ಹುಡುಕಿ

ಜೆರುಸಲೇಮಿನ ಪೇಟ್ರಿಯಾರ್ಕೇಟ್ (ಧರ್ಮಕ್ಷೇತ್ರ) ಯುದ್ಧದಿಂದ ನೋವು ಅನುಭವಿಸಿದ ಕ್ರೈಸ್ತರಿಗೆ ನೆರವಾಗುತ್ತಿದೆ.

ಜೆರುಸಲೇಮಿನ ಪೇಟ್ರಿಯಾರ್ಕೇಟ್ ಧರ್ಮಕ್ಷೇತ್ರವು ಕಳೆದ ವರ್ಷ ಅಕ್ಟೋಬರ್ ತಿಂಗಳಿಂದ ಈವರೆಗೂ ಪ್ಯಾಲೆಸ್ತೀನ್ ಯುದ್ಧದಿಂದ ನಿರಾಶ್ರಿತರಾಗಿರುವ ಹಾಗೂ ಒಂದಲ್ಲ ಒಂದು ರೀತಿಯಲ್ಲಿ ನೋವನ್ನು ಅನುಭವಿಸುತ್ತಿರುವ ಜನತೆಗೆ ವಿಶ್ವಧರ್ಮಸಭೆಯ ನೆರವಿನಿಂದ ಆದಷ್ಟು ರೀತಿಯಲ್ಲಿ ಸಹಾಯಮಾಡುತ್ತಿದೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಹಮಾಸ್ ಹಾಗೂ ಇಸ್ರೇಲ್ ಸೇನೆ ನಡುವೆ ಕಳೆದ ಹನ್ನೊಂದು ತಿಂಗಳಿನಿಂದ ಯುದ್ಧ ನಡೆಯುತ್ತಲೇ ಇದೆ. ಈ ಯುದ್ಧವು ಪ್ಯಾಲೆಸ್ತೇನಿನ ಜನತೆಯ ಮೇಲೆ ನೇರ ಪರಿಣಾಮವನ್ನು ಬೀರಿದ್ದು, ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ.

ಜೆರುಸಲೇಮಿನ ಪೇಟ್ರಿಯಾರ್ಕೇಟ್ ಧರ್ಮಕ್ಷೇತ್ರವು ಕಳೆದ ವರ್ಷ ಅಕ್ಟೋಬರ್ ತಿಂಗಳಿಂದ ಈವರೆಗೂ ಪ್ಯಾಲೆಸ್ತೀನ್ ಯುದ್ಧದಿಂದ ನಿರಾಶ್ರಿತರಾಗಿರುವ ಹಾಗೂ ಒಂದಲ್ಲ ಒಂದು ರೀತಿಯಲ್ಲಿ ನೋವನ್ನು ಅನುಭವಿಸುತ್ತಿರುವ ಜನತೆಗೆ ವಿಶ್ವಧರ್ಮಸಭೆಯ ನೆರವಿನಿಂದ ಆದಷ್ಟು ರೀತಿಯಲ್ಲಿ ಸಹಾಯಮಾಡುತ್ತಿದೆ.

ಕೋರೋನಾ ಸಾಂಕ್ರಮಿಕದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದ ಪ್ಯಾಲೆಸ್ತೀನ್ ಜನತೆಗೆ ಈ ಯುದ್ಧವು ಬರಸಿಡಿಲಂತೆ ಬಡಿದಿದ್ದು, ಈಗಾಗಲೇ ಅನುಭವಿಸಿದ ನೋವುಗಳನ್ನು ಮತ್ತೆ ಅನುಭವಿಸುವಂತೆ ಮಾಡಿದೆ. ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧವು ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಇದರಿಂದ ಲಕ್ಷಾಂತರ ಜನರ ಬದುಕು ನಿಂತ ನೀರಾಗಿದೆ.

ಹೀಗೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಜೆರುಸಲೇಮಿನ ಲ್ಯಾಟಿನ್ ಪೇಟ್ರಿಯಾರ್ಕೇಟ್ (ಧರ್ಮಕ್ಷೇತ್ರವು) ಕಾರ್ಡಿನಲ್ ಫಿಝಾಬಲ್ಲ ಅವರ ನೇತೃತ್ವದಲ್ಲಿ ನೊಂದಿರುವ ಜನತೆಗೆ ವಿವಿಧ ರೀತಿಯ ಮಾನವ ನೆರವನ್ನು ನೀಡಿದೆ ಮಾತ್ರವಲ್ಲದೆ; ತನ್ನ ಸೇವಾಕಾರ್ಯಗಳನ್ನು ಇಂದಿಗೂ ಸಹ ಮುಂದುವರೆಸಿದೆ.

29 August 2024, 17:47