ಶೋಷಿತ ಸಮುದಾಯಗಳ ಮೇಲೆ "ನೂತನ ಕಾನೂನುಗಳ" ಪರಿಣಾಮದ ಕುರಿತು ಎಚ್ಚರಿಕೆ ನೀಡಿರುವ ಭಾರತದ ಕಥೋಲಿಕ ವಕೀಲರು
ವರದಿ: ಕ್ಯಾಥೋಲಿಕ್ ಕನೆಕ್ಟ್
ವಕೀಲರಾಗಿರುವ ಕಥೋಲಿಕ ಗುರುಗಳು ಹಾಗೂ ಕನ್ಯಾಸ್ತ್ರೀಯರನ್ನೊಳಗೊಂಡ ಡೆಲ್ಲಿ ಕ್ಯಾಥೊಲಿಕ್ ಲಾಯರ್ಸ್ ಫೋರಂ ಇತ್ತೀಚೆಗೆ ಭಾರತದಲ್ಲಿ ಜಾರಿಯಾದ ನೂತನ ಕಾನೂನುಗಳು ಶೋಷಿತ ವರ್ಗಗಳ ಮೇಲೆ ಬೀರುವ ಪರಿಣಾಮವನ್ನು ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.
ಈ ವಕೀಲರುಗಳ ವೇದಿಕೆಯು ನೂತನ ಕಾನೂನುಗಳು ಬೀರಲಿರುವ ಪರಿಣಾಮದ ಕುರಿತು ದಲಿತರಿಗೆ, ಆದಿವಾಸಿಗಳಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಮಾಹಿತಿ ನೀಡುವ ಗುರಿಯನ್ನು ಹೊಂದಿದೆ. ದೆಹಲಿಯ ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಈ ವೇದಿಕೆಯು ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.
ಈ ವಿಚಾರ ಸಂಕಿರಣದಲ್ಲಿ ನೂತನವಾಗಿ ಜಾರಿಗೆ ಬಂದಿರುವ ಕಾನೂನುಗಳನ್ನು ಬಲಪಂಥೀಯ ಗುಂಪುಗಳು ಅಲ್ಪಸಂಖ್ಯಾತರು ಹಾಗೂ ಶೋಷಿತ ವರ್ಗಗಳ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು ಎಂಬ ಭಯಮಿಶ್ರಿತ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಭಾರತದಾದ್ಯಂತ ಅನೇಕ ಧರ್ಮಕ್ಷೇತ್ರಗಳ ಸುಮಾರು ನೂರಕ್ಕೂ ಹೆಚ್ಚು ವಕೀಲರಾದ ಗುರುಗಳು ಹಾಗೂ ಧಾರ್ಮಿಕ ಸಹೋದರ ಸಹೋದರಿಯರು ಬಡವರಿಗೆ ಹಾಗೂ ಕೈಲಾಗದವರಿಗೆ ಉಚಿತ ಕಾನೂನು ನೆರವನ್ನು ನೀಡುತ್ತಿದ್ದಾರೆ.