ಹುಡುಕಿ

SYRIA-CONFLICT-DAMASCUS SYRIA-CONFLICT-DAMASCUS  (AFP or licensors)

ಸಿರಿಯಾದ ಕ್ರೈಸ್ತರು ಅಸ್ಸಾದ್ ನ ಆಡಳಿತದ ನಂತರ, ದೇಶದ 'ಪುನರ್ಜನ್ಮ'ದ ನಿರೀಕ್ಷೆಯಲ್ಲಿದ್ದಾರೆ

ವ್ಯಾಟಿಕನ್ ಸುದ್ಧಿಯು, ಸಿರಿಯಾದ ಕಥೋಲಿಕ ಸಮುದಾಯದ ಮೂವರು ಪ್ರತಿನಿಧಿಗಳೊಂದಿಗೆ ಅಸ್ಸಾದ್ ಸರ್ಕಾರದ ಹಠಾತ್ ಪತನದ ಬಗ್ಗೆ ಮತ್ತು, ಮುಕ್ತ ಮತ್ತು ಪ್ರಜಾಪ್ರಭುತ್ವ ಸಿರಿಯಾದ ಪುನರ್ಜನ್ಮದ ಕುರಿತು ಅವರ ಭರವಸೆಯ ಬಗ್ಗೆ ಮಾತನಾಡುತ್ತದೆ.

ಜೋಸೆಫ್ ಟುಲೋಚ್ ಮತ್ತು ರಾಬರ್ಟೊ ಸೆಟೆರಾರವರಿಂದ

ಕಳೆದ ಕೆಲವು ದಿನಗಳಲ್ಲಿ, ಬಂಡುಕೋರ ಪಡೆಗಳು ಮಿಂಚಿನ ವೇಗದಲ್ಲಿ ಸಿರಿಯಾದ ಅಧಿಕ ಪ್ರಮಾಣದ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರಿಂದ ಜಗತ್ತು ಆಘಾತದಿಂದ ನೋಡಿದೆ.

ಭಾನುವಾರ, ಅಸಾದ್ ಕುಟುಂಬದ 53 ವರ್ಷಗಳ ಆಡಳಿತವನ್ನು ಅಧಿಕೃತವಾಗಿ ಕೊನೆಗೊಳಿಸುವುದರ ಮೂಲಕ, ಉಗ್ರಗಾಮಿಗಳು ದಮಾಸ್ಕಸ್ ನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದರು.

ಅಂತರರಾಷ್ಟ್ರೀಯ ಸಮುದಾಯದ ಕರ್ತವ್ಯ
ಅನೇಕ ಕ್ರೈಸ್ತರು ಆಡಳಿತದ ಪತನವನ್ನು ಏಕೆ ಆಚರಿಸುತ್ತಿದ್ದಾರೆ ಎಂದು ಕೇಳಿದಾಗ, ಅಲೆಪ್ಪೊದ ಲತೀನ್-ಸಂಸ್ಕಾರವಿಧಿಯ ಧರ್ಮಕೇಂದ್ರದ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿರುವ, ಫ್ರಾನ್ಸಿಸ್ಕನ್ ಸಭೆಯ ಸದಸ್ಯರಾದ ಫ್ರಾನ್ ಬಜಾತ್ ಕರಕಾಚ್ ರವರು ವ್ಯಾಟಿಕನ್ ಸುದ್ಧಿಗೆ "ಎಲ್ಲಾ ಸಿರಿಯನ್ನರಂತೆ" ಕ್ರೈಸ್ತರೂ ಸಹ ಇವರ ಆಡಳತದಿಂದ "ಸಂಪೂರ್ಣವಾಗಿ ದಣಿದಿದ್ದಾರೆ" ಎಂದು ಹೇಳಿದರು. ಇವರ ಆಡಳಿತದಲ್ಲಿ "ಯಾವುದೇ ರೀತಿಯ ಅಭಿವೃದ್ಧಿ ಇರಲಿಲ್ಲ, ಆರ್ಥಿಕ ಬೆಳವಣಿಗೆ ಇರಲಿಲ್ಲ."

"ಇದು ಬದುಕುತ್ತಿಲ್ಲ, ಅದು ಬದುಕುಳಿಯುತ್ತಿದೆ ಅಷ್ಟೇ" ಎಂದು ಅವರು ಒತ್ತಿ ಹೇಳಿದರು.

ಕಳೆದ ಕೆಲವು ವರ್ಷಗಳಿಂದ ಬಂಡುಕೋರರು ವಶಪಡಿಸಿಕೊಂಡ ಆಸ್ತಿಯನ್ನು ಹಿಂದಿರುಗಿಸುವುದು ಸೇರಿದಂತೆ ಕ್ಕ್ರೈಸ್ತರಿಗೆ ಹೆಚ್ಚಿನ ಸಹಿಷ್ಣುತೆಯನ್ನು ತೋರಿಸಿದ್ದಾರೆ ಎಂದು ಫ್ರಾನ್ಸಿಸ್ಕನ್ ಸಭೆಯ ಸದಸ್ಯ ಹೇಳಿದರು. ಅವರು ಅಲೆಪ್ಪೊವನ್ನು ತೆಗೆದುಕೊಂಡು ದಕ್ಷಿಣಕ್ಕೆ ತೆರಳಿದ ನಂತರ, ಅವರು ಕ್ರೈಸ್ತರು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತ ಗುಂಪುಗಳಿಗೆ "ಸಹಿಷ್ಣುತೆಯ ಅತ್ಯಂತ ಬಲವಾದ ಸಂದೇಶಗಳನ್ನು" ಕಳುಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

"ದೇಶವನ್ನು ಸ್ಥಿರಗೊಳಿಸಲು ತನ್ನ ಪಾತ್ರವನ್ನು ನಿರ್ವಹಿಸಲು ಮತ್ತು ಸಿರಿಯನ್ನರು ಎಲ್ಲರ ಎಲ್ಲಾ ಹಕ್ಕುಗಳನ್ನು ಗೌರವಿಸುವ ಹೊಸ ಸಂವಿಧಾನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು" ಅಂತರಾಷ್ಟ್ರೀಯ ಸಮುದಾಯದ ಕರ್ತವ್ಯವನ್ನು ಧರ್ಮಗರು. ಕರಕಾಚ್ ರವರು ಒತ್ತಿ ಹೇಳಿದರು.

"ಇದು ನಮ್ಮ ಭರವಸೆ," ಎಂದು ಸಿರಿಯನ್ ಫ್ರಾನ್ಸಿಸ್ಕನ್ ಸಭೆಯವರು ಹೇಳಿದರು, "ಆದರೆ ವಿಷಯಗಳು ಹೇಗೆ ಹೊರಹೊಮ್ಮುತ್ತವೆ ಎಂಬುದನ್ನು ನಾವು ನೋಡಬೇಕಾಗಿದೆ."

ಅಲ್-ಜೋಲಾನಿ ಜೊತೆ ಸಭೆ
ವ್ಯಾಟಿಕನ್ ಸುದ್ಧಿಯು ಅಲೆಪ್ಪೊದ ಪ್ರೇಷಿತ ಶ್ರೇಷ್ಠಗುರುವಾದ ಮಹಾಧರ್ಮಾಧ್ಯಕ್ಷರಾದ ಹನ್ನಾ ಜಲ್ಲೌಫ್ ರವರೊಂದಿಗೆ ಮಾತನಾಡಿದ್ದಾರೆ, ಅವರು ಅಧಿಕಾರದ ವರ್ಗಾವಣೆಯು ರಕ್ತಪಾತವಿಲ್ಲದೆ ನಡೆದಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಹೇಳಿದರು.

ಮಹಾಧರ್ಮಾಧ್ಯಕ್ಷರು ಬಂಡುಕೋರರ ಅತಿದೊಡ್ಡ ಗುಂಪಿನ ನಾಯಕ ಅಲ್-ಜೋಲಾನಿ ರವರನ್ನು ಭೇಟಿಯಾಗಿರುವುದಾಗಿ ಹೇಳಿದರು, ಅವರು "ಕ್ರೈಸ್ತರು ಮತ್ತು ಅವರ ಆಸ್ತಿಯನ್ನು ಮುಟ್ಟುವುದಿಲ್ಲ ಮತ್ತು [ಉಗ್ರಗಾಮಿಗಳು] ನಮ್ಮ ಎಲ್ಲಾ ಕಾನೂನುಬದ್ಧ ವಿನಂತಿಗಳನ್ನು ಪೂರೈಸುತ್ತಾರೆ ಎಂಬ ಭರವಸೆಯನ್ನು" ನೀಡಿದರು.

ಇಲ್ಲಿಯವರೆಗೆ, ಮಹಾಧರ್ಮಾಧ್ಯಕ್ಷರಾದ ಜಲ್ಲೌಫ್ ರವರು, ಬಂಡುಕೋರರು ತಮ್ಮ ಮಾತಿಗೆ ಪ್ರಾಮಾಣಿಕರಾಗಿದ್ದರು ಮತ್ತು ಕ್ರೈಸ್ತರೊಂದಿಗೆ "ಮಹತ್ವದ ಅನುಗ್ರಹದಿಂದ" ನಡೆಸಿಕೊಂಡಿದ್ದಾರೆ.

'ನಿರ್ಣಾಯಕ ಪುನರ್ಜನ್ಮ'ದ ಭರವಸೆ
ಸ್ವಲ್ಪ ಹೆಚ್ಚು ಆಶಾವಾದದ ಕುರಿತು ದಮಾಸ್ಕಸ್‌ನ ಲ್ಯಾಟಿನ್-ಸಂಸ್ಕಾರವಿಧಿಯ ಧರ್ಮಕೇಂದ್ರದ ಯಾಜಕ, ಧರ್ಮಗುರು. ಫಿರಾಸ್ ಲುಟ್ಫಿ ನುಡಿದಿದ್ದಾರೆ, ಅವರು ಆಡಳಿತದ ಪತನವನ್ನು "ಮಾತೆ ಮರಿಯಳ ಹಬ್ಬದ ದಿನದಂದು ನಮಗೆ ಬರುವ ಉಡುಗೊರೆ: 53 ವರ್ಷಗಳ ಸರ್ವಾಧಿಕಾರಿ ಮತ್ತು ರಕ್ತಪಾತತದ ಸರ್ಕಾರದ ನಂತರ ಹೊಸ ಸಿರಿಯಾದ ಜನನ" ಎಂದು ವಿವರಿಸಿದರು.

ಆದಾಗ್ಯೂ, ದೇಶದ ಭವಿಷ್ಯದ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಕೇಳಬೇಕಾಗಿದೆ ಎಂದು ಅವರು ಹೇಳಿದರು, ವಿಶೇಷವಾಗಿ ವಿವಿಧ ರೀತಿಯ ಉಗ್ರಗಾಮಿ ಗುಂಪುಗಳು - ಅನೇಕ ವಿದೇಶಿ ಹೋರಾಟಗಾರರು ಸೇರಿದಂತೆ - ಈಗ ಅಧಿಕಾರವನ್ನು ಹೊಂದಿದ್ದಾರೆ.

"ನಿಸ್ಸಂಶಯವಾಗಿ ಅಧಿಕಾರವನ್ನು ಮರಳಿ ಪಡೆಯಲು ಬಂಡುಕೋರರಿಗೆ ಸಹಾಯ ಮಾಡಿದ" ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸಿರಿಯನ್ನರು ದೇಶವನ್ನು "ನೈಜ ಮತ್ತು ನಿರ್ಣಾಯಕ ಪುನರ್ಜನ್ಮಕ್ಕೆ ತರಲು ಸಾಧ್ಯವಾಗುತ್ತದೆ" ಎಂದು ಅವರು ಭರವಸೆಯನ್ನು ವ್ಯಕ್ತಪಡಿಸಿದರು. ಮತ್ತು ಅಲ್ಲಿರುವ ಎಲ್ಲಾ ಧರ್ಮಗಳು, ಜನಾಂಗಗಳು ಮತ್ತು ಪಂಗಡಗಳ ಸಿರಿಯನ್ನರನ್ನು ಸಮನಾಗಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ.

09 December 2024, 13:41