ಹುಡುಕಿ

ದ್ವಿತೀಯ ಮಹಾಯುದ್ಧದ ಪ್ರಸಿದ್ಧ ನರ್ಸ್ ಮಲೇಶಿಯಾದ ಮೊದಲ ಸಂತರಾಗುವ ಸಾಧ್ಯತೆ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶುಶ್ರೂಷಕಿಯಾಗಿ ಮಲೇಷಿಯಾ ಸೈನ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪ್ರಖ್ಯಾತ ನರ್ಸ್ ಸಿಬಿಲ್ ಕಥಿಗಾಸು ಅವರನ್ನು ಸಂತ ಪದವಿಗೇರಿಸುವ ಪ್ರಕ್ರಿಯೆಯಲ್ಲಿ ಮೊದಲನೇ ಪ್ರಕ್ರಿಯೆಯನ್ನು ಪೆನಾಂಗ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆರಂಭಿಸಲು ಸೂಚಿಸಿದ್ದಾರೆ.

ವರದಿ: ಲಿಕಾಸ್ ನ್ಯೂಸ್

ಕುವಾಲ ಲಂಪೂರ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರ ಜೊತೆ ಚರ್ಚಿಸಿ, ಪೆನಾಂಗ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಕಾರ್ಡಿನಲ್ ಸೆಬಾಸ್ಟಿಯನ್ ಫ್ರಾನ್ಸಿಸ್ ಅವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶುಶ್ರೂಷಕಿಯಾಗಿ ಮಲೇಷಿಯಾ ಸೈನ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪ್ರಖ್ಯಾತ ನರ್ಸ್ ಸಿಬಿಲ್ ಕಥಿಗಾಸು ಅವರನ್ನು ಸಂತ ಪದವಿಗೇರಿಸುವ ಪ್ರಕ್ರಿಯೆಯಲ್ಲಿ ಮೊದಲನೇ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಈ ಪ್ರಕ್ರಿಯೆಯ ನೇತೃತ್ವವನ್ನು ಕುವಾಲ ಲಂಪೂರ್ ಮಹಾಧರ್ಮಕ್ಷೇತ್ರದ ಯಾಜಕ ಫಾದರ್ ಯೂಜೀನ್ ಬೆನೆಡಿಕ್ಟ್ ಅವರಿಗೆ ವಹಿಸಿದ್ದಾರೆ.

ಎರಡನೇ ವಿಶ್ವಯುದ್ಧದ ವೇಳೆ ಮಲೇಷಿಯಾ ದೇಶವನ್ನು ಜಪಾನ್ ದೇಶವು ವಶಪಡಿಸಿಕೊಂಡ ಸಮಯದಲ್ಲಿ ನರ್ಸ್ ಸಿಬಿಲ್ ಕಥಿಗಾಸು ಅವರು ಅವರ ಪತಿ ಡಾ. ಕಥಿಗಾಸು ಅವರ ಜೊತೆಗೂಡಿ ಮಾನವೀಯ ಸೇವೆಯನ್ನು, ವಿಶೇಷವಾಗಿ ಗಾಯಗೊಂಡ ಸೈನಿಕರಿಗೆ ವಿಶೇಷ ಸೇವೆಯನ್ನು ಮಾಡಿದ್ದರು. ಇವರ ಅನನ್ಯ ಸೇವೆಯನ್ನು ಇಡೀ ದೇಶವು ಗೌರವಿಸಿತ್ತು. ಇದೀಗ ಅವರು ಸಂತರಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇರಿಸಿದ್ದಾರೆ. 

06 July 2024, 17:36