A rebel fighter guards on the street in front of a church in Damascus A rebel fighter guards on the street in front of a church in Damascus 

ಯುರೋಪಿನ ಧರ್ಮಾಧ್ಯಕ್ಷರುಗಳು ಸಿರಿಯಾದಲ್ಲಿ ಶಾಂತಿಯುತ ಪರಿವರ್ತನೆಗಾಗಿ ಪ್ರತಿಪಾದಿಸುತ್ತಿದ್ದಾರೆ

ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳು ಸಿರಿಯಾದ ಹೊಸ ಸರ್ಕಾರಿ ನಾಯಕರನ್ನು ಪಂಥೀಯತೆ ಮತ್ತು ಉಗ್ರವಾದವನ್ನು ತಿರಸ್ಕರಿಸಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸುತ್ತಿದ್ದಾರೆ.

ಲಿಂಡಾ ಬೋಂರ್ಢಾನಿಯವರಿಂದ

ಸಿರಿಯಾವು ತನ್ನ ಇತಿಹಾಸದಲ್ಲಿ ನಿರ್ಣಾಯಕ ಅಧ್ಯಾಯವನ್ನು ಪ್ರಾರಂಭಿಸಿದಾಗ, ಯುರೋಪಿನ ಧರ್ಮಾಧ್ಯಕ್ಷರುಗಳು "ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ಪರಿವರ್ತನೆ"ಗಾಗಿ ತಮ್ಮ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

"ಮಧ್ಯಪ್ರಾಚ್ಯ ರಾಷ್ಟ್ರವನ್ನು ಶ್ರೀಮಂತಗೊಳಿಸುವ ಅನೇಕ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಕೊಡುಗೆಗಳು ಮತ್ತು ಅನನ್ಯ ವ್ಯಕ್ತಿತ್ವದ ಲಕ್ಷಣಗಳನ್ನು ಅಳವಡಿಸಿಕೊಳ್ಳುವಾಗ ಪಂಥೀಯತೆ ಮತ್ತು ಉಗ್ರವಾದವನ್ನು ತಿರಸ್ಕರಿಸುವಂತೆ" ಅವರು ದೇಶದ ಹೊಸ ಅಧಿಕಾರಿಗಳನ್ನು ಒತ್ತಾಯಿಸಿದರು.

ಬುಧವಾರ, 11 ಡಿಸೆಂಬರ್, ಯುರೋಪಿನ ಒಕ್ಕೂಟದ ಧರ್ಮಾಧ್ಯಕ್ಷರುಗಳ (COMECE) ಸಮ್ಮೇಳನಗಳ ಆಯೋಗದಿಂದ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಯುರೋಪಿನ ಧರ್ಮಾಧ್ಯಕ್ಷರುಗಳು ಸಿರಿಯಾದಲ್ಲಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಎಂದು ಒತ್ತಿಹೇಳುತ್ತದೆ, ಅಲ್ಲಿ ಬಂಡಾಯ ಪಡೆಗಳು - ರಾಜಧಾನಿ ಮತ್ತು ಇತರ ಕಾರ್ಯತಂತ್ರದ ನಗರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಅಸ್ಸಾದ್ ರವರ ಆಡಳಿತವನ್ನು ಹೊರಹಾಕುವ ಬಗ್ಗೆ ಗಮನವಹಿಸಿದೆ.

ಧಾರ್ಮಿಕ ಅಲ್ಪಸಂಖ್ಯಾತರ ಗೌರವಕ್ಕಾಗಿ ಮನವಿ
ಹಯಾತ್ ತಾಹಿರ್-ಅಲ್-ಶಾಮ್ ರವರ (HTS) ಇಸ್ಲಾಮಿ ಉಗ್ರಗಾಮಿ ಗುಂಪು ಮತ್ತು ಅದರ ಮಿತ್ರರಾಷ್ಟ್ರಗಳ ಮಿಂಚಿನ ಕಾರ್ಯಾಚರಣೆಯ ನಂತರ ಬಶರ್ ಅಲ್-ಅಸ್ಸಾದ್ ರವರ ಸರ್ಕಾರವು ಪತನಗೊಂಡ ಮೂರೇ ದಿನಗಳ ನಂತರ, ಯುರೋಪಿನ ಧರ್ಮಾಧ್ಯಕ್ಷರುಗಳು "ಧಾರ್ಮಿಕ ದೇವಾಲಯಗಳು ಮತ್ತು ದೇವಾಲಯದ ಸೈಟ್‌ಗಳನ್ನು ರಕ್ಷಿಸಲು, ಅಲ್ಪಸಂಖ್ಯಾತರು, ಮಾನವೀಯ ನೆರವಿನ ಪ್ರವೇಶವನ್ನು ಒದಗಿಸುವುದು ಮತ್ತು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು (IDP ಗಳು) ಅವರ ಮನೆಗಳಿಗೆ ಸುರಕ್ಷಿತವಾಗಿ ಹಿಂದಿರುಗುವುದಕ್ಕೆ" ಸಹಾಯ ಮಾಡಲು ಸಿರಿಯಾದ ಹೊಸ ಅಧಿಕಾರಿಗಳಿಗೆ ಕರೆ ನೀಡಿದರು.

COMECE ಅಧ್ಯಕ್ಷರಿಂದ ಪತ್ರ

ಬಶರ್ ಅಲ್-ಅಸ್ಸಾದ್ ರವರ ಆಡಳಿತದ ಪತನದ ಮೊದಲು, 7 ಡಿಸೆಂಬರ್ 2024ರ ಪತ್ರದಲ್ಲಿ, COMECEನ ಅಧ್ಯಕ್ಷ, ಧರ್ಮಾಧ್ಯಕ್ಷರಾದ ಮರಿಯಾನೋ ಕ್ರೊಸಿಯಾಟಾರವರು, ಅಲೆಪ್ಪೊದ ಮರೋನೈಟ್ ಮಹಾಧರ್ಮಾಧ್ಯಕ್ಷರಾದ ಜೋಸೆಫ್ ಟೋಬ್ಜಿರವರು ಮತ್ತು ಅಲೆಪ್ಪೊದ ಕ್ರೈಸ್ತ ಧರ್ಮಸಭೆಯ ಇತರ ಎಲ್ಲಾ ಧರ್ಮಾಧ್ಯಕ್ಷರುಗಳೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.

"ನೀವು ಮತ್ತು ನಿಮ್ಮ ನಿಷ್ಠಾವಂತರು, ಅಲೆಪ್ಪೊ ಮತ್ತು ಸಿರಿಯಾದ ಇತರ ಭಾಗಗಳಲ್ಲಿ ಅನುಭವಿಸುತ್ತಿರುವ ಅಪಾರ ನೋವು ಮತ್ತು ಅನಿಶ್ಚಿತತೆಯ ಬಗ್ಗೆ ಐಕಮತ್ಯ, ಸಹಾನುಭೂತಿ ಮತ್ತು ಆಳವಾದ ಕಾಳಜಿ ತುಂಬಿದ ಹೃದಯದಿಂದ" ಧರ್ಮಾಧ್ಯಕ್ಷರಾದ ಕ್ರೊಸಿಯಾಟಾರವರು, ತಮ್ಮ ನಿಕಟತೆಯ ಭರವಸೆಯನ್ನು ನೀಡುತ್ತಾ ಪತ್ರವನ್ನು ಬರೆದಿದ್ದಾರೆ.

ಅವರು ಸಿರಿಯಾದ ಜನರ ಅಗತ್ಯಗಳಿಗಾಗಿ ಪ್ರತಿಪಾದಿಸಲು COMECE ನ ಬದ್ಧತೆಯನ್ನು ಒತ್ತಿಹೇಳಿದರು, ಮನೆಗಳನ್ನು ಪುನರ್ನಿರ್ಮಾಣ ಮಾಡಲು, ಜೀವನೋಪಾಯವನ್ನು ಪುನಃಸ್ಥಾಪಿಸಲು ಮತ್ತು ನಡೆಯುತ್ತಿರುವ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಅನುಸರಿಸಲು ಸಹಾಯ ಮಾಡಲು ಜಾಗೃತಿ ಮತ್ತು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಧರ್ಮಾಧ್ಯಕ್ಷರುಗಳ ಸಮರ್ಪಣೆಯನ್ನು ಪುನರುಚ್ಚರಿಸಿದರು.

11 December 2024, 11:59