ಲೈಂಗಿಕ ಹಗರಣದ ವರದಿ ಬರುತ್ತಿದ್ದಂತೆ ರಾಜೀನಾಮೆ ನೀಡಿದ ಆರ್ಚ್'ಬಿಷಪ್ ವೆಲ್ಬಿ

ಆಂಗ್ಲಿಕನ್ ಕ್ರೈಸ್ತ ಧರ್ಮಸಭೆಯ ಪರಮೋಚ್ಛ ಆಧ್ಯಾತ್ಮಿಕ ಗುರುವಾಗಿರುವ ಕ್ಯಾಂಟೆಬರಿಯ ಆರ್ಚ್'ಬಿಷಪ್ ಜಸ್ಟಿನ್ ವೆಲ್ಬಿ ಅವರು ಹತ್ತು ವರ್ಷಗಳ ಹಿಂದಿನ ಆಂಗ್ಲಿಕನ್ ಗುರುವೊಬ್ಬರ ಲೈಂಗಿಕ ಹಗರಣಗಲನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ವರದಿ ಬಂದ ನಂತರ, ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸುಮಾರು ದಶಕಗಳ ಹಿಂದೆ ಬೇಸಿಗೆ ಶಿಬಿರಲ್ಲಿ ಸ್ವಯಂಸೇವಕರೊಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಚ್'ಬಿಷಪ್ ಜಸ್ಟಿನ್ ವೆಲ್ಬಿ ಅವರು ಸರಿಯಾದ ವಿಚಾರಣೆ ನಡೆಸಲಿಲ್ಲ ಅಥವಾ ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಇತ್ತೀಚೆಗೆ ವರದಿಯೊಂದು ಬಂದ ಪರಿಣಾಮ, ಅವರು ಸ್ವಯಂಕೃತವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

"ಇಂಗ್ಲೆಂಡಿನ ಅರಸರ ಅನುಮತಿಯನ್ನು ಪಡೆದ ನಂತರ, ನನ್ನ ಸ್ಥಾನಕ್ಕೆ ನಾನು ರಾಜೀನಾಮೆಯನ್ನು ನೀಡುತ್ತಿದ್ದೇನೆ" ಎಂದು ಆರ್ಚ್'ಬಿಷಪ್ ಜಸ್ಟಿನ್ ವೆಲ್ಬಿ ಅವರು ಹೇಳಿದ್ದಾರೆ. "ಮೇಕಿನ್ ರಿವ್ಯೂ" ಎಂಬ ಸುದ್ದಿ ತಾಣದ ಕುರಿತು ಮಾತನಾಡಿರುವ ಅವರು "ಜಾನ್ ಸ್ಮಿಥ್ ಎಂಬ ಕಾಮುಕನ ದೌರ್ಜನ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಈ ಸುದ್ದಿ ತಾಣಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.

ತನ್ನ ರಾಜೀನಾಮೆ ಹೇಗೆ ಚರ್ಚ್ ಆಫ್ ಇಂಗ್ಲೆಂಡ್ ಲೈಂಗಿಕ ಹಗರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಹಾಗೂ ಅವುಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದರ ಸಂಕೇತವಾಗಿದ್ದು, ಈ ಲೈಂಗಿಕ ದೌರ್ಜನ್ಯದ ಸಂತ್ರಸ್ಥರ ನೋವಿನಲ್ಲಿ ನಾನೂ ಸಹ ನನ್ನ ರಾಜೀನಾಮೆ ಸಂದರ್ಭದಲ್ಲಿ ಭಾಗಿಯಾಗಿದ್ದೇನೆ ಎಂದು ಆರ್ಚ್'ಬಿಷಪ್ ಜಸ್ಟಿನ್ ವೆಲ್ಬಿ ಅವರು ಹೇಳಿದ್ದಾರೆ.       

13 November 2024, 17:03