ಕಾರ್ಡಿನಲ್ ಮತ್ತಿಯೋ ಝುಪ್ಪಿ ಕಾರ್ಡಿನಲ್ ಮತ್ತಿಯೋ ಝುಪ್ಪಿ  (ANSA)

ಕಾರ್ಡಿನಲ್ ಝುಪ್ಪಿ: ಕ್ಷಮೆ ಮತ್ತು ನ್ಯಾಯ ಶಾಂತಿಯ ಹಾದಿಗಳು

ರಿಮಿನಿ ನಗರಕ್ಕೆ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಭೇಟಿ ನೀಡಿದ ಬೊಲೋಗ್ನಾ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರೂ ಹಾಗೂ ಇಟಲಿಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರೂ ಆದ ಕಾರ್ಡಿನಲ್ ಮತ್ತಿಯೋ ಝುಪ್ಪಿ ಅವರು ವ್ಯಾಟಿಕನ್ ಸ್ಟುಡಿಯೋಗಳಿಗೆ ಭೇಟಿ ನೀಡಿ, ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಅವರು ವಿಶ್ವದಲ್ಲಿ ಶಾಂತಿ ಮೂಡಬೇಕೆಂದರೆ ಅದಕ್ಕೆ ಕ್ಷಮೆ ಮತ್ತು ನ್ಯಾಯ ಎಂಬ ಎರಡು ಹಾದಿಗಳು ಒಂದುಗೂಡಬೇಕಿದೆ ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮೊದಲು ನಮ್ಮ ನೆರೆಹೊರೆಯವರೊಂದಿಗೆ ನಾವು ಸೋದರತೆಯಿಂದ ಇದ್ದರೆ ಮಾತ್ರ ವಿಶ್ವದಲ್ಲಿ ಶಾಂತಿಯನ್ನು ಮೂಡಿಸಲು ಸಾಧ್ಯ ಎಂದು ಕಾರ್ಡಿನಲ್ ಝುಪ್ಪಿ ಅಭಿಪ್ರಾಯ ಪಟ್ಟಿದ್ದಾರೆ.

ಮುಂದುವರೆದು ಮಾತನಾಡಿದ ಅವರು ವಿಶ್ವದ ಎಲ್ಲಾ ಧರ್ಮಗಳೂ ಸಹ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮೂಲಭೂತ ಕರ್ತವ್ಯಗಳನ್ನು ಹೊಂದಿವೆ. ಸಂಧಾನ ಕ್ರಿಯೆಯ ಮೂಲಕ ಮಾತ್ರ ನಾವು ಶಾಂತಿಯನ್ನು ಸ್ಥಾಪಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ. 

ಕ್ರೈಸ್ತರಾದ ನಾವೆಲ್ಲರೂ ವಿಶ್ವದಲ್ಲಿ ಯುದ್ಧ, ಹಿಂಸೆ, ಬಡತನ, ಅನ್ಯಾಯ, ಮೋಸ, ದ್ವೇಷ ಮುಂತಾದ ಅಂಶಗಳನ್ನು ಪ್ರೇರೇಪಿಸುವಂತಹ ಶಿಕ್ಷಣವನ್ನು ಕೊನೆಗಾಣಿಸಿ, ಅದಕ್ಕೆ ತದ್ವಿರುದ್ಧವಾಗಿ ಪ್ರೀತಿ ಹಾಗೂ ಶಾಂತಿಯ ಶಿಕ್ಷಣವನ್ನು ಕಲಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.    

25 August 2024, 17:18