ಶ್ರೀಸಾಮಾನ್ಯ ಧರ್ಮೋಪದೇಶಕಿಯ ಸಂತ ಪದವಿಗೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ಫಿಲಿಪ್ಪೀನ್ಸ್ ಧರ್ಮಸಭೆ
ಶ್ರೀಸಾಮಾನ್ಯ ಧರ್ಮೋಪದೇಶಕಿಯ ಸಂತ ಪದವಿಗೇರಿಸುವ ಪ್ರಕ್ರಿಯೆಗೆ ಫಿಲಿಪೀನ್ಸ್ ಧರ್ಮಸಭೆ ಚಾಲನೆ ನೀಡಿದೆ. ಲೌರಿಯಾನ "ಲಾ ಕುರಿಂಗ್' ಫ್ರಾಂಕೋ ಈ ಶ್ರೀಸಾಮಾನ್ಯ ಮಹಿಳೆಯಾಗಿದ್ದು, ಅವರು ತಮ್ಮ ಇಡೀ ಜೀವನವನ್ನು ಧರ್ಮೋಪದೇಶದ ಸೇವೆಗಾಗಿ ಮುಡಿಪಾಗಿಟ್ಟಿದ್ದರು.
ವರದಿ: ಲಿಕಾಸ್ ನ್ಯೂಸ್

ಫಿಲಿಪ್ಪೀನ್ಸ್ ದೇಶದ ಪಸೀಗ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿರುವ ಬಿಷಪ್ ಮೈಲೋ ಹ್ಯೂಬರ್ಟ್ ವೆರ್ಗಾರ ಅವರು ಲೌರಿಯಾನ "ಲಾ ಕುರಿಂಗ್' ಫ್ರಾಂಕೋ ಅವರ ಸಂತ ಪದವಿಗೇರಿಸುವ ಪ್ರಕ್ರಿಯೆಯನ್ನು ಧರ್ಮಕ್ಷೇತ್ರದ ಪುಣ್ಯಕ್ಷೇತ್ರವಾಗಿರುವ ಸಂತ ಅನ್ನಮ್ಮನವರ ಮೈನರ್ ಬಸಿಲಿಕಾ ದೇವಾಲಯದಲ್ಲಿ ಆರಂಭಿಸಿದ್ದಾರೆ.
ಧರ್ಮಾಧ್ಯಕ್ಷರು ಫ್ರಾಂಕೋ ಅವರ ಬರಹಗಳು ಹಾಗೂ ಧರ್ಮಸಭೆಗೆ ಆಕೆಯ ಕೊಡುಗೆಯನ್ನು ಶೋಧಿಸಲು ಐತಿಹಾಸಿಕ ಸಮಿತಿಯನ್ನು ರಚಿಸಿದ್ದಾರೆ ಎಂದು ವರದಿಯಾಗಿದೆ.
24 August 2024, 17:44