ಯುದ್ಧದ ಕಾರಣ ತೀವ್ರ ಯಾತನೆಯ ಕುರಿತು ಸುಡಾನ್ ಧರ್ಮಾಧ್ಯಕ್ಷರ ಕಳವಳ
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಸುಡಾನ್ ದೇಶದಲ್ಲಿನ ಯುದ್ಧದ ಹಿನ್ನೆಲೆ ಉಂಟಾಗುತ್ತಿರುವ ತೀವ್ರ ಯಾತನೆಯ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಪ್ರಕಟಿಸಿರುವ ಸುಡಾನ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ಕಳವಳವನ್ನು ವ್ಯಕ್ತಪಡಿಸಿ, ಯುದ್ಧ ನಿಲ್ಲಿಸುವಿಕೆಗಾಗಿ ಮನವಿ ಮಾಡಿದೆ.
"ಪ್ರಸ್ತುತ ಸುಡಾನ್ ದೇಶದಲ್ಲಿ ಆಗುತ್ತಿರುವ ಘಟನೆಗಳಿಂದ ನಾವು ದೂರವಿರಲು ಅಥವಾ ನಮ್ಮನ್ನೇ ಪ್ರತ್ಯೇಕಿಸಿಕೊಳ್ಳಲು ಆಗುವುದಿಲ್ಲ" ಎಂದು ಸುಡಾನ್ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಸುಡಾನ್ ದೇಶದಲ್ಲಿ ನಡೆಯುತ್ತಿರುವ ಯುದ್ಧವು ಪ್ರಸ್ತುತ ಹದಿನೈದನೇ ತಿಂಗಳಿಗೆ ಕಾಲಿಟ್ಟಿದ್ದು, ಇದರಿಂದ ಪ್ರತಿ ದಿನ ಹಿಂಸಾಚಾರ ಹಾಗೂ ನೋವುಗಳು ಸಂಭವಿಸುತ್ತಿವೆ. ದಿನೇ ದಿನೇ ಹಿಂಸಾಚಾರ ಹಾಗೂ ದ್ವೇಷ ಎಂಬುದು ಕಳವಳಕಾರಿ ಹಂತಗಳಲ್ಲಿ ಏರಿಕೆಯಾಗುತ್ತಿದ್ದು, ಈ ಕುರಿತು ಕಥೋಲಿಕ ಧರ್ಮಾಧ್ಯಕ್ಷರುಗಳು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರೆದು ತಮ್ಮ ದೇಶಕ್ಕಾಗಿ ಮಿಡಿದಿರುವ ಹಾಗೂ ಸಹಾಯಾಸ್ತವನ್ನು ಚಾಚಿರುವ ಪೋಪ್ ಫ್ರಾನ್ಸಿಸ್ ಹಾಗೂ ವ್ಯಾಟಿಕನ್ ಪೀಠಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.