ಭೂಕುಸಿತದ ಸಂತ್ರಸ್ಥರಿಗೆ ಪರಿಹಾರ ಕೇಂದ್ರಗಳನ್ನು ಆರಂಭಿಸಿದ ಭಾರತದ ಧರ್ಮಕ್ಷೇತ್ರ
ವರದಿ: ಲಿಕಾಸ್ ನ್ಯೂಸ್
ಕೇರಳದ ಕ್ಯಾಲಿಕಟ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿರುವ ಬಿಷಪ್ ವರ್ಗೀಸ್ ಚಕ್ಕಲಕ್ಕಲ್ ಅವರು ಭೂಕುಸಿತದ ಸಂತ್ರಸ್ಥರಿಗಾಗಿ ತಾತ್ಕಾಲಿಕವಾಗಿ ಚರ್ಚುಗಳನ್ನು ಹಾಗೂ ಕಥೋಲಿಕ ಶಾಲಾ ಕಾಲೇಜುಗಳನ್ನು ಪರಿಹಾರ ಕೇಂದ್ರಗಳನ್ನಾಗಿ ಮಾರ್ಪಡಿಸುವಂತೆ ಕರೆ ನೀಡಿದ್ದಾರೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವೆಡೆ ಭೂಕುಸಿತ ಉಂಟಾಗಿದ್ದು, ಇದರಿಂದ ಸುಮಾರು ಐನೂರಕ್ಕೂ ಹೆಚ್ಚು ಜನರು ಮೃತಹೊಂದಿದ್ದಾರೆ. ಸಾವಿರಾರು ಜನರು ಇದರಿಂದ ನಿರಾಶ್ರಿತರಾಗಿದ್ದು, ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ.
ಜನರ ರಕ್ಷಣೆ ಹಾಗೂ ಅವರ ಪುನರ್ವಸತಿಗೆ ಮುಂದಾಗಿರುವ ಕೇರಳದ ಕ್ಯಾಲಿಕಟ್ ಕಥೋಲಿಕ ಧರ್ಮಕ್ಷೇತ್ರವು ತನ್ನ ವ್ಯಾಪ್ತಿಯ ಚರ್ಚುಗಳು ಹಾಗೂ ಶಾಲಾ ಕಾಲೇಜುಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನಾಗಿ ರೂಪಿಸುವಂತೆ ಕರೆ ನೀಡಿದೆ.
ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ಮೃತ ಕುಟುಂಬಗಳ ಜೊತೆಗೆ ಐಕ್ಯತೆಯನ್ನು ವ್ಯಕ್ತಪಡಿಸಿ, ಅವರಿಗೆ ನೆರವನ್ನು ನೀಡುವುದಾಗಿ ಘೋಷಿಸಿದೆ.