ಗಾಜಾದ ಕಥೋಲಿಕ ಶಾಲೆಯ ಮೇಲೆ ದಾಳಿ ಮಾಡಿದ್ದಕ್ಕೆ ಖಂಡನೆ ವ್ಯಕ್ತಪಡಿಸಿರುವ ಜೆರುಸಲೇಮ್ ಪೇಟ್ರಿಯಾರ್ಕ್
ಗಾಜ ಪ್ರದೇಶದಲ್ಲಿ ಕಥೋಲಿಕ ಶಾಲೆಯ ಮೇಲೆ ನಡೆದ ಇಸ್ರೇಲ್ ದಾಳಿಯನ್ನು ಖಂಡಿಸಿರುವ ಜೆರುಸಲೇಮಿನ ಪೇಟ್ರಿಯಾರ್ಕ್ ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಲ್ಲಿ ನಾಗರೀಕರ ಮೇಲೆ ನಡೆಯುವ ದಾಳಿಯನ್ನು ಖಂಡಿಸಿದ್ದಾರೆ.
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಇಸ್ರೇಲಿ ಸೈನಿಕರು ಗಾಜಾಪ್ರದೇಶದಲ್ಲಿರುವ ಕತೋಲಿಕ ಶಾಲೆಯ ಮೇಲೆ ನಡೆಸಿರುವ ದಾಳಿಯನ್ನು ಜೆರುಸಲೇಮಿನ ಪೆಟ್ರಿಯಾರ್ ಅವರು ಖಂಡಿಸಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಎಂದಿಗೂ ಸಹ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಾಜಾ ಪ್ರದೇಶದಲ್ಲಿರುವ ಹೋಲಿ ಫ್ಯಾಮಿಲಿ ಕಥೋಲಿಕ ಶಾಲೆಯ ಮೇಲೆ ಇಸ್ರೇಲ್ ಸೇನೆಯು ದಾಳಿ ನಡೆಸಿದೆ. ಇಲ್ಲಿನ ಎರಡು ತರಗತಿಗಳ ಮೇಲೆ ದಾಳಿ ನಡೆದಿದ್ದು. ಇದರ ಉಸ್ತುವಾರಿಯನ್ನು ಹೊಂದಿದ್ದ ಹಮಾಸ್ ಗುಂಪಿನ ಉಪ ಕಾರ್ಮಿಕ ಸಚಿವನ ಹತ್ಯೆಯಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಜೆರುಸಲೇಮಿನ ಪೇಟ್ರಿಯಾರ್ಕ್ ಕಾರ್ಡಿನಲ್ ಪಿಯೆರ್ಬಟಿಸ್ಟಾ ಪಿಜಾಬುಲ್ಲಾ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾಗರೀಕರು ಯುದ್ಧ ಪ್ರದೇಶದಿಂದ ಹೊರಗಿರಬೇಕೆಂದು ಮನವಿ ಮಾಡುವ ಮೂಲಕ, ಅವರು ಸುರಕ್ಷಿತರಾಗಿರಬೇಕು ಎಂದು ಬಯಸಿದ್ದಾರೆ.
08 July 2024, 16:25