ಹುಡುಕಿ

ಲೆಬಾನನ್ ಧರ್ಮಸಭೆಯ ಸಹಾಯಕ್ಕೆ ನಿಂತ ಏಸಿಎನ್ ಸಂಸ್ಥೆ

ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಯುದ್ಧವು ಲೆಬನಾನ್‌ನಲ್ಲಿ ಹೆಚ್ಚುತ್ತಿರುವ ಹಿನ್ನೆಲೆ, ಪಾಂಟಿಫಿಕಲ್ ಫೌಂಡೇಶನ್ ಏಡ್ ಟು ದಿ ಚರ್ಚ್ ಇನ್ ನೀಡ್ (ACN) ಸಂಸ್ಥೆಯು ಲೆಬನಾನಿನ ಧರ್ಮಸಭೆಗೆ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡಲು ಕನಿಷ್ಠ 1 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಸಂಗ್ರಹಿಸಲು ತುರ್ತು ಅಭಿಯಾನವನ್ನು ಘೋಷಿಸಿದೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಯುದ್ಧವು ಲೆಬನಾನ್‌ನಲ್ಲಿ ಹೆಚ್ಚುತ್ತಿರುವ ಹಿನ್ನೆಲೆ, ಪಾಂಟಿಫಿಕಲ್ ಫೌಂಡೇಶನ್ ಏಡ್ ಟು ದಿ ಚರ್ಚ್ ಇನ್ ನೀಡ್ (ACN) ಸಂಸ್ಥೆಯು ಲೆಬನಾನಿನ ಧರ್ಮಸಭೆಗೆ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು ಸಹಾಯ ಮಾಡಲು ಕನಿಷ್ಠ 1 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಸಂಗ್ರಹಿಸಲು ತುರ್ತು ಅಭಿಯಾನವನ್ನು ಘೋಷಿಸಿದೆ.

ವಿಶ್ವದಾಂದ್ಯಂತ ಹಿಂಸೆ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಒಳಗಾಗಿರುವ ಕ್ರೈಸ್ತರಿಗೆ ನೆರವು ನೀಡುವುದು ಈ ಕಥೋಲಿಕ ದತ್ತಿ ಸಂಸ್ಥೆಯ ಉದ್ದೇಶವಾಗಿದೆ. ಇಸ್ರೇಲ್ ಹಾಗೂ ಹೆಜ್ಬೊಲ್ಲಾ ನಡುವಿನ ಸಂಘರ್ಷದ ಕಾರಣದಿಂದಾಗಿ ಜನರು, ವಿಶೇಷವಾಗಿ ಇಲ್ಲಿನ ಕ್ರೈಸ್ತರು ಅನುಭವಿಸುತ್ತಿರುವ ನೋವುಗಳನ್ನು ನೀಗಿಸಲು ಈ ಸಂಸ್ಥೆಯು ಒಂದು ಮಿಲಿಯನ್ ಡಾಲರುಗಳಷ್ಟು ಹಣದ ಮೊತ್ತವನ್ನು ದಾನಿಗಳಿಂದ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ.

ವಿಶ್ವಸಂಸ್ಥೆಯ ವರದಿಯ ಪ್ರಕಾರ ಪ್ರಸ್ತುತ ಸುಮಾರು ಏಳು ಲಕ್ಷಕ್ಕೂ ಅಧಿಕ ಮಂದಿ ಆಂತರಿಕ ನಿರಾಶ್ರಿತರು ಲೆಬಾನನ್ನಿನ ವಿವಿಧ ಭಾಗಗಳಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಎಲ್ಲಾ ಸನ್ನಿವೇಷಗಳಲ್ಲಿ ಇಲ್ಲಿನ ಧರ್ಮಸಭೆ ತಡಮಾಡದೆ ನೆರವು ಕಾರ್ಯಗಳನ್ನು ಆರಂಭಿಸಿದ್ದು, ಸಾವಿರಾರು ಜನರಿಗೆ ಧರ್ಮಾತೀತವಾಗಿ ಸಹಾಯಸ್ತವನ್ನು ಚಾಚಿದೆ.

ನಡೆಯುತ್ತಿರುವ ಯುದ್ಧವು ಹೆಜ್ಬೊಲ್ಲಾ ಹಾಗೂ ಇಸ್ರೇಲ್ ನಡುವಿನ ನೇರ ಸಂಘರ್ಷವಾಗಿದ್ದರೂ ಸಹ ಹೆಚ್ಚಿನ ದಾಳಿ ಹಾಗೂ ಹಿಂಸೆಗೊಳಗಾಗಿರುವುದು ಬಹುತೇಕ ಕ್ರೈಸ್ತರೇ ಇರುವ ಪ್ರದೇಶಗಳಾಗಿವೆ. ಈ ಕಾರಣದಿಂದಾಗಿ ಸಾವಿರಾರು ಕ್ರೈಸ್ತರು ನಿರಾಶ್ರಿತರಾಗಿದ್ದಾರೆ. ಯುದ್ಧಕ್ಕೆ ಹೆದರಿ ತಮ್ಮ ಮನೆ, ನಿವಾಸಗಳನ್ನು ಬಿಟ್ಟು, ವಲಸೆ ಹೋಗುತ್ತಿದ್ದಾರೆ. ಇಲ್ಲಿನ ಬಹುತೇಕ ಕ್ರೈಸ್ತರು ರೈತರಾಗಿದ್ದು, ಎಲ್ಲಾ ರೀತಿಯ ಜೀವನಾಧಾರಗಳಿಂದ ಇವರು ವಂಚಿತರಾಗಿದ್ದಾರೆ.                 

12 October 2024, 17:18