ಕಾರ್ಡಿನಲ್ ಕಿಕುಚಿ: ವಲಸಿಗರು ಹಾಗೂ ಸಂವಾದ ಜಪಾನಿನ ಸ್ಥಿರತೆಗೆ ಹಾದಿ

ಜಾಗತಿಕ ಹಾಗೂ ಸ್ಥಳೀಯ ಸ್ಥಿರತೆಯ ಪ್ರಾಮುಖ್ಯತೆಯ ಕುರಿತು ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹಾಗೂ ನೇಮಿತ ಕಾರ್ಡಿನಲ್ ತಾರ್ಸಿಸಿಯೋ ಇಸಾವೊ ಕಿಕುಚಿ ಅವರು ಹೇಳಿದ್ದಾರೆ.

ವರದಿ: ಲಿಕಾಸ್ ನ್ಯೂಸ್ ಏಜೆನ್ಸಿ, ಅಜಯ್ ಕುಮಾರ್

ಜಾಗತಿಕ ಹಾಗೂ ಸ್ಥಳೀಯ ಸ್ಥಿರತೆಯ ಪ್ರಾಮುಖ್ಯತೆಯ ಕುರಿತು ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹಾಗೂ ನೇಮಿತ ಕಾರ್ಡಿನಲ್ ತಾರ್ಸಿಸಿಯೋ ಇಸಾವೊ ಕಿಕುಚಿ ಅವರು ಹೇಳಿದ್ದಾರೆ. 

ಫಿದೇಸ್ ನ್ಯೂಸ್ ಏಜೆನ್ಸಿ ಸುದ್ದಿ ತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಟೋಕಿಯೋ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹಾಗೂ ನೇಮಿತ ಕಾರ್ಡಿನಲ್ ತಾರ್ಸಿಸಿಯೋ ಇಸಾವೊ ಕಿಕುಚಿ ಅವರು ಪ್ರಸ್ತುತ ಜಪಾನ್ ಹಾಗೂ ಜಾಗತಿಕ ಧರ್ಮಸಭೆ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ್ದಾರೆ. ನೇಮಿತ ಕಾರ್ಡಿನಲ್ ಕಿಕುಚಿ ಅವರು "ಕಾರಿತಾಸ್ ಇಂಟರ್ನ್ಯಾಷನಾಲಿಸ್" ಸಂಸ್ಥೆಯ ಪ್ರಸಕ್ತ ಅಧ್ಯಕ್ಷರಾಗಿದ್ದಾರೆ.

"ನಮ್ಮನ್ನು ಭಾದಿಸುತ್ತಿರುವ ಸಮಸ್ಯೆಗಳಿಗೆ ಸಂವಾದವೇ ಪರಿಹಾರ. ಇದರಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಅಕ್ಕಪಕ್ಕದಲ್ಲಿರುವ ಹಾಗೂ ನೆರೆಹೊರೆಯವರ ಬಳಿ ನಾವು ಮಾತನಾಡಬೇಕು. ಸಂವಾದಿಸಬೇಕು. ಈ ಮೂಲಕವೇ ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಶಾಂತಿಯಿಂದ ಜೀವಿಸಲು ಸಾಧ್ಯ" ಎಂದು ಆರ್ಚ್'ಬಿಷಪ್ ಕಾರ್ಡಿನಲ್ ತಾರ್ಸಿಸಿಯೋ ಇಸವೊ ಕಿಕುಚಿ ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು "ವಲಸಿಗರಿಲ್ಲದೆ, ಬಹುತೇಕ ವಯಸ್ಸಾಗಿರುವ ಜನರು ಇರುವಂತಹ ದೇಶವಾದ ಜಪಾನ್ ದೇಶವು ಮುಂದುವರೆಯಲು ಸಾಧ್ಯವಿಲ್ಲ. ಈ ಕುರಿತು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಆದರೆ, ಎಲ್ಲಿ "ಹೊಸ" ಪ್ರಪಂಚಕ್ಕೆ ನಾವು ಹೋಗಿ ಬಿಡುತ್ತೇವೆಯೋ ಎಂಬ ಭಯದಿಂದ ವಲಸಿಗರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸರ್ಕಾರವು ಸಿದ್ಧವಿಲ್ಲ" ಎಂದು ನೇಮಿತ ಕಾರ್ಡಿನಲ್ ಕಿಕುಚಿ ಅವರು ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದು, ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳು ನಿಂತು ಶಾಂತಿ ನೆಲೆಸುವುದೂ ಸೇರಿದಂತೆ ವಿವಿಧ ಸಮಸ್ಯೆಗಳು ಹಾಗೂ ವಿಷಯಗಳ ಕುರಿತು ನೇಮಿತ ಕಾರ್ಡಿನಲ್ ಕಿಕುಚಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.     

21 November 2024, 15:41