ನಿಕರಾಗುವಾದ ಮಟಗಲ್ಪ ಸೆಮಿನರಿಯ ರೆಕ್ಟರ್ ಬಂಧನ
ನಿಕರಾಗುವಾ ದೇಶದ ಮಟಗಲ್ಪ ಧರ್ಮಕ್ಷೇತ್ರದ ಸೆಮಿನರಿಯ ರೆಕ್ಟರ್ ಹಾಗೂ ಗ್ವಾಡಲುಪೆ ಮಾತೆಯ ದೇವಾಲಯದ ಧರ್ಮಕೇಂದ್ರದ ಗುರುವಾಗಿರುವ ಫಾದರ್ ಜರ್ವಿನ್ ಟೋರೆಝ್ ಅವರನ್ನು ನಿಕರಾಗುವಾದ ಅಧಿಕಾರಿಗಳು ಬಂಧಿಸಿದ್ದು, ಆಗಸ್ಟ್ ಐದನೇ ತಾರೀಖಿನಿಂದ ಅವರು ಜೈಲಿನಲ್ಲಿದ್ದಾರೆ. ಮುಂದುವರೆದು, ಒಬ್ಬ ಕಥೋಲಿಕ ಶ್ರೀಸಾಮಾನ್ಯ ಮಹಿಳೆಯನ್ನೂ ಸಹ ಬಂಧಿಸಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್

ನಿಕರಾಗುವಾ ದೇಶದಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು ಹದಿಮೂರು ಗುರುಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೊಲಾಂಡ್ಸ್ ಅಲ್ವಾರೆಝ್ ಅವರನ್ನು ಈ ವರ್ಷದ ಜನವರಿ ತಿಂಗಳಿದ ಗಡಿಪಾರು ಮಾಡಲಾಗಿದೆ.
ಕಳೆದ ವರ್ಷ ತನ್ನ ದೇಶದಲ್ಲಿನ ಎಲ್ಲಾ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚುವಂತೆ ನಿಕರಾಗುವ ದೇಶವು ಪವಿತ್ರ ಪೀಠಕ್ಕೆ ಹೇಳಿತ್ತು.
06 August 2024, 18:37