ತಾತ್ಕಾಲಿಕವಾಗಿ ರಸ್ತೆಯ ಶೆಡ್ಡಿನಲ್ಲಿ ವಾಸಿಸುತ್ತಿರುವ ಇಬ್ಬರು ವ್ಯಕ್ತಿಗಳೊಂದಿಗೆ ಸಿಸ್ಟರ್ ಶಾಲಿನಿ ತಾತ್ಕಾಲಿಕವಾಗಿ ರಸ್ತೆಯ ಶೆಡ್ಡಿನಲ್ಲಿ ವಾಸಿಸುತ್ತಿರುವ ಇಬ್ಬರು ವ್ಯಕ್ತಿಗಳೊಂದಿಗೆ ಸಿಸ್ಟರ್ ಶಾಲಿನಿ 

ಪರಿಧಿಗಳಿಂದ ದೈವಶಾಸ್ತ್ರವನ್ನು ಭೋದಿಸುತ್ತಿರುವ ಧಾರ್ಮಿಕ ಭಗಿನಿ

ದೆಹಲಿಯಲ್ಲಿನ ಜೆಸುಯಿಟ್ ಗುರುಗಳ ನಡೆಸುತ್ತಿರುವ ಖ್ಯಾತ ವಿದ್ಯಾಜ್ಯೋತಿ ದೈವಶಾಸ್ತ್ರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸಿಸ್ಟರ್ ಶಾಲಿನಿ ಮುಲಕ್ಕಲ್ ಅವರು ಕಂಟೆಕ್ಚುವಲ್ ಥಿಯಾಲಜಿ (ದೈವಶಾಸ್ತ್ರ) ಅನ್ನು ಭೋದಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಅವರು ದೆಹಲಿಯ ಕೊಳಗೇರಿಗಳಿಗೆ ಕರೆದುಕೊಂಡು ಹೋಗಿ, ಮಾದರಿಯ ಹಾಗೂ ಉದಾಹರಣೆಯ ಸಮೇತ ಭೋದಿಸುವ ಮೂಲಕ ಪ್ರಯೋಗಾತ್ಮಕವಾಗಿ ಕಲಿಸುತ್ತಿದ್ದಾರೆ.

ವರದಿ: ಸಿಸ್ಟರ್ ಗ್ರೆಟ್ಟಾ ಪೆರೇರಾ, ಓ.ಸಿ.ವಿ., ಅಜಯ್ ಕುಮಾರ್

ದೆಹಲಿಯಲ್ಲಿನ ಜೆಸುಯಿಟ್ ಗುರುಗಳ ನಡೆಸುತ್ತಿರುವ ಖ್ಯಾತ ವಿದ್ಯಾಜ್ಯೋತಿ ದೈವಶಾಸ್ತ್ರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಸಿಸ್ಟರ್ ಶಾಲಿನಿ ಮುಲಕ್ಕಲ್ ಅವರು ಕಂಟೆಕ್ಚುವಲ್ ಥಿಯಾಲಜಿ (ದೈವಶಾಸ್ತ್ರ) ಅನ್ನು ಭೋದಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಅವರು ದೆಹಲಿಯ ಕೊಳಗೇರಿಗಳಿಗೆ ಕರೆದುಕೊಂಡು ಹೋಗಿ, ಮಾದರಿಯ ಹಾಗೂ ಉದಾಹರಣೆಯ ಸಮೇತ ಭೋದಿಸುವ ಮೂಲಕ ಪ್ರಯೋಗಾತ್ಮಕವಾಗಿ ಕಲಿಸುತ್ತಿದ್ದಾರೆ.    

1999 ರಿಂದ ಸಿಸ್ಟರ್ ಶಾಲಿನಿ ಅವರು ಈ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮುಂಚೆ ಅವರು ಇದೇ ಕಾಲೇಜಿನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಸ್ಲಂಗಳಲ್ಲಿ ತಾವು ಸಲ್ಲಿಸಿದ ಸೇವೆಯೇ ಈ ಹಿನ್ನೆಲೆಯಲ್ಲಿ ಅವರುಗೆ ದೈವಶಾಸ್ತ್ರವನ್ನು ಬೋಧಿಸಲು ಪ್ರೇರೇಪಿಸಿತು ಮಾತ್ರವಲ್ಲದೆ ಸ್ಪೂರ್ತಿಯಾಯಿತು.

ಪ್ರಾಧ್ಯಾಪಕಿಯಾಗಿ ಪಾಠ ಮಾಡುತ್ತಲೇ ತನ್ನ ವಿದ್ಯಾರ್ಥಿಗಳನ್ನು ಈ ಸ್ಲಂಗಳಿಗೆ ಕರೆದೊಯ್ದು ಅವರು ನಿಜವಾಗಿಯೂ ಸಾಮಾಜಿಕವಾಗಿ ಕಲಿಯಬೇಕಾದುದು ಏನು ಎಂಬುದನ್ನು ಇವರು ಕಲಿಸುತ್ತಿದ್ದಾರೆ.

ಇದಲ್ಲದೆ ಇವರು ಮಹಿಳಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುವ ಎಲ್ಲಾ ಜನಪರ ಹೋರಾಟಗಳಲ್ಲಿಯೂ ಸಹ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. "ಕ್ರಿಸ್ತನೆಡೆಗಿನ ಅತೀವ ಪ್ರೀತಿ ಇವೆಲ್ಲವನ್ನೂ ಮಾಡಲು ಪ್ರೇರೇಪಿಸುತ್ತಿದೆ" ಎಂದು ಅವರು ಹೇಳುತ್ತಾರೆ.  

30 August 2024, 14:34