ಕಾರ್ಡಿನಲ್ ಬೋ: ಪೋಪ್ ಫ್ರಾನ್ಸಿಸ್ ಅವರ ಏಷ್ಯಾ ಭೇಟಿ ವಿಶ್ವಾಸ ಹಂಚಿಕೆಗೆ ಹೊಸ ತಿರುವನ್ನು ನೀಡಲಿದೆ

ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾ ಖಂಡದ ಇಂಡೋನೇಷಿಯಾ, ಓಶಿಯಾನ ಹಾಗೂ ಟಿಮೋರ್ ಲೆಸ್ಟೇ ಎಂಬ ದೇಶಗಳಿಗೆ ಪ್ರೇಷಿತ ಭೇಟಿಯನ್ನು ನೀಡಲಿದ್ದಾರೆ. ಈ ಕುರಿತು ಮಾತನಾಡಿರುವ ಫಿಲಿಪ್ಪೈನ್ಸ್ ದೇಶದ ಯಾಂಗೋನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಹಾಗೂ ಏಷ್ಯಾ ಖಂಡದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರು ಆದ ಕಾರ್ಡಿನಲ್ ಚಾರ್ಲ್ಸ್ ಮಾಂಗ್ ಬೋ ಅವರು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಭೇಟಿಯು ಏಷ್ಯಾ ಖಂಡದಲ್ಲಿ ವಿಶ್ವಾಸ ಪಸರಿಸಲು ಹೊಸ ಹೊಳಹನ್ನು ನೀಡಲಿದೆ ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೊ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಏಷ್ಯಾ ಖಂಡದ ಇಂಡೋನೇಷಿಯಾ, ಓಶಿಯಾನ ಹಾಗೂ ಟಿಮೋರ್ ಲೆಸ್ಟೇ ಎಂಬ ದೇಶಗಳಿಗೆ ಪ್ರೇಷಿತ ಭೇಟಿಯನ್ನು ನೀಡಲಿದ್ದಾರೆ. ಈ ಕುರಿತು ಮಾತನಾಡಿರುವ ಮ್ಯಾನ್ಮಾರ್ ದೇಶದ ಯಾಂಗೋನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಹಾಗೂ ಏಷ್ಯಾ ಖಂಡದ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಅಧ್ಯಕ್ಷರು ಆದ ಕಾರ್ಡಿನಲ್ ಚಾರ್ಲ್ಸ್ ಮಾಂಗ್ ಬೋ ಅವರು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರ ಭೇಟಿಯು ಏಷ್ಯಾ ಖಂಡದಲ್ಲಿ ವಿಶ್ವಾಸ ಪಸರಿಸಲು ಹೊಸ ಹೊಳಹನ್ನು ನೀಡಲಿದೆ ಎಂದು ಹೇಳಿದ್ದಾರೆ.

ವ್ಯಾಟಿಕನ್ ನ್ಯೂಸ್'ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕಾರ್ಡಿನಲ್ ಚಾರ್ಲ್ಸ್ ಮಾಂಗ್ ಬೋ ಅವರು ಏಷ್ಯಾದ ವಿವಿಧ ದೇಶಗಳಲ್ಲಿ ಕಥೋಲಿಕ ವಿಶ್ವಾಸವು ಮತ್ತಷ್ಟು ಆಳವಾಗಿ ಬೇರೂರಲು ರಾಜಕೀಯ, ಸಾಂಸ್ಕೃತಿಕ, ಭೌಗೋಳಿಕ ಹಾಗೂ ಆರ್ಥಿಕ ಸವಾಲುಗಳನ್ನು ಹೊಂದಿದ್ದರೂ ಸಹ, ಧರ್ಮಸಭೆ ಎಂಬುದು ಇಲ್ಲಿ ಜೀವಂತವಾಗಿದೆ. ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ದೇಶಗಳಿಗೆ ಭೇಟಿ ನೀಡುವುದರ ಮೂಲಕ ಇಲ್ಲಿನ ಜನತೆಯ ವಿಶ್ವಾಸಕ್ಕೆ ಹೊಸ ಹೊಳಹನ್ನು ನೀಡಲಿದ್ದಾರೆ ಎಂದು ಕಾರ್ಡಿನಲ್ ಬೋ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಈ ದೇಶಗಳಿಗೆ ಭೇಟಿ ನೀಡುವುದು ಐತಿಹಾಸಿಕವೆನಿಸಿಕೊಂಡಿದೆ.

 

16 August 2024, 18:40