ಹುಡುಕಿ

ಏಳು ಗುರುಗಳನ್ನು ರೋಮ್ ನಗರಕ್ಕೆ ಗಡಿಪಾರು ಮಾಡಿದ ನಿಕರಾಗುವ

ಗುರುಗಳನ್ನು ಬಂಧಿಸುವ ಪ್ರಕರಣಗಳ ಹಿನ್ನೆಲೆಯಲ್ಲಿ, ನಿಕರಾಗುವ ದೇಶವು ಇದೀಗ ಏಳು ಕಥೋಲಿಕ ಗುರುಗಳನ್ನು ರೋಮ್ ನಗರಕ್ಕೆ ಗಡಿಪಾರು ಮಾಡಿದೆ.

ವರದಿ: ವ್ಯಾಟಿಕನ್ ನ್ಯೂಸ್

ಮೊನ್ನೆ ಬುಧವಾರ ನಿಕಾರುಗುವ ದೇಶವು ಏಳು ಕಥೋಲಿಕ ಗುರುಗಳನ್ನು ರೋಮ್ ನಗರಕ್ಕೆ ಗಡಿಪಾರು ಮಾಡಿದೆ. ಅಲ್ಲಿಂದ ಗಡಿಪಾರಾದ ಗುರುಗಳ ಪೈಕಿ ವಿಕ್ಟರ್ ಗೊಡೋಯ್, ಜೈರೋ ಪ್ರಾವಿಯ, ಸಿಲ್ವಿಯೋ ರೊಮೆರೊ, ಎಡ್ಗರ್ ಸಕಾಸ, ಹಾರ್ವಿನ್ ಥಾಮಸ್, ಉಲಿಸೆಸ್ ವಿಗ, ಮತ್ತು ಮರ್ಲೋನ್ ವಲಾಸ್ಕ್ವೆಸ್ ಇದ್ದಾರೆ. ಇವರು ಗುರುವಾರ ರೋಮ್ ನಗರಕ್ಕೆ ಬಂದಿಳಿದರು.

ಈ ಕುರಿತು ಗುರುವಾರ ನಿಕರಾಗುವ ಸರ್ಕಾರವು ಮಾಧ್ಯಮ ಹೇಳಿಕೆಯನ್ನು ನೀಡಿದ್ದು. "ಏಳು ನಿಕರಾಗುವ ಗುರುಗಳು ರೋಮ್ ನಗರಕ್ಕೆ ತೆರಳಿದ್ದಾರೆ" ಎಂದು ತಿಳಿಸಿದೆ. ಈ ಗುರುಗಳು ಮಟಗಲ್ಪ ಧರ್ಮಕ್ಷೇತ್ರ ಹಾಗೂ ಎಸ್ಟೆಲ್ಲಿ ಧರ್ಮಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ನಿಕರಾಗುವ ಸರ್ಕಾರವು ಕಥೋಲಿಕ ಗುರುಗಳನ್ನು ಬಂಧಿಸುತ್ತಾ ಬಂದಿದೆ. ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.

09 August 2024, 17:00