ಥೈಲ್ಯಾಂಡ್ ಬಸ್ ಬೆಂಕಿ ಅವಘಡ: ಮಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಶೋಕಾಚರಣೆ

ಥೈಲ್ಯಾಂಡ್ ದೇಶದಲ್ಲಿ ಶಾಲಾ ಬಸ್ಸಿಗೆ ಬೆಂಕಿ ತಗುಲಿದ ಪರಿಣಾಮ ಹಲವಾರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮರಣ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕಥೋಲಿಕ ಶಾಲೆಗಳು ಈ ಮಕ್ಕಳು ಹಾಗೂ ಶಿಕ್ಷಕರ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಿ, ಅವರ ಪೋಷಕರಿಗೆ ಸಾಂತ್ವನವನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.

ವರದಿ: ಚೈನಾರೋಂಗ್ ಮೋಂತಿಯೇನ್ವಿಚಿಯೇಂಚಾಯ್, ಅಜಯ್ ಕುಮಾರ್

ಥೈಲ್ಯಾಂಡ್ ದೇಶದಲ್ಲಿ ಶಾಲಾ ಬಸ್ಸಿಗೆ ಬೆಂಕಿ ತಗುಲಿದ ಪರಿಣಾಮ ಹಲವಾರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮರಣ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕಥೋಲಿಕ ಶಾಲೆಗಳು ಈ ಮಕ್ಕಳು ಹಾಗೂ ಶಿಕ್ಷಕರ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಿ, ಅವರ ಪೋಷಕರಿಗೆ ಸಾಂತ್ವನವನ್ನು ಹೇಳಿದ್ದಾರೆ ಎಂದು ವರದಿಯಾಗಿದೆ.

"ಈ ಘಟನೆಯ ನಂತರ ಹಲವು ಕಥೋಲಿಕ ಶಾಲೆಗಳು ಈ ತಿಂಗಳ ತಮ್ಮ ಪ್ರವಾಸಗಳೂ ಸೇರಿದಂತೆ ತಮ್ಮ ಕಾರ್ಯಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಿವೆ. ಹಲವು ಕಥೋಲಿಕ ಶಾಲೆಗಳು ಅನಿರ್ದಿಷ್ಟಾವಧಿಯವರೆಗೂ ಪ್ರವಾಹ ಮುಂದೂಡಿವೆ" ಎಂದು ಥೈಲ್ಯಾಂಟ್ ಕ್ಯಾಥೋಲಿಕ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷರಾದ ಫಾದರ್ ಪೌಲ್ ಇಕಾರತ್ ಹೊಂಪ್ರಥುಮ್ ಹೇಳಿದ್ದಾರೆ.

ಈ ಶಾಲಾ ಬಸ್ ಬ್ಯಾಂಕಾಕ್ ನಗರದ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕಾಣಿಸಿಕೊಂಡ ಬೆಂಕಿ ಬೇಗನೆ ಹರಡಿದ ಪರಿಣಾಮ ಅದರಲ್ಲಿದ್ದ ಅನೇಕ ಶಿಕ್ಷಕರು ಹಾಗೂ ಮಕ್ಕಳಿಗೆ ಇದರಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಅವಘಡದಲ್ಲಿ 23 ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಶಿಕ್ಷಕರು ದುರ್ಮರಣ ಹೊಂದಿದ್ದಾರೆ. ಅಕ್ಟೋಬರ್ 2 ರಂದು ಮೃತರ ಕಳೇಬರವನ್ನು ಗುರುತಿಸಲು ಅವರ ಕುಟುಂಬಸ್ಥರು ಬ್ಯಾಂಕಾಕ್ ನಗರಕ್ಕೆ ಬಂದಿದ್ದಾರೆ.

ಸಮನ್ ಚನ್ಪುಟ್ ಎಂಬ ಈ ಬಸ್ ಚಾಲಕ ಬೆಂಕಿ ಕಾಣಿಸಿಕೊಂಡ ನಂತರ ಅಲ್ಲಿಂದ ಪರಾರಿಯಾಗಿದ್ದು, ಹಲವು ಗಂಟೆಗಳ ನಂತರ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಈ ಅವಘಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

03 October 2024, 17:54