ಕಾರ್ಡಿನಲ್ ಸಾಕೋ: 2014 ರ ಇರಾಕ್ ದುರಂತದಿಂದ ಮಧ್ಯಪ್ರಾಚ್ಯ ಇನ್ನೂ ನರಳುತ್ತಿದೆ

ಇರಾಕ್ ದೇಶವನ್ನು ಹತ್ತು ವರ್ಷಗಳ ಹಿಂದೆ ಐಸಿಸ್ ಉಗ್ರರು ವಶಪಡಿಸಿಕೊಂಡ ದಿನವನ್ನು ಸ್ಮರಿಸಿದ ಬಾಗ್ದಾದಿನ ಚಾಲ್ಡಿಯನ್ ಪೇಟ್ರಿಯಾರ್ಕ್ ಕಾರ್ಡಿನಲ್ ಸಾಕೋ ಅವರು ಕ್ರೈಸ್ತರು, ಯೆಹೂದ್ಯರು, ಮುಸ್ಲೀಮರೂ ಸೇರಿದಂತೆ ವಿವಿಧ ಧರ್ಮಗಳ ಜನರನ್ನು ಯಾವುದೇ ರೀತಿಯ ಮೂಲಭೂತವಾದದ ವಿರುದ್ಧ ಧ್ವನಿಯೆತ್ತುವಂತೆ ಕರೆ ನೀಡಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಇರಾಕ್ ದೇಶವನ್ನು ಹತ್ತು ವರ್ಷಗಳ ಹಿಂದೆ ಐಸಿಸ್ ಉಗ್ರರು ವಶಪಡಿಸಿಕೊಂಡ ದಿನವನ್ನು ಸ್ಮರಿಸಿದ ಬಾಗ್ದಾದಿನ ಚಾಲ್ಡಿಯನ್ ಪೇಟ್ರಿಯಾರ್ಕ್ ಕಾರ್ಡಿನಲ್ ಸಾಕೋ ಅವರು ಕ್ರೈಸ್ತರು, ಯೆಹೂದ್ಯರು, ಮುಸ್ಲೀಮರೂ ಸೇರಿದಂತೆ ವಿವಿಧ ಧರ್ಮಗಳ ಜನರನ್ನು ಯಾವುದೇ ರೀತಿಯ ಮೂಲಭೂತವಾದದ ವಿರುದ್ಧ ಧ್ವನಿಯೆತ್ತುವಂತೆ ಕರೆ ನೀಡಿದ್ದಾರೆ.   

ಐಸಿಸ್ ಉಗ್ರರು ಯಾಜಿದಿ ನರಮೇಧವನ್ನು ಮಾಡುವ ಮೂಲಕ ಕ್ರೈಸ್ತರನ್ನು ಗುರಿಪಡಿಸಿ, ಅವರ ಮೇಲೆ ನಡೆಸಿದ ದಾಳಿಗಳನ್ನು ಕಾರ್ಡಿನಲ್ ಸಾಕೋ ಅವರು ನೆನಪಿಸಿಕೊಂಡರು.

ಇದಾದ ಹತ್ತು ವರ್ಷಗಳ ನಂತರವೂ ಸಹ ಕ್ರೈಸ್ತರೂ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಜೀವಿಸುತ್ತಿರುವ ಜನರು ಭಯದಿಂದ ಬದುಕುತ್ತಿದ್ದಾರೆ ಎಂದು ಕಾರ್ಡಿನಲ್ ಸಾಕೋ ಅವರು ಹೇಳಿದ್ದಾರೆ. ಇವೆಲ್ಲಕ್ಕೂ ಕಾರಣ ಯಾವುದೇ ಮೂಲಭೂತವಾದ ಎಂದಿರುವ ಅವರು ಅದರ ವಿರುದ್ಧ ಎಲ್ಲರೂ ನಿಲ್ಲುವಂತೆ ಹಾಗೂ ದನಿಗೂಡಿಸುವಂತೆ ಕರೆ ನೀಡಿದ್ದಾರೆ.. 

10 August 2024, 16:34