ಮಕ್ಕಳನ್ನು ವಿಶ್ವಾಸದಲ್ಲಿ ಬೆಳೆಸಲು ಅನನ್ಯ ಮಾರ್ಗಗಳನ್ನು ಕಂಡುಕೊಂಡ ಭಾರತದ ಧರ್ಮಸಭೆ

ಭಾರತದ ತಮಿಳುನಾಡು ರಾಜ್ಯದ ಮದ್ರಾಸ್-ಮೈಲಾಪೋರ್ ಮಹಾಧರ್ಮಕ್ಷೇತ್ರದಲ್ಲಿ ಮಕ್ಕಳನ್ನು ವಿಶ್ವಾಸದಲ್ಲಿ ಬೆಳೆಸುವ ಸಲುವಾಗಿ, ಅವರಿಗೆ ಧರ್ಮೋಪದೇಶದ ಮೇಲೆ ಆಸಕ್ತಿಯನ್ನು ತರಲು ವಿವಿಧ ರೀತಿಯಲ್ಲಿ ಧರ್ಮೋಪದೇಶವನ್ನು ಕಲಿಸುವ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವರದಿ: ಲಿಕಾಸ್ ನ್ಯೂಸ್

ಧರ್ಮೋಪದೇಶವನ್ನು ಕಲಿಸುವ ನಿಟ್ಟಿನಲ್ಲಿ ಈ ನೂತನ ಉಪಕ್ರಮಗಳನ್ನು ಮಹಾಧರ್ಮಕ್ಷೇತ್ರದ ಧರ್ಮೋಪದೇಶ ಆಯೋಗವು ಕೈಗೊಂಡಿದೆ. ಈ ನೂತನ ಉಪಕ್ರಮಗಳನ್ನು ಭಾನುವಾರಗಳಂದು ಹಾಗೂ ವಿಶೇಷ ಬಲಿಪೂಜೆಗಳು ಇರುವ ವೇಳೆ ಕೈಗೊಳ್ಳಲಾಗಿದ್ದು, ನೂತನ ಮಾರ್ಗಗಳ ಮೂಲಕ ಎಲ್ಲಾ ವಯಸ್ಕ ಮಕ್ಕಳು ಧರ್ಮಸಭೆಗೆ ಹತ್ತಿರವಾಗಬಹುದಾಗಿದೆ.

ಕೌಟುಂಬಿಕ ಜೀವನದ ಜೊತೆ ವಿಶ್ವಾಸಕ್ಕೆ ಹತ್ತಿರವಾಗಲು ಈ ಉಪಕ್ರಮಗಳು ಸಹಕಾರಿಯಾಗಲಿವೆ. ಏಕೆಂದರೆ, ಈ ಕಾರ್ಯಕ್ರಮಗಳು ಒಂದು ವಯೋಮಾನದ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ಮಕ್ಕಳಿಂದ ವಯಸ್ಕರವರೆಗೂ ಸಹ ಇವುಗಳನ್ನು ರೂಪಿಸಲಾಗಿದೆ. ಈಗಾಗಲೇ ಇವುಗಳನ್ನು ಕಾರ್ಯರೂಪಕ್ಕೆ ತರಲಾಗಿದ್ದು, ಯಶಸ್ವಿಯಾಗಿವೆ ಎಂತಲೇ ಹೇಳಬಹುದಾಗಿದೆ.  

17 September 2024, 18:20