ಹುಡುಕಿ

ಭೂಕುಸಿತ: ತಾತ್ಕಾಲಿಕ ಆಸ್ಪತ್ರೆಗಳು ಹಾಗೂ ಆಶ್ರಯತಾಣಗಳಾದ ಕೇರಳದ ಚರ್ಚ್ ಹಾಗೂ ಮಸೀದಿಗಳು

ಭಾರತದ ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಭೂಕುಸಿತದ ಪರಿಣಾಮ ಸುಮಾರು 224 ಕ್ಕೂ ಹೆಚ್ಚು ಜನರು ಮೃತ ಹೊಂದಿದು ಹಲವರು ಕಾಣೆಯಾಗಿದ್ದಾರೆ. ಮೃತ ಹೊಂದಿದವರ ದೇಹಗಳನ್ನು ಹೊರತೆಗೆಯಲು ಸರ್ಕಾರವು ಹರಸಾಹಸ ಮಾಡುತ್ತಿದ್ದು, ಕಾಣೆಯಾಗಿರುವವರನ್ನು ಹುಡುಕಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ನಡುವೆ ಇದರಿಂದ ಕಂಗೆಟ್ಟು, ನಿರಾಶ್ರಿತರಾಗಿರುವವರಿಗೆ ಹಾಗೂ ಅಸ್ವಸ್ಥವಾಗಿರುವವರಿಗಾಗಿ ಚರ್ಚುಗಳು ಹಾಗೂ ಮಸೀದಿಗಳು ತಾತ್ಕಾಲಿಕ ಆಸ್ಪತ್ರೆಗಳು ಹಾಗೂ ಆಶ್ರಯ ತಾಣಗಳಾಗಿ ರೂಪುಗೊಂಡಿವೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಈ ಪ್ರದೇಶದಲ್ಲಿ ಭೀಕರ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಸುಮಾರು ಐದು ಸಾವಿರ ಜನರನ್ನು ಗುಡ್ಡಗಾಡು ಹಾಗೂ ಕಣಿವೆ ಪ್ರದೇಶಗಳಿಂದ ಸ್ಥಳಾಂತರಿಸಿ ರಕ್ಷಿಸಲಾಗಿದೆ. ಕಾಣದೆ ಹೋದ ವ್ಯಕ್ತಿಗಳಿಗಾಗಿ ತೀವ್ರ ಹುಡುಕಾಟ ಮುಂದುವರೆದಿದೆ ಎಂದು ಕೇರಳ ಸರ್ಕಾರವು ತಿಳಿಸಿದೆ. ತೀವ್ರ ಭೂಕುಸಿತದ ಪರಿಣಾಮ ಸುಮಾರು 224 ಕ್ಕೂ ಹೆಚ್ಚು ಜನರು ಮೃತ ಹೊಂದಿದು ಹಲವರು ಕಾಣೆಯಾಗಿದ್ದಾರೆ. ಮೃತ ಹೊಂದಿದವರ ದೇಹಗಳನ್ನು ಹೊರತೆಗೆಯಲು ಸರ್ಕಾರವು ಹರಸಾಹಸ ಮಾಡುತ್ತಿದ್ದು, ಕಾಣೆಯಾಗಿರುವವರನ್ನು ಹುಡುಕಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕೇರಳದ ಕಥೋಲಿಕ ಧರ್ಮಾಧ್ಯಕ್ಷರು ಸೇರಿದಂತೆ ಭಾರತದ ಧರ್ಮಸಭೆಯು ಮೃತ ಹೊಂದಿದವರ ಕುಟುಂಬಗಳಿಗೆ ಸಾಂತ್ವನ ಹಾಗೂ ಐಕ್ಯತೆಯನ್ನು ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಡೆ ಕೇರಳಕ್ಕಾಗಿ ಪ್ರಾರ್ಥಿಸುವಂತೆ ಮನವಿಗಳು ಹರಿದು ಬರುತ್ತಿವೆ.

01 August 2024, 15:50