ಹುಡುಕಿ

ಇರಾಕಿನ ಕಾರ್ಡಿನಲ್ ಸಾಕೋ: ಈ ಕೆಟ್ಟತನ ಮುಂದುವರಿಯುವುದಿಲ್ಲ

ಇಸ್ಲಾಮಿಕ್ ಸ್ಟೇಟ್ ಉಗ್ರರು ಕ್ರೈಸ್ತರನ್ನು ಹಾಗೂ ಯಾಜೀತಿಗಳನ್ನು ಇರಾಕಿನಲ್ಲಿ ಕೊಂದು ಹಾಕಿದ ಹಿನ್ನೆಲೆಯಲ್ಲಿ, ಹಿಂಸೆಯನ್ನು ಅನುಭವಿಸುತ್ತಿರುವ ಎಲ್ಲಾ ಇರಾಕಿಗಳು ಒಂದಾಗಿದ್ದಾರೆ ಎಂದು ಅಲ್ಲಿನ ಕಾರ್ಡಿನಲ್ ಸಾಕೋ ಅವರು ವ್ಯಾಟಿಕನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವರದಿ: ಸ್ಟೆಫಾನೋ, ಅಜಯ್ ಕುಮಾರ್

ಇಸ್ಲಾಮಿಕ್ ಸ್ಟೇಟ್ ಉಗ್ರರು ಕ್ರೈಸ್ತರನ್ನು ಹಾಗೂ ಯಾಜೀತಿಗಳನ್ನು ಇರಾಕಿನಲ್ಲಿ ಕೊಂದು ಹಾಕಿದ ಹಿನ್ನೆಲೆಯಲ್ಲಿ, ಹಿಂಸೆಯನ್ನು ಅನುಭವಿಸುತ್ತಿರುವ ಎಲ್ಲಾ ಇರಾಕಿಗಳು ಒಂದಾಗಿದ್ದಾರೆ ಎಂದು ಅಲ್ಲಿನ ಕಾರ್ಡಿನಲ್ ಸಾಕೋ ಅವರು ವ್ಯಾಟಿಕನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ನಾವು ಮರಣ ಹೊಂದಿದರೆ ದೇವರು ನಮ್ಮನ್ನು ನೀನು ಕ್ರೈಸ್ತನೋ ಅಥವಾ ಮುಸಲ್ಮಾನರು ಎಂದು ಕೇಳುವುದಿಲ್ಲ. ಬದಲಿಗೆ ನೀನು ನಿನ್ನ ಸಹೋದರನಿಗೆ ಏನು ಮಾಡಿದೆ ಎಂಬುದನ್ನು ಕೇಳುತ್ತಾರೆ" ಎಂದು ಕಾರ್ಡಿನಲ್ ಸಾಕೋ ಅವರು ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿಯ ಪರಿಣಾಮ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕ್ರೈಸ್ತರು ತಮ್ಮ ವಾಸಸ್ಥಾನವನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಕಾರ್ಡಿನಲ್ ಸಾಕೋ ಅವರು ಕೆಟ್ಟತನ ಎಂದಿಗೂ ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ.

08 August 2024, 18:31