ವಿಶ್ವಗುರುಗಳ ಭೇಟಿ ಪಪುವಾ ನ್ಯೂಗಿನಿಯಲ್ಲಿ ಭರವಸೆ ಹಾಗೂ ಸಂತೋಷವನ್ನು ಮೂಡಿಸಿದೆ ಎಂದಿರುವ ಸುವಾರ್ತಾ ಪ್ರಸಾರಕ ಗುರು

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡುತ್ತಿರುವುದು ಇಲ್ಲಿನ ಜನತೆಗೆ ಭರವಸೆ ಹಾಗೂ ಸಂತೋಷದ ಹೊನಲನ್ನು ಮೂಡಿಸಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ದಿ ಇನ್ಕಾರ್ನೇಟ್ ವರ್ಡ್ ಧಾರ್ಮಿಕ ಸಭೆಯ ಗುರು ಹಾಗೂ ಇಲ್ಲಿ ಸುವಾರ್ತಾ ಪ್ರಸಾರಕರಾಗಿ ಸೇವೆ ಸಲ್ಲಿಸುತ್ತಿರುವ ಫಾದರ್ ಮಾರ್ಟಿನ್ ಪ್ರಾದೋ ಅವರು ಹೇಳಿದ್ದಾರೆ.

ವರದಿ: ಲಿಕಾಸ್ ನ್ಯೂಸ್

ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ಆರನೇ ತಾರೀಖು ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಲಿದ್ದಾರೆ. ಈಗಾಗಲೇ ಇಲ್ಲಿನ ಜನತೆ ಪೋಪ್ ಫ್ರಾನ್ಸಿಸ್ ಅವರ ಭೇಟಿಯ ಕುರಿತು ಉತ್ಸುಕರಾಗಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡುತ್ತಿರುವುದು ಇಲ್ಲಿನ ಜನತೆಗೆ ಭರವಸೆ ಹಾಗೂ ಸಂತೋಷದ ಹೊನಲನ್ನು ಮೂಡಿಸಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ದಿ ಇನ್ಕಾರ್ನೇಟ್ ವರ್ಡ್ ಧಾರ್ಮಿಕ ಸಭೆಯ ಗುರು ಹಾಗೂ ಇಲ್ಲಿ ಸುವಾರ್ತಾ ಪ್ರಸಾರಕರಾಗಿ ಸೇವೆ ಸಲ್ಲಿಸುತ್ತಿರುವ ಫಾದರ್ ಮಾರ್ಟಿನ್ ಪ್ರಾದೋ ಅವರು ಹೇಳಿದ್ದಾರೆ.

"ಇಲ್ಲಿನ ಕರಾವಳಿ ನಗರವಾದ ವನೀಮೋಗೆ ಪೋಪ್ ಫ್ರಾನ್ಸಿಸ್ ಅವರು ಭೇಟಿ ನೀಡುತ್ತಿರುವುದು ಐತಿಹಾಸಿಕವಾಗಿದೆ ಮಾತ್ರವಲ್ಲದೆ ಈಗಾಗಲೇ ಆ ಕ್ಷಣಕ್ಕೆ ಸಾವಿರಾರು ಜನತೆ ಉತ್ಸುಕತೆಯಿಂದ ಕಾದಿದ್ದಾರೆ" ಎಂದು ಫಾದರ್ ಪ್ರದೋ ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು "ಇಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚು ಇಲ್ಲದ ಕಾರಣ ಬಹುತೇಕ ಜನರಿಗೆ ಪೋಪ್ ಅವರ ಭೇಟಿಯ ಕುರಿತು ತಿಳಿದೇ ಇಲ್ಲ. ಇದೀಗ ಎಲ್ಲರಿಗೂ ಈ ವಿಚಾರ ತಿಳಿದಿದ್ದು, ಈ ಬಗ್ಗೆ ಅವರು ಬಹಳ ಉತ್ಸಾಹದಿಂದ ಪೋಪ್ ಅವರ ಭೇಟಿಯನ್ನು ಎದುರುನೋಡುತ್ತಿದ್ದಾರೆ" ಫಾದರ್ ಮಾರ್ಟಿನ್ ಪ್ರದೋ ಅವರು ಲಿಕಾಸ್ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಈ ಪ್ರಾಂತ್ಯದಲ್ಲಿನ ಕ್ರೈಸ್ತ ವಿಶ್ವಾಸದ ಕುರಿತು ಮಾತನಾಡಿದ ಫಾದರ್ ಪ್ರದೋ "ಇಲ್ಲಿ ಕ್ರೈಸ್ತ ವಿಶ್ವಾಸ ಎಂಬುದು ಬಹಳ ಜೀವಂತವಾಗಿದೆ ಹಾಗೂ ಅತಿ ಸರಳವಾಗಿದೆ" ಎಂದು ಹೇಳಿದ್ದಾರೆ.

28 August 2024, 15:14