ಹುಡುಕಿ

ಮಾಸ್ಕೋ ನಗರಕ್ಕೆ ಕಾರ್ಡಿನಲ್ ಝುಪ್ಪಿ ಅವರ ಭೇಟಿ ಶಾಂತಿ ಹಾಗೂ ಮಾನವೀಯ ಸಹಯೋಗದ ಕುರಿತು ಅನ್ವೇಷಿಸಿದೆ

ವಿಶ್ವಗುರು ಫ್ರಾನ್ಸಿಸ್ ಅವರ ವಿಶೇಷ ಪ್ರತಿನಿಧಿಯಾಗಿರುವ ಕಾರ್ಡಿನಲ್ ಝುಪ್ಪಿ ಅವರು ಮಾಸ್ಕೊ ನಗರಕ್ಕೆ ಭೇಟಿ ನೀಡಿದ್ದು ಪ್ರಸ್ತುತ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಕುರಿತು ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕದನ ವಿರಾಮ ಘೋಷಿಸುವುದು ಸೇರಿದಂತೆ ಶಾಂತಿ ಸ್ಥಾಪನೆಯ ಪ್ರಯತ್ನಗಳು ಹಾಗೂ ಈ ನಿಟ್ಟಿನಲ್ಲಿ ಮಾನವೀಯ ಸಹಯೋಗದ ಕುರಿತು ಸಹ ಅವರು ಸಂವಾದವನ್ನು ನಡೆಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪವಿತ್ರ ಪೀಠದ ಮಾಧ್ಯಮ ಕಚೇರಿಯು ಅಕ್ಟೋಬರ್ 16 ಮತ್ತು 17 ರಂದು ರಷ್ಯಾ ದೇಶದ ಮಾಸ್ಕೊ ನಗರಕ್ಕೆ ಭೇಟಿಯನ್ನು ನೀಡಿ ಕಾರ್ಡಿನಲ್ ಅವರು ಹಿಂತಿರುಗಿದ್ದಾರೆ ಎಂದು ವರದಿ ಮಾಡಿದೆ.

ಮಾಧ್ಯಮ ವರದಿಗಳ ಪ್ರಕಾರ ಕಾರ್ಡಿನಲ್ ಸುಪಿಯವರ ಭೇಟಿಯು ಯುದ್ಧ ಪ್ರದೇಶಗಳಲ್ಲಿ ಕದನ ವಿರಾಮ ಘೋಷಿಸುವುದು, ಶಾಂತಿಯನ್ನು ನೆಲೆಸುವ ನಿಟ್ಟಿನಲ್ಲಿ ಮಾನವೀಯ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆಗಳನ್ನು ನಡೆಸುವುದು ಸೇರಿದಂತೆ ಅಂತಿಮವಾಗಿ ಯುದ್ಧವನ್ನು ನಿಲ್ಲಿಸುವ ಕುರಿತಂತೆ ಮಾತುಕತೆಗಳನ್ನು ಒಳಗೊಂಡಿದೆ. ರಷ್ಯಾ ದೇಶದ ವಿದೇಶಾಂಗ ಸಚಿವರು ಸೇರಿದಂತೆ ವಿವಿಧ ಅಧಿಕಾರಿಗಳ ಜೊತೆಗೆ ಕಾರ್ಡಿನಲ್ ಝುಪ್ಪಿ ಅವರು ಭೇಟಿ ನೀಡಿ ಮಾತುಕತೆಯನ್ನು ನಡೆಸಿದ್ದಾರೆ.

ರಾಜ್ಯ ತಾಂತ್ರಿಕ ಅಧಿಕಾರಿಗಳನ್ನು ಭೇಟಿ ಮಾಡುವ ಜೊತೆಗೆ ಅವರು ಅಲ್ಲಿನ ಸ್ಥಳೀಯ ಧರ್ಮಸಭೆಯ ಧರ್ಮಧ್ಯಕ್ಷರುಗಳನ್ನು ಹಾಗೂ ಗುರುಗಳನ್ನು ಭೇಟಿ ನೀಡಿ ಮಾತುಕತೆಯನ್ನು ನಡೆಸಿದ್ದಾರೆ. ಇದೆ ವೇಳೆ ಜಗತ್ತಿನಲ್ಲಿ ಶಾಂತಿಯನ್ನು ಮರೆ ಸ್ಥಾಪಿಸುವ ವಿಶ್ವಗುರು ಫ್ರಾನ್ಸಿಸ್ ಅವರ ಕೋರಿಕೆಯನ್ನು ಪುನರುಚ್ಚರಿಸಿದ್ದಾರೆ.

17 October 2024, 17:15