ಹುಡುಕಿ

ಕಾರ್ಡಿನಲ್ ಪಿಝಾಬಲ್ಲ: ನಾವೀಗ ಮಾಡಬೇಕಿರುವುದು ಶಾಂತಿ ಹಾಗೂ ಸಂಧಾನಕ್ಕಾಗಿ ಪ್ರಾರ್ಥಿಸುವುದು ಮಾತ್ರ

ಜೆರುಸಲೇಮಿನ ಪಿತೃಪ್ರಧಾನ (ಪೇಟ್ರಿಯಾರ್ಕ್) ರಾಗಿರುವ ಕಾರ್ಡಿನಲ್ ಪಿಯರ್ಬತ್ತಿಸ್ತಾ ಪಿಝಾಬಲ್ಲ ಅವರು ಸ್ವರ್ಗಸ್ವೀಕೃತ ಮಾತೆಯ ಮಹೋತ್ಸವಕ್ಕೆ ನೀಡಿರುವ ಸಂದೇಶದಲ್ಲಿ ನಾವೀಗ ಮಾಡಬೇಕಿರುವುದು ಶಾಂತಿ ಹಾಗೂ ಸಂಧಾನಕ್ಕಾಗಿ ಪ್ರಾರ್ಥಿಸುವುದು ಮಾತ್ರ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಜೆರುಸಲೇಮಿನ ಪಿತೃಪ್ರಧಾನ (ಪೇಟ್ರಿಯಾರ್ಕ್) ರಾಗಿರುವ ಕಾರ್ಡಿನಲ್ ಪಿಯರ್ಬತ್ತಿಸ್ತಾ ಪಿಝಾಬಲ್ಲ ಅವರು ಸ್ವರ್ಗಸ್ವೀಕೃತ ಮಾತೆಯ ಮಹೋತ್ಸವಕ್ಕೆ ನೀಡಿರುವ ಸಂದೇಶದಲ್ಲಿ ನಾವೀಗ ಮಾಡಬೇಕಿರುವುದು ಶಾಂತಿ ಹಾಗೂ ಸಂಧಾನಕ್ಕಾಗಿ ಪ್ರಾರ್ಥಿಸುವುದು ಮಾತ್ರ ಎಂದು ಹೇಳಿದ್ದಾರೆ.

ತಮ್ಮ ಸಂದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಯುದ್ಧದ ಕುರಿತು ಭೀತಿಯಿಂದ ಹಾಗೂ ಭಾವನಾತ್ಮಕವಾಗಿ ಮಾತನಾಡಿರುವ ಅವರು ಯುದ್ಧದಿಂದ ಸಾವಿರಾರು ಜನರು ತಮ್ಮದಲ್ಲದ ತಪ್ಪಿಗೆ ಸಾವನ್ನಪ್ಪಿದ್ದಾರೆ ಮಾತ್ರವಲ್ಲದೆ; ಮನೆ-ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಬದುಕನ್ನು ಅರಸಿ ಬಂದವರು ಎಲ್ಲವನ್ನೂ ಕಳೆದು ಕೊಂಡಿದ್ದಾರೆ. ಈ ಯುದ್ಧದಲ್ಲಿ ಮರೆಯಲಾಗದ ಸನ್ನಿವೇಷಗಳೆಂದರೆ ಮಕ್ಕಳ ಆಕ್ರಂದನ ಹಾಗೂ ನೋವು ಎಂದು ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಇದೇ ಸಂಧರ್ಭದಲ್ಲಿ ಅವರು ಬಳಲಿ ಬೆಂಡಾಗಿರುವ ಜನತೆಗೆ ಭರವಸೆಯನ್ನು ತುಂಬಿದ್ದು, ಎಂದಿಗೂ ವಿಶ್ವಾಸವನ್ನು ಕಳೆದುಕೊಳ್ಳಬೇಡಿ. ದೇವರು ನಮ್ಮೊಂದಿಗೆ ಇದ್ದಾರೆ. ಇಂತಹ ವಿಷಮ ಕಾಲಘಟ್ಟದಲ್ಲಿ ನಾವು ಮಾತೆ ಮರಿಯಮ್ಮನವರನ್ನು ಎಡೆಬಿಡದೆ ಪ್ರಾರ್ಥಿಸಬೇಕಿದೆ ಎಂದು ಹೇಳಿದರು.

10 August 2024, 16:14