ಬಿಷಪ್ ಮೊರೋಂಟಾ: ವೆನೆಜುಲಾದ ಜನರ ಇಚ್ಛೆ ಕೇಳಲ್ಪಡಲಿ
ವರದಿ: ಜೋಹಾನ್ ಪಚೀಕೋ, ಅಜಯ್ ಕುಮಾರ್
ವೆನೆಜುಲಾದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಉಪಾಧ್ಯಕ್ಷರಾಗಿರುವ ಸ್ಯಾನ್ ಕ್ರಿಸ್ಟೋಬಾಲ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಮಾರಿಯೋ ಮೊರೋಂಟಾ ಅವರು ಈಗಾಗಲೇ ವೆನೆಜುಲಾದ ಚುನಾವಣೆಗಳಿಂದ ಬೇಸತ್ತು, ಪ್ರತಿಭಟಿಸುತ್ತಿರುವವರನ್ನು ಕುರಿತು ಮಾತನಾಡುತ್ತಾ "ವೆನೆಜುಲಾದ ಜನರ ಇಚ್ಛೆ ಕೇಳಲ್ಪಡಲಿ" ಎಂದು ಹೇಳಿದ್ದಾರೆ.
ವ್ಯಾಟಿಕನ್ ನ್ಯೂಸ್'ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಿಷಪ್ ಮೊರೋಂಟಾ ಅವರು ನಮ್ಮ ವೆನೆಜುಲಾ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಕುರಿತು ನಾವು ಮೌಲ್ಯಮಾಪನವನ್ನು ಮಾಡುತ್ತಿದ್ದೇವೆ ಮಾತ್ರವಲ್ಲದೆ ಈ ದೇಶದ ಕಥೋಲಿಕ ಧರ್ಮಾಧ್ಯಕ್ಷರಾದ ನಾವೆಲ್ಲರೂ ಪರಸ್ಪರ ಸಂಪರ್ಕದಲ್ಲಿದ್ದು, ಏನೇನು ಮಾಡಬೇಕು ಎಂಬ ಕುರಿತು ಚರ್ಚಿಸುತ್ತಿದ್ದೇವೆ. ಈಗಲೂ ಸಹ ಒಂದು ಸಭೆಗೆ ನಾವೆಲ್ಲರೂ ಹೋಗುತ್ತಿದ್ದು, ಅಲ್ಲೂ ಸಹ ನಾವು ಯಾವ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬೇಕು ಹಾಗೂ ನಮ್ಮ ನಡೆ ಏನಿರಬೇಕು ಎಂಬುದನ್ನು ನಾವು ಚರ್ಚಿಸಲಿದ್ದೇವೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ಪರಿಸ್ಥಿತಿ ಏನೇ ಇರಲಿ ಅಂತಿಮವಾಗಿ ವೆನೆಜುಲಾ ದೇಶದ ಜನರ ಆಶಾ ಭಾವನೆಗಳನ್ನು ಆಲಿಸಿ, ಕೇಳುವಂತಹ ಸರ್ಕಾರವು ಬರಲಿ. ಈ ದೇಶದ ಯುವ ಜನತೆಯನ್ನು ಉಜ್ವಲ ಭವಿಷ್ಯದೆಡೆಗೆ ಕರೆದೊಯ್ಯುವಂತಹ ಸರ್ಕಾರವು ಬರಲಿ ಎಂದು ಆಶಿಸಿದ್ದಾರೆ.