ಭಾರತ: ಆಲಿಸುವ ಧರ್ಮಸಭೆಯೆಡೆಗೆ ಮಾತೆ ಮರಿಯಳೊಂದಿಗೆ ಪಯಣ
ವರದಿ: ಸಿಸ್ಟರ್ ಫ್ಲೋರೀನಾ ಜೋಸೆಫ್, ಎಸ್.ಸಿ.ಎನ್., ಅಜಯ್ ಕುಮಾರ್
ಭಾರತದಲ್ಲಿನ ಮುಂಬೈ ಮಹಾಧರ್ಮಪ್ರಾಂತ್ಯದ ಡಾಕ್ಯಾರ್ಡ್ ಪ್ರದೇಶದಲ್ಲಿರುವ ಜಪಮಾಲೆ ಮಾತೆಯ ದೇವಾಲಯದ ಭಕ್ತಾಧಿಗಳು ತಮ್ಮ ಧರ್ಮಕೇಂದ್ರದ ವಾರ್ಷಿಕ ಹಬ್ಬವನ್ನು ಪೋಪ್ ಫ್ರಾನ್ಸಿಸ್ ಅವರ ಸಿನೋಡಲ್ ಕರೆಯನ್ನು ಧ್ಯಾನಿಸುತ್ತಾ ಆಚರಿಸಿದ್ದಾರೆ.
ಜಪಮಾಲೆ ಮಾತೆಯ ತಮ್ಮ ವಾರ್ಷಿಕ ಹಬ್ಬದಂದು ಈ ಧರ್ಮಕೇಂದ್ರವು ತಮ್ಮ ಹಬ್ಬದ ಆಚರಣೆಗಳಲ್ಲಿ ಸಿನೋಡಲ್ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿದೆ.
ಈ ಧರ್ಮಕೇಂದ್ರದ ಗುರುಗಳಾಗಿರುವ ಫಾದರ್ ನೈಜಲ್ ಬಾರೆಟ್ ಅವರು ಈ ಕುರಿತು ಮಾತನಾಡಿ ಹೇಗೆ ಅಲ್ಲಿನ ಕ್ರೈಸ್ತ ಸಮುದಾಯವು ವಿಶ್ವಗುರು ಫ್ರಾನ್ಸಿಸ್ ಅವರ ಸಿನೋಡೋಲ್ ಕರೆಯನ್ನು ಅಪ್ಪಿಕೊಂಡಿದೆ ಹಾಗೂ ರೂಮ್ ನಗರದಲ್ಲಿ ಎರಡನೇ ಸಿನೋಡ್ ಸಮಾವೇಶವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅದರ ಪ್ರಮುಖ ಅಂಶಗಳನ್ನು ಧ್ಯಾನಿಸುವ ಹಿನ್ನೆಲೆಯಲ್ಲಿ ಈ ಹಬ್ಬವನ್ನು ಆಚರಿಸದೆ ಎಂಬುದರ ಕುರಿತು ವ್ಯಾಟಿಕನ್ ನ್ಯೂಸ್ ಸುದ್ದಿ ತಾಣಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ನಾವು ನಮ್ಮ ಧರ್ಮ ಕೇಂದ್ರದ ವಾರ್ಷಿಕ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಾತೆ ಮರಿಯಮ್ಮನವರೊಂದಿಗೆ ಆಲಿಸುವ ಧರ್ಮಸಭೆ ಎಡೆಗೆ ಪಯಣಿಸುವುದು ಎಂಬ ಶೀರ್ಷಿಕೆಯನ್ನು ಧ್ಯಾನಿಸುತ್ತಿದ್ದೇವೆ. ನಮ್ಮ ನವ ದಿನಗಳ ಪ್ರಾರ್ಥನೆಗಳು ವಿಶ್ವಾಸದಿಂದ ಧನ್ಯತೆಯಿಂದ ಹಾಗೂ ಭರವಸೆಯಿಂದ ಎಲ್ಲಾ ಭಕ್ತಾದಿಗಳನ್ನು ಒಗ್ಗೂಡಿಸಿದೆ. ನಮ್ಮ ಬದುಕಿನಲ್ಲಿ ಯಾವುದೇ ಸಂಕಷ್ಟಗಳು ಎದುರಾಗಲಿ ನಮಗೆ ನಮ್ಮ ಧರ್ಮಕೇಂದ್ರದ ತಾಯಿಯಾಗಿರುವ ಮಾತೆ ಮರಿಯಮ್ಮನವರ ಆಶೀರ್ವಾದ ಹಾಗೂ ಭರವಸೆ ಇದೆ. ಅವರು ಪ್ರಭುವಿನೊಂದಿಗೆ ನಮಗಾಗಿ ಪ್ರಾರ್ಥಿಸಿ, ವರಪ್ರಸಾದಗಳನ್ನು ಪಡೆದು ಕೊಡುತ್ತಾರೆ ಎಂದು ಹೇಳಿದ್ದಾರೆ.
ಇದರ ಹೊರತಾಗಿ ತಮ್ಮ ಧರ್ಮಕೇಂದ್ರದ ವಾರ್ಷಿಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು, ಫಾದರ್ ನೈಜಲ್ ಅವರು ಧರ್ಮ ಕೇಂದ್ರದ ವಿವಿಧ ವ್ಯಕ್ತಿಗಳ ಸಹಾಯ ಹಾಗೂ ಸಹಕಾರದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.