ನೇಮಿತ ಕಾರ್ಡಿನಲ್ ಕೊವಕಾಡ್ ಅವರು ಕಾರ್ಡಿನಲ್ ಸ್ಥಾನಕ್ಕೆ ನೇಮಕವಾದ ಮೊದಲ ಪ್ರೇಷಿತ ಭೇಟಿ ಆಯೋಜಕರಾಗಿದ್ದಾರೆ.

ನಿನ್ನೆ ವಿಶ್ವಗುರು ಫ್ರಾನ್ಸಿಸ್ ಅವರು ತಾವು ಅಭ್ಯಂಗಿಸಲಿರುವ 21 ಕಾರ್ಡಿನಲ್ಲುಗಳ ಪಟ್ಟಿಯನ್ನು ಪ್ರಕಟಿಸಿದರು. ಈ ಪಟ್ಟಿಯ ಕೊನೆಗೆ ಇದ್ದ ಒಂದು ಹೆಸರು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ. ಆ ಹೆಸರೇ ಮೊನ್ಸಿಜ್ಞರ್ ಜಾರ್ಜ್ ಜೇಕಬ್ ಕೊವಕಾಡ್. ಇವರ ಕುರಿತು ಮಾಹಿತಿಯನ್ನು ಹೆಕ್ಕಿ ತೆಗೆದಿರುವ ಸಂಪಾದಕಿಯ ನಿರ್ದೇಶಕರು, ಪ್ರೇಷಿತ ಭೇಟಿ ಆಯೋಜಕರಾಗಿದ್ದು, ಕಾರ್ಡಿನಲ್ ಸ್ಥಾನಕ್ಕೆ ಏರಿದ ವ್ಯಕ್ತಿಗಳಲ್ಲಿ ಇವರು ಮೂರನೆಯವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವರದಿ: ಅಂದ್ರೆಯಾಸ್ ತೊರ್ನಿಯೆಲ್ಲಿ, ಅಜಯ್ ಕುಮಾರ್

ನಿನ್ನೆ ವಿಶ್ವಗುರು ಫ್ರಾನ್ಸಿಸ್ ಅವರು ತಾವು ಅಭ್ಯಂಗಿಸಲಿರುವ 21 ಕಾರ್ಡಿನಲ್ಲುಗಳ ಪಟ್ಟಿಯನ್ನು ಪ್ರಕಟಿಸಿದರು. ಈ ಪಟ್ಟಿಯ ಕೊನೆಗೆ ಇದ್ದ ಒಂದು ಹೆಸರು ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದೆ. ಆ ಹೆಸರೇ ಮೊನ್ಸಿಜ್ಞರ್ ಜಾರ್ಜ್ ಜೇಕಬ್ ಕೊವಕಾಡ್. ಇವರ ಕುರಿತು ಮಾಹಿತಿಯನ್ನು ಹೆಕ್ಕಿ ತೆಗೆದಿರುವ ಸಂಪಾದಕಿಯ ನಿರ್ದೇಶಕರು, ಪ್ರೇಷಿತ ಭೇಟಿ ಆಯೋಜಕರಾಗಿದ್ದು, ಕಾರ್ಡಿನಲ್ ಸ್ಥಾನಕ್ಕೆ ಏರಿದ ವ್ಯಕ್ತಿಗಳಲ್ಲಿ ಇವರು ಮೂರನೆಯವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇವರನ್ನು ಸೇರಿದಂತೆ ಇನ್ನಿತರ 20 ನೇಮಿತ ಕಾರ್ಡಿನಲ್ಲುಗಳನ್ನು ಡಿಸೆಂಬರ್ 8ರಂದು ವಿಶ್ವಗುರು ಫ್ರಾನ್ಸಿಸ್ಬರು ರೋಮ್ ನಗರದಲ್ಲಿ ಅಭ್ಯಂಗಿಸಲಿದ್ದಾರೆ.

ಮೊನ್ಸಿಜ್ಞರ್ ಜಾರ್ಜ್ ಜೇಕಬ್ ಕೊವಕಾಡ್ ಅವರು ಆಗಸ್ಟ್ 11 1973 ರಲ್ಲಿ ಭಾರತದ ಕೇರಳ ರಾಜ್ಯದಲ್ಲಿ ಜನಿಸಿದರು. 2004ರಲ್ಲಿ ಇವರು ಚಂಗನಾಚೇರಿ ಧರ್ಮ ಪ್ರಾಂತ್ಯಕ್ಕೆ ಗುರುವಾಗಿ ಅಭ್ಯಂಗಿಸಲ್ಪಟ್ಟರು. ಪವಿತ್ರ ಪೀಠದ ರಾಜತಾಂತ್ರಿಕ ಸೇವೆಗೆ ಇವರು ಸೇರಿದರು ಹಾಗೂ ಅಲ್ಜೀರಿಯಾ ದಕ್ಷಿಣ ಕೊರಿಯಾ ಇರಾನ್ ಹಾಗೂ ಕೋಸ್ಟಾ ರಿಕಾ ದೇಶಗಳಲ್ಲಿ ರಾಜ್ಯ ತಾಂತ್ರಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

2020ರ ಜುಲೈ ತಿಂಗಳಿನಿಂದ ಇವರು ವ್ಯಾಟಿಕನ್ ನಗರದ ಪವಿತ್ರ ಪೀಠದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರ ಪ್ರವಾಸ ಆಯೋಜನೆಯ ಮುಖ್ಯಸ್ಥರಾಗಿ ಸೇವಿ ಸಲ್ಲಿಸುತ್ತಿದ್ದಾರೆ. ಇದೀಗ ಅವರನ್ನು ವಿಶ್ವಗುರು ಫ್ರಾನ್ಸಿಸ್ ಅವರು ಕಾರ್ಡಿನಲ್ ಎಂದು ಘೋಷಿಸಿದ್ದಾರೆ.

07 October 2024, 18:16