FILES-US-JUSTICE-EXECUTION-TEXAS FILES-US-JUSTICE-EXECUTION-TEXAS  (AFP or licensors)

ಅಮೇರಿಕಾದ ಧರ್ಮಾಧ್ಯಕ್ಷರುಗಳು ಅಧ್ಯಕ್ಷ ಬೈಡೆನ್‌ರವರಗೆ ಸಂಯುಕ್ತ ರಾಷ್ಟ್ರದ ಮರಣದಂಡನೆಯನ್ನು ಬದಲಾಯಿಸಲು ಕರೆ ನೀಡುತ್ತಾರೆ

ಅಮೇರಿಕಾದ ಧರ್ಮಾಧ್ಯಕ್ಷರುಗಳು ಅಧ್ಯಕ್ಷ ಜೋ ಬೈಡೆನ್ ರವರ ಅಧಿಕಾರ ಅವಧಿಯು ಮುಗಿಯುವುದಕ್ಕೂ ಮೊದಲು ಸಂಯುಕ್ತ ರಾಷ್ಟ್ರದ ಮರಣದಂಡನೆಯ ಪುರುಷರ ಶಿಕ್ಷೆಯನ್ನು ಕಡಿಮೆ ಮಾಡಲು ಮನವಿ ಮಾಡಿದ್ದಾರೆ.

ಡೆವಿನ್ ವಾಟ್ಕಿನ್ಸ್ ರವರಿಂದ

"ಅಧ್ಯಕ್ಷ ಬೈಡೆನ್ ರವರು ತಮ್ಮ ಅಧಿಕಾರವನ್ನು ತೊರೆಯಲು ತಯಾರಿ ನಡೆಸುತ್ತಿರುವಾಗ, ದಯವಿಟ್ಟು, ಅವರ ಅವಧಿ ಮುಗಿಯುವ ಮೊದಲು ಎಲ್ಲಾ ಪ್ರಸ್ತುತ ಸಂಯುಕ್ತ ರಾಷ್ಟ್ರದ ಮರಣದಂಡನೆಗಳನ್ನು ಜೈಲು ಶಿಕ್ಷೆಗೆ ಬದಲಾಯಿಸುವಂತೆ ಒತ್ತಾಯಿಸುವಂತೆ ಮನವಿ ಮಾಡುತ್ತಿದ್ದಾರೆ."

ಯುನೈಟೆಡ್ ಸ್ಟೇಟ್ಸ್ ಕಾನ್ಫರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ಸ್/ ಕಥೋಲಿಕ ಧರ್ಮಾಧ್ಯಕ್ಷರುಗಳ ಅಮೇರಿಕಾದ ಸಮ್ಮೇಳನದ (USCCB) ಜಾಲತಾಣದಲ್ಲಿ ಅಮೇರಿಕಾದ ಧರ್ಮಾಧ್ಯಕ್ಷರುಗಳು ಅಮೆರಿಕದ ಜನತೆಗೆ ಮನವಿ ಮಾಡಿದರು.

ವಿಶ್ವಗುರು ಫ್ರಾನ್ಸಿಸ್ ರವರು ಅಮೇರಿಕಾದಲ್ಲಿ ಮರಣದಂಡನೆಯಲ್ಲಿರುವ ಕೈದಿಗಳಿಗಾಗಿ" ಪ್ರಾರ್ಥಿಸಲು ಪ್ರತಿಯೊಬ್ಬರನ್ನು ಆಹ್ವಾನಿಸಿದ, ಕೇವಲ ಒಂದು ದಿನದ ನಂತರ ಈ ವಿಷಯವು ಎಲ್ಲರಿಗೂ ಹರಡಿದೆ.

"ಅವರ ಶಿಕ್ಷೆಯನ್ನು ಬದಲಾಯಿಸಲು, ನಾವೆಲ್ಲರೂ ಪ್ರಾರ್ಥಿಸೋಣ" ಎಂದು ಭಾನುವಾರ ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವಗುರುರವರು ಹೇಳಿದರು. "ನಾವು ನಮ್ಮ ಈ ಸಹೋದರ ಸಹೋದರಿಯರ ಬಗ್ಗೆ ಯೋಚಿಸೋಣ ಮತ್ತು ಅವರನ್ನು ಸಾವಿನಿಂದ ರಕ್ಷಿಸಲು ಭಗವಂತನ ಅನುಗ್ರಹವನ್ನು ಬೇಡೋಣ" ಎಂದು ಪ್ರಾರ್ಥಿಸಿದರು.

ಅಸಾಧಾರಣ ಅವಕಾಶ
ತಮ್ಮ ಮನವಿಯಲ್ಲಿ, ಅಮೇರಿಕಾದ ಧರ್ಮಾಧ್ಯಕ್ಷರುಗಳು ಅಧ್ಯಕ್ಷ ಜೋ ಬೈಡನ್ ರವರು "ಎಲ್ಲಾ ಸಂಯುಕ್ತ ರಾಷ್ಟ್ರದ ಮರಣದಂಡನೆಗಳನ್ನು ಜೈಲು ಶಿಕ್ಷೆಗೆ ಪರಿವರ್ತಿಸುವ ಮೂಲಕ ಮತ್ತು ಪ್ರಸ್ತುತ ಸಂಯುಕ್ತ ರಾಷ್ಟ್ರದ ಮರಣದಂಡನೆಯಲ್ಲಿರುವ 40ಪುರುಷರ ಜೀವಗಳನ್ನು ಉಳಿಸುವ ಮೂಲಕ ಮಾನವ ಘನತೆಯ ಕಾಪಾಡುವ ಅಸಾಧಾರಣ ಅವಕಾಶವನ್ನು ಹೊಂದಿದ್ದಾರೆ" ಎಂದು ಹೇಳಿದರು.

ಅಭಿಯಾನದ ಜಾಲತಾಣದಲ್ಲಿ ಅಮೆರಿಕದ ಜನತೆಗೆ ಅಧ್ಯಕ್ಷ ಬೈಡೆನ್‌ ರವರಿಗೆ ಬರವಣಿಗೆಯಲ್ಲಿ ಸಂಪರ್ಕ ಮಾಡಲು ನಮೂನೆಗಳ ಸಹಾಯವನ್ನೂ ಸಹ ನೀಡುತ್ತದೆ.
ಅಮೇರಿಕಾದ ಸಂಯುಕ್ತ ರಾಷ್ಟ್ರದ ಸರ್ಕಾರವು ಸೀಮಿತ ಅಪರಾಧಗಳಿಗೆ ಮರಣದಂಡನೆಯನ್ನು ಕೋರುವ ಅಧಿಕಾರವನ್ನು ಹೊಂದಿದೆ, ಹೆಚ್ಚಿನ ಮರಣದಂಡನೆಯನ್ನು ರಾಜ್ಯ ನ್ಯಾಯಾಲಯಗಳು ನೀಡುತ್ತವೆ ಎಂದು ಹೇಳಿದ್ದಾರೆ.

ಧರ್ಮಾಧ್ಯಕ್ಷರುಗಳು ಮರಣದಂಡನೆಗೆ ತಮ್ಮ ದೀರ್ಘಕಾಲದ ವಿರೋಧವನ್ನು ನೆನಪಿಸಿಕೊಂಡರು, ಇದು 1974 ರಷ್ಟು ಹಳೆಯ ವಿಷಯವು ಎಂದು ನೆನಪಿಸಿಕೊಂಡರು.
ಮರಣದಂಡನೆಯು ಪುನರ್ವಸತಿ ಮತ್ತು ಸುಧಾರಣೆಯ ಸಾಧ್ಯತೆಯನ್ನು ಹೊರತುಪಡಿಸುತ್ತದೆ, ಅಪರಾಧಕ್ಕೆ ಒಳಗೊಂಡಿರುವ ಪ್ರತಿಯೊಬ್ಬರಿಗೂ ವ್ಯಾಪಕವಾದ ವೇದನೆಗೆ ಕಾರಣವಾಗುತ್ತದೆ, ಅನ್ಯಾಯ ಮತ್ತು ತಾರತಮ್ಯದ ರೀತಿಯಲ್ಲಿ ಈ ಶಿಕ್ಷೆಯನ್ನು ನಡೆಸಲಾಗುತ್ತದೆ ಮತ್ತು ತಪ್ಪುಗಳ ಸಾಧ್ಯತೆಯನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಕಥೋಲಿಕ ಧರ್ಮಸಭೆಯ ಧರ್ಮೋಪದೇಶವನ್ನು ವಿಶ್ವಗುರು ಫ್ರಾನ್ಸಿಸ್ ರವರು 2018ರ ಬದಲಾವಣೆಯನ್ನು ಅಮೇರಿಕಾದ ಧರ್ಮಾಧ್ಯಕ್ಷರುಗಳು ಸೂಚಿಸಿದರು, ಅದು ಹೇಳುವುದೇನೆಂದರೆ "ಧರ್ಮಸಭೆಯು, ಶುಭಸಂದೇಶದ ಬೆಳಕಿನಲ್ಲಿ, ನಮಗೆ ಬೋಧಿಸುವುದೇನೆಂದರೆ ' ಮರಣದಂಡನೆಯು ಸ್ವೀಕಾರಾರ್ಹವಲ್ಲ ಏಕೆಂದರೆ ಅದು ವ್ಯಕ್ತಿಯ ಉಲ್ಲಂಘನೆ ಮತ್ತು ಘನತೆಯ ಮೇಲಿನ ಆಕ್ರಮಣವಾಗಿದೆ' ಮತ್ತು ಧರ್ಮಸಭೆಯು ವಿಶ್ವಾದ್ಯಂತ ಮರಣದಂಡನೆಗೆ ಹಾಗೂ ಅದರ ನಿರ್ಮೂಲನೆಗಾಗಿ ನಿರ್ಣಯದೊಂದಿಗೆ ಕೆಲಸ ಮಾಡುತ್ತಿದೆ.

ಭರವಸೆಯ ವಾರ್ಷಿಕೋತ್ಸವದ ಆರಂಭದೊಂದಿಗೆ ಹೊಂದಿಕೆಯಾಗುತ್ತದೆ
ಸಂಯುಕ್ತರಾಷ್ಟ್ರದ ಮರಣದಂಡನೆಯ ಶಿಕ್ಷೆಯನ್ನು ಬದಲಾಯಿಸಲು ಅಧ್ಯಕ್ಷ ಬೈಡೆನ್ ರವರನ್ನು ಒತ್ತಾಯಿಸಲು ಹೆಚ್ಚಿನ ಸಂಖ್ಯೆಯ ವಕೀಲರ ಗುಂಪುಗಳು ಸೇರಿಕೊಂಡಿವೆ.

ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್ (CMN) ಅಮೇರಿಕಾದಲ್ಲಿ ಮರಣದಂಡನೆಯನ್ನು ರದ್ದುಗೊಳಿಸುವ ಕಥೋಲಿಕ ಚಳುವಳಿಯನ್ನು ಮುನ್ನಡೆಸಿದೆ, ಅಧ್ಯಕ್ಷ ಬೈಡೆನ್ ರವರ ಅವಧಿಯ ಅಂತ್ಯವನ್ನು ಒಂದು ಅನನ್ಯ ಅವಕಾಶವಾಗಿ ತೆಗೆದುಕೊಂಡಿದೆ.

ನವೆಂಬರ್‌ನಲ್ಲಿ ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, CMN ಕಾರ್ಯನಿರ್ವಾಹಕ ನಿರ್ದೇಶಕರಾದ ಕ್ರಿಸಾನ್ನೆ ವೈಲನ್‌ಕೋರ್ಟ್ ಮರ್ಫಿರವರು, "ಸಂಯುಕ್ತ ರಾಷ್ಟ್ರದ ಮರಣದಂಡನೆಯನ್ನು ಬದಲಾಯಿಸಲು ಕ್ರಮ ತೆಗೆದುಕೊಳ್ಳುವ ಸಾಂವಿಧಾನಿಕ ಅಧಿಕಾರ ಮತ್ತು ಸಂಯುಕ್ತ ರಾಷ್ಟ್ರದ ಮರಣದಂಡನೆಯ ಶಿಕ್ಷೆಯನ್ನು ಬದಲಿಸುವ ಅಧಿಕಾರ" ಅಧ್ಯಕ್ಷರಿಗೆ ಇದೆ ಎಂದು ಹೇಳಿದರು.

ಅಧ್ಯಕ್ಷ ಬೈಡೆನ್ ರವರ ಅವಧಿಯು ಜನವರಿ 20, 2025ರಂದು ಕೊನೆಗೊಳ್ಳುತ್ತದೆ, 2025ರ ಭರವಸೆಯ ವಾರ್ಷಿಕೋತ್ಸವದೊಂದಿಗೆ ಸುಮಾರು ಒಂದು ತಿಂಗಳ ಕಾಲ ಅತಿಕ್ರಮಿಸುತ್ತದೆ, ಇದು ಕ್ರಿಸ್ತ ಜಯಂತಿಯ ಹಬ್ಬದ 2024ರಂದು ಪ್ರಾರಂಭವಾಗುತ್ತದೆ.

ವಾರ್ಷಿಕೋತ್ಸವ ವರ್ಷದ ಬೈಬಲ್ ಸಂಪ್ರದಾಯವು, ಅಧ್ಯಕ್ಷ ಬೈಡೆನ್ ಸೇರಿದಂತೆ ಕಥೋಲಿಕರಿಗೆ "ಮರುಸಮತೋಲನ ಮತ್ತು ನ್ಯಾಯ ಮತ್ತು ಕರುಣೆಗೆ ಮರುಸಮರ್ಥನೆ ಮಾಡುವ ಸಮಯ" ನೀಡುತ್ತದೆ ಎಂದು ಶ್ರೀಮತಿ ವೈಲನ್‌ಕೋರ್ಟ್ ಮರ್ಫಿರವರು ಹೇಳಿದರು.

10 December 2024, 13:50