ಯುವ ಸಂವಾದಕ್ಕೆ ನೂತನ ಮಾರ್ಗಸೂಚಿಗಳನ್ನು ನೀಡಿದ ಇಂಡೋನೇಷಿಯಾ ಧರ್ಮಸಭೆ

ಇಂಡೋನೇಷಿಯಾ ಧರ್ಮಸಭೆಯ ಯುವ ಆಯೋಗವು ಪ್ರಸ್ತುತ ಸಂದರ್ಭದಲ್ಲಿ ಹೇಗೆ ಯುವ ಜನತೆಯೊಂದಿಗೆ ಸಂವಾದವನ್ನು ಏರ್ಪಡಿಸಬೇಕು ಹಾಗೂ ಅವರನ್ನು ಧರ್ಮಸಭೆಗೆ ಹತ್ತಿರವನ್ನಾಗಿಸಬೇಕು ಎಂಬ ಕುರಿತು ವಿವಿಧ ಉಪಕ್ರಮಗಳನ್ನು ಪ್ರಕಟಿಸಿದೆ.

ವರದಿ: ಲಿಕಾಸ್ ನ್ಯೂಸ್

ಜಕಾರ್ತಾದಲ್ಲಿನ ಇಂಡೋನೇಷಿಯಾ ಧರ್ಮಾಧ್ಯಕ್ಷರುಗಳ ಮಂಡಳಿಯ ಆವರಣದಲ್ಲಿ ಆಯೋಜಿಸಿದ್ದ ಇಂಡೋನೇಷಿಯಾ ಯುವ ಆಯೋಗದ ಸಮಾವೇಶದಲ್ಲಿ ಯುವ ಸಮೂಹವನ್ನು ಮತ್ತೆ ಧರ್ಮಸಭೆಯ ಕಡೆಗೆ ತರುವುದು ಹೇಗೆ ಎಂಬ ವಿವಿಧ ಅಂಶಗಳ ಕುರಿತು ಚರ್ಚೆ ಹಾಗೂ ಉಪನ್ಯಾಸಗಳು ನಡೆದವು. 

ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಪತ್ರ "ಕ್ರಿಸ್ತೂಸ್ ವಿವಿತ್" ರಿಂದ ಸ್ಪೂರ್ತಿಯನ್ನು ತೆಗೆದುಕೊಂಡು ಆರಂಭವಾದ ಈ ಸಭೆಯಲ್ಲಿ ಯುವ ಸಮೂಹವನ್ನು ಜೀವಂತ ಧರ್ಮಸಭೆಗೆ ಕರೆದುಕೊಂಡು ಬರುವಲ್ಲಿ ಅನುಸರಿಸಬೇಕಾದ ಮಾರ್ಗಗಳ ಕುರಿತು ಚರ್ಚೆ ನಡೆಯಿತು.

ಪ್ರಸ್ತುತ ಯುವ ಸಮೂಹವು ಒಳಗೊಂಡಿರುವ ಮಾನಸಿಕ ಕಷ್ಟಗಳು, ಆರ್ಥಿಕ ಸ್ಥಿತಿಗತಿಗಳು, ಹವ್ಯಾಸ ಹಾಗೂ ಅಭ್ಯಾಸಗಳ ಕುರಿತೂ ಸಹ ಇಲ್ಲಿ ಜಿಜ್ಞಾಸೆ ನಡೆದು, ಅವುಗಳನ್ನು ಪರಿಹರಿಸುವಲ್ಲಿಯೂ ಸಹ ಹಲವು ಮಾರ್ಗೋಪಾಯಗಳ ಕುರಿತು ಚಿಂತಿಸಲಾಯಿತು. ಒಟ್ಟಾರೆ ಸ್ಥಳೀಯ ಧರ್ಮಸಭೆಯಾಗಿ ತನ್ನ ಸಮಾಜದ ಯುವ ಸಮೂಹವನ್ನು ಹೇಗೆ ಧರ್ಮಸಭೆಗೆ ಕರೆತಂದು ಅಲ್ಲೇ ಉಳಿಯುವಂತೆ ಮಾಡಬೇಕು ಎಂಬ ನಾನಾ ರೀತಿಯ ಸಂವಾದಗಳು ನಡೆದವು. 

06 July 2024, 17:54