ಇಸ್ರೇಲ್ ದೇಶದಲ್ಲಿ ಹೀಬ್ರೂ ಭಾಷಿಕ ಕಥೋಲಿಕರು ಶಾಂತಿಗಾಗಿ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ

ಪೆಟ್ರಿಯರ್ಕಲ್ ವಿಕಾರ್ ಆಫ್ ಸೇಂಟ್ ಜೇಮ್ಸ್ ಅವರ ಪ್ರಕಾರ ಇಸ್ರೇಲ್ ದೇಶದಲ್ಲಿ ಹೀಬ್ರೂ ಭಾಷಿಕ ಕಥೋಲಿಕರು ಶಾಂತಿಗಾಗಿ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಫಾದರ್ ಪಾವೆಲ್ ರೈತೆಲ್, ಅಜಯ್ ಕುಮಾರ್

ಪೆಟ್ರಿಯರ್ಕಲ್ ವಿಕಾರ್ ಆಫ್ ಸೇಂಟ್ ಜೇಮ್ಸ್ ಅವರ ಪ್ರಕಾರ ಇಸ್ರೇಲ್ ದೇಶದಲ್ಲಿ ಹೀಬ್ರೂ ಭಾಷಿಕ ಕಥೋಲಿಕರು ಶಾಂತಿಗಾಗಿ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳ ಮಧ್ಯೆ ಇಸ್ರೇಲ್ ದೇಶದಲ್ಲಿರುವ ಈ ಬ್ರೂಭಾಷಿಕ ಕಥೋಲಿಕ ಸಮುದಾಯಗಳು ಅಕ್ಟೋಬರ್ 7ರಂದು ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಬೇಕು ಎಂಬ ವಿಶ್ವಗುರು ಫ್ರಾನ್ಸಿಸ್ ಅವರ ಕರೆಗೆ ಓಗೊಟ್ಟು, ಈ ದಿನವನ್ನು ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪೆಟ್ರಿಯರ್ಕಲ್ ವಿಕಾರ್ ಆಫ್ ಸೇಂಟ್ ಜೇಮ್ಸ್ ಫಾದರ್ ಪಿಯೋತ್ರ್ ಜೆಲಸ್ಕೋ ಅವರು "ಇಸ್ರೇಲ್ ದೇಶದಲ್ಲಿ ಬಹಳ ವಿಷಮ ಪರಿಸ್ಥಿತಿ ಉಂಟಾಗಿದೆ. ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ದಾಳಿಯಲ್ಲಿ ಮೃತ ಹೊಂದಿದ ಎಲ್ಲಾ ವ್ಯಕ್ತಿಗಳಿಗಾಗಿ ನಾವು ಪ್ರಾರ್ಥಿಸಿದವು. ಅದೇ ಸಮಯದಲ್ಲಿ ನಾವು ಎಂತಹ ಹಿಂಸೆಯನ್ನು ಅನುಭವಿಸುತ್ತೇವೆ ಎಂಬುದನ್ನು ಸಹ ನಾವು ನೆನಪಿಸಿಕೊಂಡೆವು." ಎಂದು ಹೇಳಿದ್ದಾರೆ.

ಕಳೆದ ಒಂದು ವರ್ಷವೂ ಎಲ್ಲಾ ಸಮುದಾಯಗಳಿಗೆ ಬಹಳ ವಿಷಮ ಪರಿಸ್ಥಿತಿಯಾಗಿದ್ದು ಈಗಲೂ ಸಹ ಆ ಸನ್ನಿವೇಶದಿಂದ ಹೊರಬರಲು ನೂರಾರು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ನಮಗೆ ತಿಳಿದಿದೆ. ಈ ಸಂದರ್ಭದಲ್ಲಿ ಇಲ್ಲಿ ಯಾರೂ ಸಹ ಮುಂದಿನ ಭವಿಷ್ಯದ ಕುರಿತು ಭರವಸೆ ಹಾಗೂ ನಂಬಿಕೆಯನ್ನು ಕಳೆದುಕೊಂಡಿಲ್ಲ. ಇದರ ಸಂಕೇತವಾಗಿ ಇಲ್ಲಿನ ಎಲ್ಲರೂ ಸಹ ಜಗತ್ತಿನಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಯಾಗಬೇಕು ಎಂಬ ನಿಟ್ಟಿನಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ನೀಡಿರುವ ಕರೆಗೆ ಪ್ರತಿಕ್ರಿಯಿಸಿ, ಅಕ್ಟೋಬರ್ 7ರಂದು ಪ್ರಾರ್ಥನೆ ಹಾಗೂ ಉಪವಾಸದ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ.

ಯುದ್ಧ ಮಾಡುತ್ತಿರುವ ದೇಶಗಳಲ್ಲಿ ಹಾಗೂ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎಂಬ ನಿಟ್ಟಿನಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಮಾಡುತ್ತಿರುವ ಪ್ರಯತ್ನಗಳಿಗೆ ನಮ್ಮ ಬೆಂಬಲ ಇದೆ ಹಾಗೂ ನಮ್ಮ ಪ್ರಾರ್ಥನೆಗಳು ಸಹ ಇದೆ ಎಂಬುದನ್ನು ಈ ನಡೆಯು ತೋರಿಸಿದೆ.

ಇಲ್ಲಿನ ಹೀಬ್ರು ಭಾಷಿಕ ಸಮುದಾಯಗಳು ತಮ್ಮ ವಿಶ್ವಾಸವನ್ನು ಅಂದರೆ ತಮ್ಮ ಕ್ರೈಸ್ತ ವಿಶ್ವಾಸವನ್ನು ಹಿಬ್ರೂ ಭಾಷೆಯಲ್ಲಿ ಹಾಗೂ ಹೀಬ್ರು ಸಂಸ್ಕೃತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇವರು ಕ್ರೈಸ್ತ ಹಾಗೂ ಯಹೂದ್ಯ ವಿಶ್ವಾಸಗಳ ಕಾಲು ದಾರಿಯಲ್ಲಿ ನಡೆಯುತ್ತಿದ್ದಾರೆ.

07 October 2024, 18:13