ಕಾನೂನುಬಾಹಿರ ಮಾದಕವಸ್ತುಗಳ ಪ್ರಸರಣ ನಿಲ್ಲಿಸಬೇಕೆಂದ ವಿಶ್ವಸಂಸ್ಥೆಯ ವ್ಯಾಟಿಕನ್ ವೀಕ್ಷಕರು

ವಿಶ್ವಸಂಸ್ಥೆಯಲ್ಲಿ ವ್ಯಾಟಿಕನ್ನಿನ ಶಾಶ್ವತ ವೀಕ್ಷಕರಾಗಿರುವವರು ವಿವಿಧ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯ ಸಭೆಯಲ್ಲಿ ಚರ್ಚಿಸಿದ್ದಾರೆ. ಚರ್ಚಿಸಿದ ಈ ವಿಷಯಗಳ ಪೈಕಿ ಅಂಗಾಗ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಮಾದಕ ದ್ರವ್ಯಗಳ ಮಾರಾಟ ಸೇರಿದಂತೆ ಇನ್ನೂ ಹಲವು ವಿಷಯಗಳು ಪ್ರಮುಖ ಅಂಶಗಳಾಗಿವೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ವಿಶ್ವಸಂಸ್ಥೆಯಲ್ಲಿ ವ್ಯಾಟಿಕನ್ನಿನ ಶಾಶ್ವತ ವೀಕ್ಷಕರಾಗಿರುವವರು ವಿವಿಧ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯ ಸಭೆಯಲ್ಲಿ ಚರ್ಚಿಸಿದ್ದಾರೆ. ಚರ್ಚಿಸಿದ ಈ ವಿಷಯಗಳ ಪೈಕಿ ಅಂಗಾಗ ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಮಾದಕ ದ್ರವ್ಯಗಳ ಮಾರಾಟ ಸೇರಿದಂತೆ ಇನ್ನೂ ಹಲವು ವಿಷಯಗಳು ಪ್ರಮುಖ ಅಂಶಗಳಾಗಿವೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ೭೮ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ವೀಕ್ಷಕರಾದ ಆರ್ಚ್'ಬಿಷಪ್ ಗಬ್ರಿಯೇಲ್ ಗಿಯೊರ್ಡಾನೋ ಅವರು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತಿರುವ ಮಾದಕ ವಸ್ತುಗಳ ಕುರಿತು ಮಾತನಾಡಿ, ಸದಸ್ಯರ ಗಮನ ಸೆಳೆದರು. ಹೇಗೆ ಇದು ಯುವ ಸಮೂಹವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂಬ ಕುರಿತು ಮಾತನಾಡಿದರು.

ಕುಟುಂಬಗಳು ಹಾಗೂ ಸಮಾಜವನ್ನು ನಾಶಮಾಡುತ್ತಿರುವ ಈ ಸಾಮಾಜಿಕ ಪಿಡುಗಳನ್ನು ಹೋಗಲಾಡಿಸಲು ತ್ರಿವಿಧ ರೂಪದ ಕ್ರಮಗಳ ಅಗತ್ಯವಿದೆ ಎಂದು ಅವರು ಹೇಳಿದರು. ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯಗಳನ್ನು ವಿಶೇಷವಾಗಿ ಮಾದಕ ವಸ್ತುಗಳ ವ್ಯಸನವನ್ನು ಹೋಗಲಾಡಿಸಲು ಆ ಕುರಿತು ಯುವ ಸಮೂಹಕ್ಕೆ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಹಲವು ರೀತಿಯ ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. 

08 October 2024, 18:47