ಇಂಡೋನೇಷಿಯಾ ಗಾಯಕಿ ಲಿಯೋಡ್ರಾ: ಪೋಪ್ ಫ್ರಾನ್ಸಿಸ್ ಅವರ ಸೇವಾ ಮನೋಭಾವ ಪರಿಣಾಮ ಬೀರಿದೆ

ಇಂಡೋನೇಷಿಯಾದ ಪ್ರಸಿದ್ಧ ಗಾಯಕಿ ಲಿಯೋಡ್ರಾ ಕಥೋಲಿಕ ಕ್ರೈಸ್ತ ಧರ್ಮದ ಹಿಂಬಾಲಕಿಯಾಗಿದ್ದು, ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ಇಂಡೋನೇಷಿಯಾ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ ವೇಳೆ ಅವರನ್ನು ಭೇಟಿಯಾಗಿದ್ದಾರೆ. ಜಕಾರ್ತಾದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಲಿಪೂಜೆ ನೀಡುವುದಕ್ಕೂ ಮುನ್ನ ಲಿಯೋಡ್ರಾ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದಗಳನ್ನು ಪಡೆದಿದ್ದಾರೆ.

ವರದಿ: ಸಾಲ್ವತೋರ್ ಚೆರ್ನೂಝಿಯೋ, ಅಜಯ್ ಕುಮಾರ್

ಇಂಡೋನೇಷಿಯಾದ ಪ್ರಸಿದ್ಧ ಗಾಯಕಿ ಲಿಯೋಡ್ರಾ ಕಥೋಲಿಕ ಕ್ರೈಸ್ತ ಧರ್ಮದ ಹಿಂಬಾಲಕಿಯಾಗಿದ್ದು, ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ಇಂಡೋನೇಷಿಯಾ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ ವೇಳೆ ಅವರನ್ನು ಭೇಟಿಯಾಗಿದ್ದಾರೆ. ಜಕಾರ್ತಾದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬಲಿಪೂಜೆ ನೀಡುವುದಕ್ಕೂ ಮುನ್ನ ಲಿಯೋಡ್ರಾ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದಗಳನ್ನು ಪಡೆದಿದ್ದಾರೆ.   

ಪೋಪ್ ಫ್ರಾನ್ಸಿಸ್ ಅವರೊಂದಿಗೆ ತಮ್ಮ ಭೇಟಿಯ ಕುರಿತು ವ್ಯಾಟಿಕನ್ ನ್ಯೂಸ್ ನೊಂದಿಗೆ ಮಾತನಾಡಿರುವ ಲಿಯೋಡ್ರಾ ಅವರು "ಪೋಪ್ ಫ್ರಾನ್ಸಿಸ್ ಅವರ ಭೇಟಿ ಅತ್ಯಂತ ಪರಿಣಾಮಕರಿಯಾಗಿದ್ದು, ಇಂಡೋನೇಷಿಯಾದ ದೇಶದ ಅಂತರ್-ಧರ್ಮೀಯ ನೆಲೆಗಟ್ಟುಗಳ ಮೇಲೆ ಅತ್ಯಂತ ದೊಡ್ಡ ಮಟ್ಟದ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು "ನಾನು ಇಂಡೋನೇಷಿಯಾದ ಲಕ್ಷಾಂತರ ಜನತೆಯಲ್ಲಿ ಅದೃಷ್ಟಶಾಲಿಯಾಗಿದ್ದೇನೆ ಎನಿಸುತ್ತದೆ. ಏಕೆಂದರೆ ಪೋಪ್ ಫ್ರಾನ್ಸಿಸ್ ಅವರನ್ನು ಹತ್ತಿರದಿಂದ ನೋಡುವುದು ಮಾತ್ರವಲ್ಲದೆ, ಅವರ ಬಲಿಪೂಜೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.  

17 September 2024, 17:53