ಕಾರ್ಡಿನಲ್ ಪಿಜಾಬಲ್ಲ: ನಾವು ದ್ವೇಷಕ್ಕೆ ಶರಣಾಗುವುದಿಲ್ಲ

ಇತ್ತೀಚೆಗೆ ವಿಶ್ವಗುರು ಫ್ರಾನ್ಸಿಸ್ ಅವರು ಪ್ರಪಂಚದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಹಾಗೂ ಕಳೆದ ವರ್ಷ ಹಮಾಸ್ ಉಗ್ರ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ಮಾಡಿ, ನೂರಾರು ಜನರು ಸಾವನ್ನಪ್ಪಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 7 ರಂದು ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದರು.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಇತ್ತೀಚೆಗೆ ವಿಶ್ವಗುರು ಫ್ರಾನ್ಸಿಸ್ ಅವರು ಪ್ರಪಂಚದಲ್ಲಿ ಶಾಂತಿಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಹಾಗೂ ಕಳೆದ ವರ್ಷ ಹಮಾಸ್ ಉಗ್ರ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ಮಾಡಿದ ಹಿನ್ನೆಲೆ ನೂರಾರು ಜನರು ಸಾವನ್ನಪ್ಪಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಅಕ್ಟೋಬರ್ ಏಳರಂದು ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದರು. ವಿಶೇಷವಾಗಿ ಮಧ್ಯಪ್ರಾಚ್ಯ ದೇಶಗಳಿಗೆ ವಿಶ್ವಗುರು ಫ್ರಾನ್ಸಿಸ್ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಧನ್ಯವಾದಗಳು ತಿಳಿಸಿ ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಜೆರುಸಲೇಮಿನ ಪೇಟ್ರಿಯಾರ್ಕ್ ಆದ ಕಾರ್ಡಿನಲ್ ಪಿಯರ್ ಬಟ್ಟೆಸ್ತಾ ಪಿಜಾಬಲ್ಲ ಅವರು ವಿಶ್ವಗುರು ಫ್ರಾನ್ಸಿಸ್ ಅವರಿಗೆ ಧನ್ಯವಾದಗಳು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನಾವು ಅಂದರೆ ಇಲ್ಲಿ ಜೀವಿಸುತ್ತಿರುವ ಎಲ್ಲಾ ಸಮುದಾಯದ ಜನರು ದ್ವೇಷಕ್ಕೆ ಶರಣಾಗುವುದಿಲ್ಲ. ನಮ್ಮ ಬದುಕಿನ ಮೂಲ ಆಶಯ ಶಾಂತಿಯಾಗಿದೆ. ಆ ಶಾಂತಿಯನ್ನು ಮರು ಸ್ಥಾಪಿಸುವ ಹಿನ್ನೆಲೆ ನಾವೆಲ್ಲರೂ ಒಗ್ಗಟ್ಟಿನಿಂದ ಪರಿಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು ಯುದ್ಧಕಾಲವಾದ ಕಳೆದ ಹಲವು ತಿಂಗಳುಗಳಲ್ಲಿ ಇಲ್ಲಿನ ಗುರುಗಳು ಧಾರ್ಮಿಕ ಸಹೋದರ ಸಹೋದರಿಯರು ಹಾಗೂ ಭಕ್ತಾದಿಗಳು ಸ್ವಯಂ ಪ್ರೇರಿತವಾಗಿ ಜನತೆಯ ಕಷ್ಟಕ್ಕೆ ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಹಾಗೂ ಆ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಮಿಲಿಟರಿ ಹಾಗೂ ಶಸ್ತ್ರಾಸ್ತ್ರ ಮತ್ತು ಆಯುಧಗಳಿಂದ ಯಾವುದೇ ರೀತಿಯ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಮಿಲಿಟರಿ ಕಾರ್ಯಾಚರಣೆಗಳು ಮತ್ತಷ್ಟು ಹಿಂಸೆಯನ್ನು ಹೆಚ್ಚಿಸುತ್ತವೆಯೇ ವಿನಹ ಶಾಂತಿಯನ್ನು ಎಂದಿಗೂ ಸ್ಥಾಪಿಸುವುದಿಲ್ಲ ಹಾಗೂ ಈಗಾಗಲೇ ವಿಭಜಿಸಲ್ಪಟ್ಟ ಜನರನ್ನು ಮತ್ತೆ ಒಗ್ಗಟ್ಟಿನಿಂದ ಜೀವಿಸುವಂತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೊನೆಯದಾಗಿ ಮಾತನಾಡಿದ ಅವರು ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹಲವಾರು ಜನರು ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ನಾವು ಒಬ್ಬಂಟಿಯಲ್ಲ. ಸಮಾನಮನಸ್ಕರೆಲ್ಲರೂ ನಮ್ಮ ಜೊತೆಗೆ ಇರುವ ಕಾರಣ ನಾವು ನಮ್ಮ ಗುರಿಯನ್ನು ಖಂಡಿತವಾಗಿಯೂ ತಲುಪುತ್ತೇವೆ ಎಂದು ಹೇಳಿದ್ದಾರೆ.

11 October 2024, 18:06