FILES-FRANCE-RELIGION-ART-CHRISTIANITY-ABUSE

ರೂಪ್ನಿಕ್ ಅವರ ಕಲೆಯ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು ಇದು ಸಕಾಲವಲ್ಲ: ಲೂರ್ದ್ಸ್ ನಗರದ ಬಿಷಪ್

ಫ್ರಾನ್ಸ್ ದೇಶದ ಲೂರ್ದ್ಸ್ ನಗರದ ಧರ್ಮಾಧ್ಯಕ್ಷರ ಜೆಸುಯಿಟ್ ಸಭೆಯ ಪಾದ್ರಿಯಾಗಿದ್ದ ಮಾರ್ಕೋ ರೂಪ್ನಿಕ್ ಅವರ ಕಲಾಚಿತ್ರಗಳ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದ್ದಾರೆ. ಫಾದರ್ ಮಾರ್ಕೋ ರೂಪ್ನಿಕ್ ಅವರ ಮೇಲೆ ಲೈಂಗಿಕ ಹಿಂಸಾಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಈ ಮಾತನ್ನು ಹೇಳಿದರು.

ವರದಿ: ವ್ಯಾಟಿಕನ್ ನ್ಯೂಸ್

ಫಾದರ್ ಮಾರ್ಕೋ ರೂಪ್ನಿಕ್ ಅವರು ಕಲಾವಿದರಾಗಿದ್ದು, ಅವರ ವಿವಿಧ ಕಲಾಕೃತಿಗಳನ್ನು ಲೂರ್ದುನಗರದ ಮಾತೆ ಮರಿಯಮ್ಮನವರ ಮ್ಯೂಸಿಯಂನಲ್ಲಿ ಇಡಲಾಗಿದೆ. ಇದೀಗ ಅವರ ಕಲಾಕೃತಿಗಳನ್ನು ಅಲ್ಲಿ ಇರಿಸುವ ಕುರಿತು ಮಿಶ್ರ ಪ್ರತಿಕ್ರಿಯೆ ಉಂಟಾಗಿದೆ. ಅವರ ಮೇಲೆ ಅನೇಕ ಹೆಣ್ಣು ಮಕ್ಕಳನ್ನು ಲೈಂಗಿಕ ಹಾಗೂ ಮಾನಸಿಕ ಶೋಷಣೆಗೆ ಒಳಪಡಿಸಿರುವ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಲೂರ್ದು ನಗರದ ಧರ್ಮಾಧ್ಯಕ್ಷರಾಗಿರುವ ಜಿಯಾನ್ ಮಾರ್ಕ್ ಮಿಕಾಸ್ ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸದರಿ ವಿಷಯದ ಕುರಿತು ನಿರ್ಧಾರವನ್ನು ಕೈಗೊಳ್ಳಲು ಇದು ಸಕಾಲವಲ್ಲ ಎಂದು ಹೇಳಿದ್ದಾರೆ.

03 July 2024, 18:29