ಭಾರತದ ಬೆಂಗಳೂರಿನಲ್ಲಿರುವ ಮಹಾಧರ್ಮಕ್ಷೇತ್ರವು ವಲಸಿಗರಿಗೆ ಸುರಕ್ಷಿತ ಆಶ್ರಯವನ್ನು ನೀಡುತ್ತದೆ

ಭಾರತದ ಬೆಂಗಳೂರಿನಲ್ಲಿರುವ ಮಹಾಧರ್ಮಕ್ಷೇತ್ರವು ವಲಸಿಗರಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುವ ಉಪಕ್ರಮವನ್ನು "ವಲಸಿಗರ ಸತ್ಕಾರ ಮತ್ತು ಅಲ್ಪಾವಧಿಯ ಕೇಂದ್ರ" ದೊಂದಿಗೆ ಪ್ರಾರಂಭಿಸಿದೆ.

ಸಿಸ್ಟರ್‌. ಫ್ಲೋರಿನಾ ಜೋಸೆಫ್ ರವರಿಂದ, SCN

ತನ್ನ ಸೇವೆ ಮತ್ತು ಒಳಗೊಳ್ಳವಿಕೆಯ ಧ್ಯೇಯದಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುವ ಮೂಲಕ, ಬೆಂಗಳೂರಿನ ಮಹಾಧರ್ಮಕ್ಷೇತ್ರವು ವಲಸಿಗರಿಗೆ ಆಶ್ರಯ ನೀಡಲು “ವಲಸಿಗರ ಸತ್ಕಾರ ಮತ್ತು ಅಲ್ಪಾವಧಿಯ ಕೇಂದ್ರ” ವನ್ನು ಪ್ರಾರಂಭಿಸಿದೆ.

ಯಶವಂತಪುರದ ರೈಲು ನಿಲ್ದಾಣದ ಸಮೀಪದಲ್ಲಿರುವ ಮತ್ತಿಕೆರೆಯಲ್ಲಿ ಈ ಕೇಂದ್ರವಿದ್ದು, ಅಗತ್ಯವಿರುವವರು ಈ ಸ್ಥಳವನ್ನು ಸುಲಭವಾಗಿ ತಲುಪಬಹುದಾಗಿದೆ.
ಬೆಂಗಳೂರು, ಭಾರತದ ಕರ್ನಾಟಕದ ರಾಜಧಾನಿ, ಇದು ಸಾಕಷ್ಟು ವಲಸೆಗಾರರಿಗೆ ನೆಲೆಯಾಗಿದೆ. ಟೈಮ್ಸ್ ಆಫ್ ಇಂಡಿಯಾದ ವಾರ್ತಾಪತ್ರಿಕೆಯ ವರದಿಗಳ ಪ್ರಕಾರ ಬೆಂಗಳೂರು ನಗರದಲ್ಲಿರುವ ನಿವಾಸಿಗಳಲ್ಲಿ ಸುಮಾರು ಅರ್ಧದಷ್ಟು ವಲಸಿಗರೇ ಎಂದು ಸೂಚಿಸುತ್ತವೆ.
ಈ ವಾಸ್ತವವನ್ನು ಗುರುತಿಸಿ, ಮಹಾಧರ್ಮಕ್ಷೇತ್ರವು ಈ ಆಶ್ರಯವನ್ನು ಸ್ಥಾಪಿಸುವ ಮೂಲಕ, ಈ ನಿರ್ಣಾಯಕ ಕಾರಣಕ್ಕಾಗಿ ಹೂಡಿಕೆ ಮಾಡಿದೆ.

ಅಡಿಪಾಯದ ಸಮಾರಂಭ
ಡಿಸೆಂಬರ್ 1ರಂದು, ಭಾರತ ಮತ್ತು ನೇಪಾಳದ, ಪ್ರೇಷಿತ ರಾಯಭಾರಿಯಾದ ಮಹಾಧರ್ಮಾಧ್ಯಕ್ಷರಾದ ಲಿಯೋಪೋಲ್ಡೊ ಗಿರೆಲ್ಲಿರವರು, ಮಹಾಧರ್ಮಾಧ್ಯಕ್ಷರಾದ ಪೀಟರ್ ಮಚಾಡೋರವರು, ಸಹಾಯಕ ಧರ್ಮಾಧ್ಯಕ್ಷರಾದ ಆರೋಕ್ಯ ರಾಜ್ ಸತೀಸ್ ಕುಮಾರ್ ರವರು, ಧರ್ಮಕೇಂದ್ರದ ಧರ್ಮಗುರು ಮತ್ತು ಕ್ರಿಸ್ತ ರಾಜರ ಧರ್ಮಕೇಂದ್ರದ ಭಕ್ತಾಧಿಗಳ ಉಪಸ್ಥಿತಿಯಲ್ಲಿ, ಈ ವಲಸಿಗರ ಸತ್ಕಾರ ಮತ್ತು ಅಲ್ಪಾವಧಿಯ ಕೇಂದ್ರದ ಅಡಿಪಾಯವನ್ನು ಆಶೀರ್ವದಿಸಿದರು.

ಮಹಾಧರ್ಮಾಧ್ಯಕ್ಷರಾದ ಲಿಯೋಪೋಲ್ಡೊ ಗಿರೆಲ್ಲಿರವರು ಈ ಯೋಜನೆಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಇದು ವಲಸಿಗರ ಘನತೆಯನ್ನು ಎತ್ತಿ ಹಿಡಿಯುವ ಶ್ಲಾಘನೀಯ ಪ್ರಯತ್ನ ಎಂದು ತಮ್ಮ ಪದಗಳಿಂದ ಬಣ್ಣಿಸಿದರು.

"ವಲಸಿಗರು ದೇವರಿದ್ದಂತೆ ಮತ್ತು ಅವರನ್ನು ಗೌರವದಿಂದ ಸ್ವಾಗತಿಸಬೇಕು" ಎಂದು ಅವರು ಹೇಳಿದರು. "ಬೆಂಗಳೂರಿನ ಮಹಾಧರ್ಮಕ್ಷೇತ್ರವು ನಿಜವಾಗಿಯೂ 'ಅತಿಥಿ ದೇವೋ ಭವ' (ಅತಿಥಿ ದೇವರಿಗೆ ಸಮಾನರಾದವರು) ಎಂಬ ಭಾರತೀಯ ಸಾಂಸ್ಕೃತಿಕ ನೀತಿಯಲ್ಲಿ ಜೀವಿಸುತ್ತಿದೆ ಮತ್ತು ವಲಸಿಗರ ಅಗತ್ಯಗಳನ್ನು ತಿಳಿಸುವ ವಿಶ್ವಗುರು ಫ್ರಾನ್ಸಿಸ್ ರವರ ದೃಷ್ಟಿಗೆ ಅನುಗುಣವಾಗಿರುತ್ತದೆ."

ಈ ವಲಸಿಗರ ಕೇಂದ್ರ, "ಅವರ ಘನತೆಯನ್ನು ದೃಢೀಕರಿಸುವ ಮತ್ತು ನಮ್ಮ ಕ್ರಿಯೆಗಳ ಮೂಲಕ ಅವರಿಗೆ ಕ್ರಿಸ್ತನ ಪ್ರೀತಿಯನ್ನು ತೋರಿಸುವ ಒಂದು ಹೆಜ್ಜೆಯಾಗಿದೆ" ಎಂದು ಅವರು ಟೀಕಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರೇಷಿತ ರಾಯಭಾರಿ, ಪಾದ್ರಿಗಳು, ಧಾರ್ಮಿಕ ಮುಖಂಡರು ಮತ್ತು ಧರ್ಮಕೇಂದ್ರದ ಭಕ್ತಾಧಿಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು.

ಮಹಾಧರ್ಮಾಧ್ಯಕ್ಷರಾದ ಪೀಟರ್‌ ಮಚಾಡೊರವರು ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸಲು ವ್ಯಾಟಿಕನ್ ಅಧೀನ ಕಾರ್ಯದರ್ಶಿಯಾಗಿರುವ ಮತ್ತು ಡಿಕಾಸ್ಟರಿಯ ಅಂಡರ್ ಸೆಕ್ರೆಟರಿ ನೇಮಿತ ಕಾರ್ಡಿನಲ್ ರಾದ ಫ್ಯಾಬಿಯೊ ಬ್ಯಾಗಿಯೊರವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

"ವಲಸಿಗರ ಸತ್ಕಾರ ಮತ್ತು ಅಲ್ಪಾವಧಿಯ ಕೇಂದ್ರ"ವನ್ನು ನಿರ್ವಹಿಸುವ ಸ್ಕಲಾಬ್ರಿನಿಯನ್ ಧರ್ಮಪ್ರಚಾರಕರ ಬೆಂಬಲವನ್ನು ಅವರು ಒಪ್ಪಿಕೊಂಡರು. ಯೋಜನೆಯು ಬೆಂಗಳೂರು ವಿವಿಧೋದ್ದೇಶ ಸಮಾಜ ಸೇವಾ ಸೊಸೈಟಿ (BMSSS) ಆಶ್ರಯದಲ್ಲಿ ಸಂಯೋಜಿಸಲ್ಪಟ್ಟಿದೆ.

ಶುಭಸಂದೇಶದ ಮೌಲ್ಯಗಳಿಗೆ ಸಾಕ್ಷಿ
ಈ ಯೋಜನೆಯು ವಿಶ್ವಗುರು ಫ್ರಾನ್ಸಿಸ್ ರವರ ಮಾತುಗಳನ್ನು ನೆನಪಿಸುತ್ತದೆ, "ನಮ್ಮ ಬಾಗಿಲನ್ನು ತಟ್ಟುವ ಪ್ರತಿಯೊಬ್ಬ ಅಪರಿಚಿತನು ಯೇಸುಕ್ರಿಸ್ತರನ್ನು ಭೇಟಿಯಾಗಲು ಅವಕಾಶವಾಗಿದೆ, ಈ ಒಂದು ಯೋಜನೆಯು ಪ್ರತಿ ವಯಸ್ಸಿನ ಹಂತದವರನ್ನು ಸ್ವಾಗತಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಅಪರಿಚಿತರೊಂದಿಗೆ ಗುರುತಿಸಿಕೊಳ್ಳುತ್ತಾರೆ."

ಪತ್ರಿಕಾ ಹೇಳಿಕೆಯ ಪ್ರಕಾರ, ಈ ಉಪಕ್ರಮವು ಪ್ರೀತಿ, ಸೇವೆ ಮತ್ತು ಒಳಗೊಳ್ಳುವಿಕೆಯ ಶುಭಸಂದೇಶದ ಮೌಲ್ಯಗಳಿಗೆ ಬೆಂಗಳೂರಿನ ಮಹಾಧರ್ಮಕ್ಷೇತ್ರವು ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

"ವಲಸಿಗರ ಸತ್ಕಾರ ಮತ್ತು ಅಲ್ಫಾವಧಿ ಕೇಂದ್ರ"ವು ನಿರಾಶ್ರಿತರನ್ನು ಮತ್ತು ದುರ್ಬಲರನ್ನು ಕಾಳಜಿ ವಹಿಸುವ ಧರ್ಮಸಭೆಯ ಧ್ಯೇಯಕ್ಕೆ ಸಾಕ್ಷಿಯಾಗಿದೆ ಮತ್ತು ಇತರರನ್ನು ಪ್ರೀತಿಸುವ ಮತ್ತು ಸಹಾನುಭೂತಿಯಿಂದ ಸೇವೆ ಮಾಡುವ ದೈವಕರೆಯನ್ನು ನೆನಪಿಸುತ್ತದೆ.

03 December 2024, 14:28