ಪ್ರಧಾನಾಲಯವನ್ನು ಯುವ ಜನತೆಗಾಗಿ ಕ್ಯಾಂಪ್'ಸೈಟ್'ನ್ನಾಗಿಸಿದ ಸಿಯೋಲ್ ಮಹಾಧರ್ಮಕ್ಷೇತ್ರ

ದಕ್ಷಿಣ ಕೊರಿಯಾದ ಸಿಯೋಲ್ ಮಹಾಧರ್ಮಕ್ಷೇತ್ರವು ಮಯೋಂಗ್'ಡಾಂಗ್ ಪ್ರಧಾನಾಲಯದ ಹಿತ್ತಲ ಪ್ರದೇಶವನ್ನು ಯುವ ಜನತೆಗಾಗಿ ಕ್ಯಾಂಪ್ ಸೈಟನ್ನಾಗಿ ಪರಿವರ್ತಿಸಿ, ಇಲ್ಲಿ ಅವರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ವರದಿ: ಮಾರ್ಕ್ ಸಾಲುದೆಸ್, ಲಿಕಾಸ್ ನ್ಯೂಸ್

ದಕ್ಷಿಣ ಕೊರಿಯಾದ ಸಿಯೋಲ್ ಮಹಾಧರ್ಮಕ್ಷೇತ್ರವು ಮಯೋಂಗ್'ಡಾಂಗ್ ಪ್ರಧಾನಾಲಯದ ಹಿತ್ತಲ ಪ್ರದೇಶವನ್ನು ಯುವ ಜನತೆಗಾಗಿ ಕ್ಯಾಂಪ್ ಸೈಟನ್ನಾಗಿ ಪರಿವರ್ತಿಸಿ, ಇಲ್ಲಿ ಅವರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜೂನ್ ೨೮ ರಂದು ಮೊದಲ ಬಾರಿಗೆ "ಕ್ಯಾಂಪ್ ಆ್ಯಟ್ ಕೆಥೆಡ್ರಲ್" ಎಂಬ ಉಪಕ್ರಮ ನಡೆದಿದ್ದು, ಇದರಲ್ಲಿ ಸುಮಾರು ೬೦೦ ಯುವ ಜನರು ಪಾಲ್ಗೊಂಡು, ವಿವಿಧ ರೀತಿಯ ಸಂವಾದ ಹಾಗೂ ಇನ್ನಿತರ ಕೃತ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಇದನ್ನು ಯಶಸ್ವಿಗೊಳಿಸಿದ್ದಾರೆ.

ಸಂವಾದ ಹಾಗೂ ವಿವಿಧ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಧರ್ಮಸಭೆ ಹಾಗೂ ಯುವ ಜನತೆಯ ನಡುವೆ ಉತ್ತಮ ಭಾಂದವ್ಯವನ್ನು ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರಧಾನಾಲಯದ ಹಿತ್ತಲ ಪ್ರದೇಶವನ್ನು ಕ್ಯಾಂಪ್ ಸೈಟ್ ಅನ್ನಾಗಿ ಪರಿವರ್ತಿಸಿದ್ದು, ಹತ್ತತ್ತು ಜನ ಯುವ ಜನರನ್ನು ಗುಂಪುಗಳಾಗಿ ಕೂರಿಸಿ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು.

ಈ ಕ್ಯಾಂಪಿಂಗ್ ಕಾರ್ಯಕ್ರಮದಲ್ಲಿ ಸಿಯೋಲ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಅತಿ ವಂದನೀಯ ಪೀಟರ್ ಸೂನ್-ಟೆಕ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

01 July 2024, 17:28