ಹುಡುಕಿ

ಮಣಿಪುರ ಹಿಂಸಾಚಾರ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಹಾಕಿಕೊಂಡಿರುವ ಭಾರತದ ಧರ್ಮಕ್ಷೇತ್ರಗಳ ಗುರುಗಳ ಸಮಿತಿ

ಮಣಿಪುರ ಹಿಂಸಾಚಾರ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಭಾರತದ ಧರ್ಮಕ್ಷೇತ್ರಗಳ ಗುರುಗಳ ಸಮಿತಿ ಹಾಕಿಕೊಂಡಿದ್ದು ತನ್ನ ಇತ್ತೀಚಿನ ಸಭೆಯಲ್ಲಿ ಈ ಕುರಿತು ನಿರ್ಧಾರವನ್ನು ತೆಗೆದುಕೊಂಡಿದೆ.

ವರದಿ: ಲಿಕಾಸ್ ನ್ಯೂಸ್

ಮಣಿಪುರ ಹಿಂಸಾಚಾರ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಭಾರತದ ಧರ್ಮಕ್ಷೇತ್ರಗಳ ಗುರುಗಳ ಸಮಿತಿ ಹಾಕಿಕೊಂಡಿದ್ದು ತನ್ನ ಇತ್ತೀಚಿನ ಸಭೆಯಲ್ಲಿ ಈ ಕುರಿತು ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರತಿ ಮನೆಯ ನಿರ್ಮಾಣದ ಖರ್ಚು ವೆಚ್ಚವು ಸುಮಾರು ನಾಲ್ಕು ಲಕ್ಷ ರೂಪಾಯಿಗಳಾಗಿರುತ್ತವೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆಯನ್ನು ಈ ತಿಂಗಳು ಉದ್ಘಾಟಿಸಲಾಗಿದ್ದು ಸಾರ್ವಜನಿಕರಿಂದ ಸಹಾಯ ಹಾಗೂ ದೇಣಿಗೆಗಾಗಿ ವಿನಂತಿಸಿಕೊಳ್ಳಲಾಗಿದೆ. ಈ ಯೋಜನೆಗೆ  ಮಾನವೀಯ ನೆರವಿನ ರೂಪದಲ್ಲಿ ಕನಿಷ್ಠ 500 ರೂಪಾಯಿಯನ್ನು ಸಹ  ವ್ಯಕ್ತಿಗಳು ನೀಡಬಹುದಾಗಿದೆ.  

ದಾನಿಗಳು ಹಾಗೂ ಸಾರ್ವಜನಿಕರ ಮೂಲಕ ಸಂಗ್ರಹವಾಗುವ ಹಣವನ್ನು ಇಂಪಾಲ್ ಮಹಾಧರ್ಮಕ್ಷೇತ್ರಕ್ಕೆ  ವರ್ಗಾಯಿಸಲಾಗುತ್ತದೆ.

10 July 2024, 18:11