ಕಾರ್ಡಿನಲ್ ಕೌಟ್ಸ್ ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರೀಕ ಗೌರವ
ವರದಿ: ಲಿಕಾಸ್ ನ್ಯೂಸ್
ಪಾಕಿಸ್ತಾನದ ಕರಾಚಿ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಜೋಸೆಫ್ ಕೌಟ್ಸ್ ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ತಮ್ಗ-ಇ-ಇಮ್ತಿಯಾಝ್ ಲಭಿಸಿದೆ. ಅಂತರ್-ಧರ್ಮೀಯ ಶಾಂತಿ ಹಾಗೂ ಸಾಮರಸ್ಯವನ್ನು ಮೂಡಿಸುವ ಹಿನ್ನೆಲೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಅವರಿಗೆ ಈ ಗೌರವವು ಒಲಿದು ಬಂದಿದೆ.
ಆಗಸ್ಟ್ ೧೪ ರಂದು ಪಾಕಿಸ್ತಾನವು ತನ್ನ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡ ಹಿನ್ನೆಲೆ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಪಾಕಿಸ್ತಾನಕ್ಕೆ ಉನ್ನತ ಕೊಡುಗೆಯನ್ನು ನೀಡಿರುವ ಹಲವಾರು ಜನರಿಗೆ ಅತ್ಯುನ್ನತ ನಾಗರೀಕ ಗೌರವವನ್ನು ಪ್ರಧಾನ ಮಾಡಲಾಯಿತು. ಪಾಕಿಸ್ತಾನ ದೇಶಕ್ಕೆ ಅತ್ಯುನ್ನತ ಸೇವೆ ಸಲ್ಲಿಸಿದ ಮಹನೀಯರಲ್ಲಿ ಕಾರ್ಡಿನಲ್ ಜೋಸೆಫ್ ಕೌಟ್ಸ್ ಅವರೂ ಸಹ ಸೇರಿದ್ದು, ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಝರ್ದಾರಿ ಅವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಪಾಕಿಸ್ತಾನ ಸರ್ಕಾರವು ತನ್ನ ದೇಶದ ಅಂತರ್-ಧರ್ಮೀಯ ಸಾಮರಸ್ಯಕ್ಕೆ ಕಾರ್ಡಿನಲ್ ಜೋಸೆಫ್ ಕೌಟ್ಸ್ ಅವರು ನೀಡಿರುವ ಕೊಡುಗೆಯನ್ನು ಈ ಮೂಲಕ ಸ್ಮರಿಸಿದೆ.