ನೈಜೀರಿಯಾ ದೇಶಕ್ಕೆ ರಾಯಭಾರಿಯನ್ನು ನೇಮಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಐರಿಷ್ ಮೂಲದ ಆರ್ಚ್'ಬಿಷಪ್ ಮೈಕೆಲ್ ಫ್ರಾನ್ಸಿಸ್ ಕ್ರಾಟ್ಟಿ ಅವರನ್ನು ನೈಜೀರಿಯಾ ದೇಶದ ಪ್ರೇಷಿತ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮಂಗಳವಾರ ಪೋಪ್ ಫ್ರಾನ್ಸಿಸ್ ಅವರು ಐರಿಷ್ ಮೂಲದ ಆರ್ಚ್'ಬಿಷಪ್ ಮೈಕೆಲ್ ಫ್ರಾನ್ಸಿಸ್ ಕ್ರಾಟ್ಟಿ ಅವರನ್ನು ನೈಜೀರಿಯಾ ದೇಶದ ನೂತನ ಪ್ರೇಷಿತ ರಾಯಭಾರಿಯನ್ನಾಗಿ ನೇಮಿಸಿದ್ದಾರೆ. ಆರ್ಚ್'ಬಿಷಪ್ ಮೈಕೆಲ್ ಫ್ರಾನ್ಸಿಸ್ ಅವರು ಈ ಹಿಂದೆ ನೈಜರ್ ಹಾಗೂ ಬುರ್ಕೀನಾ ಫಾಸೋ ದೇಶಗಳ ರಾಯಭಾರಿಯಾಗಿದ್ದ ಪರಿಣಾಮ, ಈ ಪ್ರದೇಶವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ.

ಆಫ್ರಿಕಾ ಖಂಡದಲ್ಲೇ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ನಂತರ ಅತ್ಯಂತ ಹೆಚ್ಚು ಕಥೋಲಿಕ ಜನಸಂಖ್ಯೆ ನೈಜೀರಿಯಾದಲ್ಲಿದೆ. ಇಲ್ಲಿ, ವಿಶೇಷವಾಗಿ ಉತ್ತರ ಭಾಗದಲ್ಲಿ ಕ್ರೈಸ್ತರ ಮೇಲೆ ಹಲವು ವರ್ಷಗಳಿಂದ ದಾಳಿ ನಡೆಯುತ್ತಿದೆ. ಹಲವಾರು ಬಾರಿ ಗುರುಗಳು ಹಾಗೂ ಕನ್ಯಾಸ್ತ್ರೀಯರನ್ನು ಅಪಹರಣ ಮಾಡುವ ಶಸ್ತ್ರಸಜ್ಜಿತ ಗುಂಪುಗಳು ಹಣಕ್ಕಾಗಿ ಬೇಡಿಕೆ ಇಡುತ್ತಾರೆ. 

16 July 2024, 16:10