ಹುಡುಕಿ

ಇಂಡೋನೇಷಿಯಾದಲ್ಲಿ ಕಥೋಲಿಕ ಧರ್ಮಸಭೆ: ಒಂದು ಅವಲೋಕನ

ಏಷ್ಯಾ ಮತ್ತು ಓಶಿಯಾನಿಯಾ ಖಂಡಗಳಿಗೆ ಪೋಪ್ ಫ್ರಾನ್ಸಿಸ್ ಅವರು ನಾಳೆ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 3-6 ವರೆಗೆ ಅವರು ಇಂಡೋನೇಷಿಯಾ ದೇಶಕ್ಕೆ ಭೇಟಿ ನೀಡಲಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಮೊಟ್ಟ ಮೊದಲ ಬಾರಿಗೆ ಕ್ರೈಸ್ತ ಧರ್ಮವು ಏಳನೇ ಶತಮಾನದಲ್ಲಿ ಇಂಡೋನೇಷಿಯಾಗೆ ಕಾಲಿಟ್ಟಿತ್ತು. ಆದರೆ ಇದು ಬೆಳವಣಿಗೆ ಕಾಣಲು ಆರಂಭಿಸಿದ್ದು ಮಾತ್ರ ಹದಿನಾರನೇ ಶತಮಾನದಿಂದ. ಪೋರ್ಚುಗೀಸರು ಇಂಡೋನೇಶಿಯಾ ದೇಶವನ್ನು ವಶಪಡಿಸಿಕೊಂಡಾಗ ಇವರ ಜೊತೆಗೆ ಆಗಮಿಸಿದ್ದ ಕಥೋಲಿಕ ಮಿಶನರಿಗಳು ಇಲ್ಲಿ ಕ್ರೈಸ್ತ ಮತವನ್ನು ಸಾರಲು ಆರಂಭಿಸಿದರು.

ಆದರೆ ಇದು ಬಹುಕಾಲ ಇಲ್ಲಿ ನಿಲ್ಲಲಿಲ್ಲ. ಡಚ್ಚರು ಪೋರ್ಚುಗೀಸರನ್ನು ಇಲ್ಲಿಂದ ಓಡಿಸಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ ಇಲ್ಲಿ ಅವರು ಕಥೋಲಿಕ ಕ್ರೈಸ್ತ ಧರ್ಮವನ್ನು ನಿಷೇಧಿಸಿ, ತಮ್ಮ ಕ್ಯಾಲ್ವಿನಿಸಂ ಪಂಗಡವನ್ನು ಅರಂಭಿಸಿದರು.

ಇಪ್ಪತ್ತನೇ ಶತಮಾನದಲ್ಲಿ ಇಲ್ಲಿ ಮೊದಲ ಬಾರಿಗೆ ಸಣ್ಣ ಧರ್ಮಪ್ರಾಂತ್ಯವನ್ನು ಆರಂಭಿಸಿ, ಇದರ ಪೂರ್ವ ಭಾಗಗಳನ್ನು ಮಿಶನರೀಸ್ ಆಫ್ ಸೇಕ್ರೆಡ್ ಹಾರ್ಟ್ (ಎಂ.ಎಸ್.ಸಿ) ಗುರುಗಳಿ ಕಾಳಜಿಗೆ ನೀಡಲಾಯಿತು. ಈ ಧಾರ್ಮಿಕ ಸಭೆಯ ಗುರುಗಳು ಇಲ್ಲಿ ಅತ್ಯಂತ ಬದ್ಧತೆಯಿಂದ ಶುಭಸಂದೇಶವನ್ನು ಸಾರಿದರು.

ನಡುವೆ, ಜಪಾನ್ ದೇಶವು ಈ ದೇಶದ ಮೇಲೆ ನಿಯಂತ್ರಣ ಸಾಧಿಸಿದಾಗ ಇಲ್ಲಿನ ಬಿಷಪ್ಪರುಗಳ ಸಭೆಯನ್ನು ತಡೆ ಹಿಡಿಯಲಾಯಿತು. ೧೯೫೦ ರಲ್ಲಿ ಇಂಡೋನೇಷಿಯಾದ ಧರ್ಮಾಧ್ಯಕ್ಷರುಗಳು ತಮ್ಮ ವಾರ್ಷಿಕ ಸಭೆಗಳನ್ನು ಆರಂಭಿಸಿದರು.

ಈವರೆಗೂ ಮೂರು ವಿಶ್ವಗುರುಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಅವರುಗಳೆಂದರೆ ಪೋಪ್ ಆರನೇ ಪೌಲರು, ಸಂತ ಪೋಪ್ ದ್ವಿತೀಯ ಜಾನ್ ಪೌಲರು ಹಾಗೂ ಪ್ರಸ್ತುತ ಪೋಪ್ ಫ್ರಾನ್ಸಿಸ್ ರವರು ಇಂಡೋನೇಷಿಯಾ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದಾರೆ.

01 September 2024, 16:55