ಪ್ಯಾರಿಸ್ ಒಲಂಪಿಕ್ಸ್'ನಲ್ಲಿ ಸೋದರತ್ವವನ್ನು ಆಚರಿಸಲು ಒಗ್ಗೂಡಿದ ವಿಶ್ವದ ಐದು ಪ್ರಧಾನ ಧರ್ಮಗಳು

ಪ್ಯಾರಿಸ್ ಒಲಂಪಿಕ್ಸ್ ಹಿನ್ನೆಲೆ ಸೋದರತ್ವವನ್ನು ಆಚರಿಸಲು ವಿಶ್ವದ ಐದು ಪ್ರಧಾನ ಧರ್ಮಗಳು ಪ್ಯಾರಿಸ್ ನಗರದ ವಿಶ್ವವಿಖ್ಯಾತ ನೋಟ್ರೆ ಡೇಮ್ ಕ್ಯಾಥೆಡ್ರಲ್ ಆವರಣದಲ್ಲಿ ಒಗ್ಗೂಡಿದ್ದು ವಿಶೇಷ ಕ್ಷಣವಾಗಿದೆ.

ವರದಿ: ಝಿಯಾನ್ ಬೆನ್ವಾ, ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಪ್ಯಾರಿಸ್ ಒಲಂಪಿಕ್ಸ್ ಹಿನ್ನೆಲೆ ಸೋದರತ್ವವನ್ನು ಆಚರಿಸಲು ವಿಶ್ವದ ಐದು ಪ್ರಧಾನ ಧರ್ಮಗಳು ಪ್ಯಾರಿಸ್ ನಗರದ ವಿಶ್ವವಿಖ್ಯಾತ ನೋಟ್ರೆ ಡೇಮ್ ಕ್ಯಾಥೆಡ್ರಲ್ ಆವರಣದಲ್ಲಿ ಒಗ್ಗೂಡಿದ್ದು ವಿಶೇಷ ಕ್ಷಣವಾಗಿದೆ. 

ಪ್ಯಾರಿಸ್ ಒಲಂಪಿಕ್ ಕ್ರೀಡಾಕೂಟಕ್ಕೆ ವ್ಯಾಟಿಕನ್ನಿನ ವಿಶೇಷ ಪ್ರತಿನಿಧಿಯಾಗಿರುವ ಬಿಷಪ್ ಇಮ್ಯಾನುವೇಲ್ ಗೋಬಿಲಿಯಾರ್ಡ್ ಅವರು ಈ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಾಟಿಕನ್ ನ್ಯೂಸ್'ನೊಂದಿಗೆ ಹಂಚಿಕೊಂಡಿದ್ದಾರೆ.

ಪ್ಯಾರಿಸ್ ನಗರದ ವಿಶ್ವವಿಖ್ಯಾತ ನೋಟ್ರೆ ಡೇಮ್ ಕ್ಯಾಥೆಡ್ರಲ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು ವಿಶ್ವ ಸೋದರತ್ವದ ಕುರಿತು ಬೆಳಕು ಚೆಲ್ಲಿದೆ.

ಕಥೋಲಿಕ ಧರ್ಮಸಭೆ, ವಿವಿಧ ಕ್ರೈಸ್ತ ಪಂಗಡಗಳ ಒಕ್ಕೂಟ, ಇಸ್ಲಾಂ, ಬೌದ್ಧ, ಯೆಹೂದಿ ಹಾಗೂ ಹಿಂದೂ ಧರ್ಮಗಳ ವಿವಿಧ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ಧರ್ಮಾತೀತವಾಗಿ ವಿಶೇಷವಾಗಿ ಕ್ರೀಡೆಗಳಲ್ಲಿ ಸೋದರತ್ವ ಮನೋಭಾವವನ್ನು ಉತ್ತೇಜಿಸಬೇಕು ಎಂದು ಅಭಿಪ್ರಾಯ ಪಟ್ಟರು.   

05 August 2024, 18:57