ಭೂಕುಸಿತವು ಕ್ರಮೇಣ ಇನ್ನಿತರ ಭಾಗಗಳಿಗೆ ವ್ಯಾಪಿಸಿಕೊಂಡ ಪರಿಣಾಮ ನೂರಾರು ಜನರು ಮೃತ ಹೊಂದಿದ್ದಾರೆ. ಅಂತಿಮವಾಗಿ ಇದರಿಂದ ಮಡಿದವರ ಸಂಖ್ಯೆ ಸುಮಾರು 500 ಎಂದು ಅಂದಾಜಿಸಲಾಗಿದೆ ಎಂದು ವರದಿಯಾಗಿದೆ.

ಭೂಕುಸಿತ ಉಂಟಾದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತವಾದ ಅಲ್ಲಿನ ಸ್ಥಳೀಯ ಧರ್ಮಸಭೆಯು ಕ್ರೈಸ್ತ ಸ್ವಯಂಸೇವಕರ ತಂಡದೊಂದಿದೆ ಈವರೆಗೂ ಸುಮಾರು ಐವತ್ತು ಸಾವಿರ ಜನರಿಗೆ ಮಾನವೀಯ ನೆರವು ನೀಡುವುದೂ ಸೇರಿದಂತೆ ವಿವಿಧ ರೀತಿಯ ನೆರವನ್ನು ನೀಡಿದೆ. ಈ ರೀತಿಯ ಮಾನವೀಯ ನೆರವನ್ನು ನೀಡುವಲ್ಲಿ ಅಲ್ಲಿನ ಗುರುಗಳು ಹಾಗೂ ಭಕ್ತಾಧಿಗಳು ಹಿಂದೆ ಉಳಿದಿರುವುದಿಲ್ಲ.

ಇಥಿಯೋಫಿಯಾದ ಕಾರ್ಡಿನಲ್ ಸೌರಾಫಿಯೆಲ್ ಅವರು ಮೃತರ ಕುಟುಂಬಗಳೊಂದಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.  

27 July 2024, 17:45