ಕಣ್ಣೂರಿನ ಸಹಾಯಕ ಧರ್ಮಾಧ್ಯಕ್ಷರಾಗಿ ಅಭ್ಯಂಗಿತರಾದ ಮೊನ್ಸಿಜ್ಞೊರ್ ಡೆನ್ನಿಸ್ ಕುರುಪ್ಪಾಸೆರಿ

ಕೇರಳದ ಕಣ್ಣೂರು ಧರ್ಮಕ್ಷೇತ್ರದ ಸಹಾಯಕ ಧರ್ಮಾಧ್ಯಕ್ಷರಾಗಿ ಮೊನ್ಸಿಜ್ಞೊರ್ ಡೆನ್ನಿಸ್ ಕುರುಪ್ಪಾಸೆರಿ ಅವರು ಅಭ್ಯಂಗಿತರಾಗಿದ್ದಾರೆ. ಭಾರತದ ಹಿಂದಿನ ಪ್ರೇಷಿತ ರಾಯಭಾರಿಯಾಗಿದ್ದ ಆರ್ಚ್'ಬಿಷಪ್ ಸಾಲ್ವತೋರ್ ಪೆನ್ನಾಕಿಯೊ ಇವರಿಗೆ ಧರ್ಮಾಧ್ಯಕ್ಷ ಅಭಿಷೇಕವನ್ನು ನೀಡಿದ್ದಾರೆ. ಇದೇ ವೇಳೆ ಕಾರ್ಡಿನಲ್ ಓಸ್ವಾಲ್ಡ್ ಗ್ರೇಷಿಯಸ್ ಸೇರಿದಂತೆ ಅನೇಕ ಧರ್ಮಾಧ್ಯಕ್ಷರುಗಳು ಹಾಗೂ ಗುರುಗಳು ಇಲ್ಲಿ ಉಪಸ್ಥಿತರಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಕಣ್ಣೂರಿನ ಪರಮ ತ್ರಿತ್ವ ಪ್ರಧಾನಾಲಯದಲ್ಲಿ ಧರ್ಮಾಧ್ಯಕ್ಷೀಯ ದೀಕ್ಷೆ ನಡೆಯಿತು. ಕಣ್ಣೂರು ಧರ್ಮಕ್ಷೇತ್ರದ ಮೊದಲ ಧರ್ಮಾಧ್ಯಕ್ಷರಾದ ಅತಿ ವಂ. ವರ್ಗೀಸ್ ಚಕ್ಕಲಕಲ್ ಅವರು ಪ್ರಬೋಧನೆಯನ್ನು ನೀಡಿದರು.

ಕಣ್ಣೂರಿನ ಪ್ರಸಕ್ತ ಧರ್ಮಾಧ್ಯಕ್ಷರಾದ ಅತಿ ವಂ. ಅಲೆಕ್ಸ್ ವಡಕುಂಥಲ ಅವರು ಈ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಇದೇ ವೇಳೆ ಅವರು ಆರ್ಚ್'ಬಿಷಪ್ ಸಾಲ್ವತೋರ್ ಪೆನ್ನಾಕಿಯೊ ಅವರು ಯಾಜಕದೀಕ್ಷೆ ನೀಡಿದ ಎಪ್ಪತ್ತೈದನೇ ಗುರು ಮೊನ್ಸಿಜ್ಞೊರ್ ಡೆನ್ನಿಸ್ ಕುರುಪ್ಪಾಸೆರಿ ಅವರಾಗಿದ್ದಾರೆ ಎಂದು ಹೇಳಿದರು.

ಮೊನ್ಸಿಜ್ಞೊರ್ ಡೆನ್ನಿಸ್ ಕುರುಪ್ಪಾಸೆರಿ ಅವರು ವ್ಯಾಟಿಕನ್ ಡಿಪ್ಲೊಮೆಟಿಕ್ ಸೇವೆಗೆ ಸೇರಿ ಈಜಿಪ್ಟ್, ಬುರುಂಡಿ, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ರೋಮ್ ನಗರದ ಉರ್ಬಾನಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.   

12 November 2024, 17:48