ಢಾಕಾ ಆರ್ಚ್'ಬಿಷಪ್: ಒಂದು ಮಿಲಿಯನ್'ಗೂ ಅಧಿಕ ಜನರ ಮನೆಗಳು ಜಲಾವೃತವಾಗಿವೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಬಾಂಗ್ಲಾದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು ಸುಮಾರು ಒಂದು ಮಿಲಿಯನ್ನಿಗೂ ಅಧಿಕ ಜನರ ಮನೆಗಳು ಜಲಾವೃತವಾಗಿವೆ ಎಂದು ಧಾಕಾದ ಆರ್ಚ್'ಬಿಷಪ್ ಬೆಜೋಯ್ ಎನ್. ಡಿಕ್ರುಜ್, ಓ.ಎಂ.ಐ ಅವರು ತಿಳಿಸಿದ್ದಾರೆ. ಇಲ್ಲಿನ ರೋಹಿಂಗ್ಯಾ ಸಮುದಾಯ ಸಂಕಷ್ಟದಲ್ಲಿದ್ದರೂ ಸಹ ಪೋಪ್ ಫ್ರಾನ್ಸಿಸ್ ಅವರು ವ್ಯಕ್ತಪಡಿಸಿದ ಐಕ್ಯತೆ ಹಾಗೂ ಪ್ರಾರ್ಥನೆಗೆ ಆಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ.
"ಪೋಪ್ ಫ್ರಾನ್ಸಿಸ್ ಅವರಿಗೆ ಇಲ್ಲಿನ ರೋಹಿಂಗ್ಯಾ ಸಮುದಾಯದ ಮೇಲೆ ಕಾಳಜಿ ಹಾಗೂ ಪ್ರೀತಿಯಿದೆ. ಅವರು ತಮ್ಮ ಐಕ್ಯತೆಯನ್ನು ಈ ಸಮುದಾಯದೊಂದಿಗೆ ವ್ಯಕ್ತಪಡಿಸಿದ್ದಾರೆ ಎಂದು ಆರ್ಚ್'ಬಿಚಪ್ ಡಿ'ಕ್ರೂಝ್ ಅವರು ವ್ಯಾಟಿಕನ್ ನ್ಯೂಸ್'ಗೆ ಹೇಳಿದ ಸುದ್ದಿ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ.
ವ್ಯಾಟಿಕನ್ನಿಗೆ ನೀಡಿದ ಸಂದರ್ಶನದಲ್ಲಿ ಪ್ರಸ್ತುತ ಭಾಂಗ್ಲಾದೇಶದ ಸ್ಥಿತಿಗತಿಗಳ ಕುರಿತು ಮಾತನಾಡಿರುವ ಅವರು ಪ್ರಸ್ತುತ ಇಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಸುಮಾರು ಒಂದು ಮಿಲಿಯನ್ನಿಗೂ ಅಧಿಕ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅವರ ಮನೆಗಳಿಗೆ ನೀರು ನುಗ್ಗಿ ಅವು ಜಲಾವೃತವಾಗಿರುವ ಕಾರಣ ಬಹಳಷ್ಟು ನೋವನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.