ಭಾರತ: ತಮಿಳುನಾಡಿನ ಧಾರ್ಮಿಕ ಸಹೋದರಿಯರು ಹಿಂಸೆ ಮತ್ತು ನಿಂದನೆಗೊಳಗಾದ ಸಂತ್ರಸ್ತರನ್ನು ಆರೈಕೆ ಮಾಡುತ್ತಿದ್ದಾರೆ.
ಅನ್ನಿ ಪ್ರೆಕೆಲ್ ರವರಿಂದ
ನಿಂದನೆಯಿಂದ ಬದುಕುಳಿದವರು ಆಗಾಗ್ಗೆ ಸಿಸ್ಟರ್. ಜಾನ್ಸಿರವರ ಬಳಿ ವ್ಯಕ್ತಪಡಿಸುವ ಕೆಲವು ಪ್ರಶ್ನೆಗಳಿವು, “ಜನರು ನನ್ನನ್ನು ಏಕೆ ತಿರಸ್ಕರಿಸುತ್ತಾರೆ ಅಥವಾ ಅವರು ಈಗ ನನ್ನನ್ನು ಏಕೆ ವಿಭಿನ್ನವಾಗಿ ನೋಡುತ್ತಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ನಾನು ಏನನ್ನೂ ಮಾಡಿಲ್ಲ, ನನ್ನನ್ನು ಸ್ವೀಕರಿಸುತ್ತಿಲ್ಲ."
ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ಸಹೋದರಿ ಜಾನ್ಸಿ ನಂಬಿಕೈರಾಜ್ ರವರು ಹಂಚಿಕೊಂಡದ್ದ ವಿಷಯಗಳಿವು, ಜನರು ದೌರ್ಜನ್ಯದ ಬಗ್ಗೆ ತಿಳಿದಾಗ ಸಂತ್ರಸ್ತರು ಮತ್ತು ಅವರ ಕುಟುಂಬಗಳು ಕಳಂಕಿತರಾಗುತ್ತಾರೆ.
ಸಹೋದರಿ ಜಾನ್ಸಿರವರು ಒಬ್ಬ ಸಮಾಜ ಸೇವಕಿಯಾಗಿದ್ದು, ಆಕೆಯು ಭಾರತದ ತಮಿಳುನಾಡಿನ ಪರ್ವತ ಪ್ರದೇಶದಲ್ಲಿ ಗುಡಲೂರು ಸಮುದಾಯದ ಬಡ ಹಿನ್ನೆಲೆಯ ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದಾರೆ.
“ಕೆಲವರು ವಿವಿಧ ರೀತಿಯ ನಿಂದನೆಗಳನ್ನು ಎದುರಿಸಿದ್ದಾರೆ: ದೈಹಿಕ, ಮಾನಸಿಕ, ಲೈಂಗಿಕ. ನಾವು ಅವರಿಗಾಗಿ ಒಂದು ನಿವಾಸವನ್ನು ಹೊಂದಿದ್ದೇವೆ, ನಾವು ಅವರನ್ನು ಆರೈಕೆಮಾಡುತ್ತೇವೆ ಮತ್ತು ಪ್ರಥಮ ಚಿಕಿತ್ಸೆಯನ್ನೂ ನೀಡುತ್ತೇವೆ. ಅವರು ನಮ್ಮ ಬಳಿಗೆ ಬಂದಾಗ, ನಾವು ವಿವಿಧ ಹಂತಗಳಲ್ಲಿ ಸಮಾಲೋಚನೆಯನ್ನು ನೀಡುತ್ತೇವೆ,” ಎಂದು ಸಿಸ್ಟರ್ಸ್ ಆಫ್ ಸೇಂಟ್ಸ್ ಬಾರ್ಟೋಲೋಮಿಯಾ ಕ್ಯಾಪಿಟಾನಿಯೊ ಮತ್ತು ವಿನ್ಸೆಂಜಾ ಗೆರೋಸಾ (ಎಸ್‌ಸಿಸಿಜಿ)/ ಕ್ಯಾಪಿತಾನಿಯಾದ ಸಂತ ಬರ್ತಲೋಮಿಯಾ ಮತ್ತು ವಿನ್ಸೆಂಜಾ ಗೆರೋಸಾದ, ಧಾರ್ಮಿಕ ಸಹೋದರಿಯರ ಸಭೆಯ ಸದಸ್ಯರಾದ ಇವರು ವಿವರಿಸಿದರು, ಇದನ್ನು ಸಿಸ್ಟರ್ಸ್ ಆಫ್ ಮಾರಿಯಾ ಬಾಂಬಿನಾ ಎಂದೂ ಸಹ ಕರೆಯುತ್ತಾರೆ. ಈ ಒಂದು ಧಾರ್ಮಿಕ ಸಭೆಯು, ಇಟಲಿಯಲ್ಲಿರುವ ಲೊವರೆಯಲ್ಲಿ, 1832 ರಲ್ಲಿ ಸ್ಥಾಪಿತವಾಯಿತು.
ಬಡತನ ಮತ್ತು ಪರಿತ್ಯಾಗವು ನಿಂದನೆಗೆ ಫಲವತ್ತಾದ ನೆಲವಾಗಿದೆ ಎಂದು ಸಾಮಾಜಿಕ ಸಂದರ್ಭಗಳನ್ನು ಉಲ್ಲೇಖಿಸಿ ಸಿಸ್ಟರ್ ಜಾನ್ಸಿರವರು ವಿವರಿಸಿದರು.
“ಈ ಹುಡುಗಿಯರಿಗೆ ಮನೆಯಲ್ಲಿ ಅಗತ್ಯ ಗೌಪ್ಯತೆ ಇಲ್ಲ, ಮತ್ತು ನಂತರ ಬಡತನವಿದೆ. ಪೋಷಕರು ದುಡಿಯಬೇಕು ಎಂಬ ಕಾರಣಕ್ಕೆ ಅವರನ್ನು ಮನೆಯಲ್ಲಿಯೇ ಬಿಟ್ಟು ಹೋಗುವ ಪರಿಸ್ಥತಿಯಲ್ಲಿದ್ದಾರೆ. ಈ ರೀತಿ ಉದಾಹರಣೆಗೆ, ನೆರೆಹೊರೆಯವರ ಅಥವಾ ಕುಟುಂಬವನ್ನು ತಿಳಿದಿರುವ ಜನರ ಕೈಯಿಂದ ಅಪ್ರಾಪ್ತ ವಯಸ್ಕರು ದೌರ್ಜನ್ಯಕ್ಕೆ ಒಳಗಾಗುತ್ತಾರೆ.
ತಮಿಳುನಾಡು ಭಾರತದ ಅತ್ಯಂತ ಕೈಗಾರಿಕೀಕರಣಗೊಂಡ ಮತ್ತು ತುಲನಾತ್ಮಕವಾಗಿ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ಅದೇನೇ ಇದ್ದರೂ, ಬಾಲ ಕಾರ್ಮಿಕರು, ಅಪೌಷ್ಟಿಕತೆ, ನಿರುದ್ಯೋಗ ಮತ್ತು ದುರುಪಯೋಗದಂತಹ ಸಾಮಾಜಿಕ ಅಸಮಾನತೆಗಳು ಮತ್ತು ಸಮಸ್ಯೆಗಳಿವೆ.
ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಅಂತರಂಗದಿಲೇ ನಾಶವಾಗುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಹೇಳಿದರು. "ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ತೋರುತ್ತದೆ. ಆದರೆ ಅವರ ಹತ್ತಿರ ಹೋದಾಗ, ಅವರ ದುಃಖ, ನೋವು ಎಷ್ಟು ಆಳವಾಗಿ ಗಾಯಗೊಂಡಿದ್ದಾರೆಂದು ತಿಳಿಯುತ್ತದೆ."
ಸಿಸ್ಟರ್ ಜಾನ್ಸಿರವರು ಪ್ರಸ್ತುತ 50 ಯುವತಿಯರು/ಹುಡುಗಿಯರನ್ನು ನೋಡಿಕೊಳ್ಳುತ್ತಿದ್ದಾರೆ, ಅವರಲ್ಲಿ ಹಲವರು ಅನಾಥರು ಅಥವಾ ಅರೆ-ಅನಾಥರು. ಸಭೆಯು ಅವರಿಗೆ ಚಿಕಿತ್ಸಕ ಸಹಾಯವನ್ನು ನೀಡಲು ಸಾಧ್ಯವಾಗುವುತ್ತಿಲ್ಲ, ಆದರೆ ಇದು ವಸತಿ ಮತ್ತು ಶಿಕ್ಷಣವನ್ನು ಒದಗಿಸುತ್ತದೆ. ಇತರರು, ದುರದೃಷ್ಟವಶಾತ್, ಮನೆಗೆ ಮರಳಬೇಕಾಗುತ್ತದೆ, ಅಲ್ಲಿ ಅವರು ಸಾಮಾನ್ಯವಾಗಿ ಸುರಕ್ಷಿತವಾಗಿರುವುದಿಲ್ಲ.
ಸಂತ್ರಸ್ತರನ್ನು ತಲುಪಲು, ಸಭೆಯು "ಚೈಲ್ಡ್‌ಲೈನ್ 1098" ಎಂಬ ಹಾಟ್‌ಲೈನ್ ಅನ್ನು ಸಹ ಹೊಂದಿದೆ, ಅಲ್ಲಿ ಸಂತ್ರಸ್ತರು ಮತ್ತು "ಕರುಣೆಯುಳ್ಳ" ನಾಗರಿಕರು ನಿಂದನೆಯ ಪ್ರಕರಣಗಳನ್ನು ವರದಿ ಮಾಡಬಹುದು.
ಭಾರತದಲ್ಲಿ ದುರುಪಯೋಗವು ಇನ್ನೂ ಸಾಮಾಜಿಕ ನಿಷೇಧವಾಗಿದೆ ಮತ್ತು ತೊಂದರೆಗೊಳಗಾದವರಿಗೆ ಸಹಾಯ ಮಾಡುವ ತನ್ನ ಕೆಲಸದಲ್ಲಿ ಇದು ಒಂದು ದೊಡ್ಡ ಸವಾಲು ಎಂದು ಸಿಸ್ಟರ್ ಜಾನ್ಸಿರವರು ವಿವರಿಸಿದರು. ಲೈಂಗಿಕತೆಯ ಬಗ್ಗೆ ಮಾತನಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಅನೇಕರಿಗೆ, ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವುದು ಇನ್ನೂ ಕಷ್ಟಕರವಾಗಿದೆ ಮತ್ತು ಆದ್ದರಿಂದ, ಅದು ವರದಿಯಾಗಿಲ್ಲ.
"ನಮ್ಮ ಸಂಸ್ಕೃತಿಯಲ್ಲಿ, ನಾವು ಈ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ," ಎಂದು ಸಿಸ್ಟರ್ ಜಾನ್ಸಿರವರು ಹೇಳಿದರು. ಇದರ ತಡೆಗಟ್ಟುವಿಕೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಮತ್ತು ಸಂತ್ರಸ್ತರು ಮತ್ತು ಅವರ ಕುಟುಂಬಗಳು ಇನ್ನಷ್ಟು ನರಳುವಂತೆ ಮಾಡುತ್ತದೆ, ವಿಶೇಷವಾಗಿ ಅನ್ಯಾಯವು ಹೆಚ್ಚಾದಾಗ ಮತ್ತು ಅಪರಾಧಿಗಳನ್ನು ಶಿಕ್ಷಿಸದೆ ಹೋದಾಗ, ಮತ್ತು ಇಂತಹ ಪ್ರಕರಣಗಳಿಗೆ ನ್ಯಾಯ ದೊರಕುವಂತೆ ಮಾಡದೆ, ಮರೆಮಾಡಿದಾಗ ಕುಟುಂಬಗಳನ್ನು ಇನ್ನಷ್ಟು ನರಳುವಂತೆ ಮಾಡುತ್ತದೆ.
ಭಾರತದಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವು ಅಗಾಧವಾದ ಸಮಸ್ಯೆಯಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಹೆಚ್ಚಿನ ಪ್ರಕರಣಗಳು ಮನೆಯಲ್ಲಿ ನಡೆಯುತ್ತವೆ, ಅಲ್ಲಿ ವರದಿಯಾಗದ ಅಪರಾಧಗಳ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತದೆ.
ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ, 2024 ರ ಬೇಸಿಗೆಯಲ್ಲಿ ಹೊಸ ದಂಡ ಸಂಹಿತೆಯನ್ನು ಜಾರಿಗೆ ತರಲಾಯಿತು. ಇತರ ವಿಷಯಗಳ ಜೊತೆಗೆ, ಇದು ಪೋಲೀಸ್ ಮತ್ತು ನ್ಯಾಯಾಲಯಗಳಿಂದ ಪ್ರಕರಣಗಳ ತ್ವರಿತ ಪ್ರಕ್ರಿಯೆಗೆ ಕರೆ ನೀಡುತ್ತದೆ.
ಭಾರತದಲ್ಲಿನ ಕಥೋಲಿಕ ಧರ್ಮಸಭೆಯು ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿಂದನೆಯನ್ನು ಎದುರಿಸಲು ಹೆಚ್ಚು ಬದ್ಧವಾಗಿದೆ. 2023ರ ಶರತ್ಕಾಲದಲ್ಲಿ, ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರದ ಸಂಸ್ಥೆಯಲ್ಲಿ ರಕ್ಷಣೆಗಾಗಿ ರಚನೆಯನ್ನು ಪಡೆಯಲು ಸಿಸ್ಟರ್ ಜಾನ್ಸಿಯನ್ನು ರೋಮ್ಗೆ ಕಳುಹಿಸಲಾಯಿತು. ಅವರು ಈಗ ರೋಮ್‌ನಲ್ಲಿ ಕಲಿತದ್ದನ್ನು ಭಾರತದಲ್ಲಿ ತನ್ನ ಸೇವಾನಿಯೋಗದಲ್ಲಿ ಅನ್ವಯಿಸುತ್ತಿದ್ದಾರೆ.
ಧಾರ್ಮಿಕ ಸಹೋದರಿ ಶಾಲೆಗಳಲ್ಲಿ ಮತ್ತು ನಿರಾಶ್ರಿತರಲ್ಲಿ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಾರೆ, ಏಕೆಂದರೆ ಇಂಥವರೇ ಬಲಿಪಶುಗಳಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಧಾರ್ಮಿಕ ಸಹೋದರಿಯ ಜಾಗೃತಿ ಮೂಡಿಸುವ ಕಾರ್ಯದಿಂದ ಒಂದಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.
ಭಾರತದಲ್ಲಿ ಕಥೋಲಿಕ ಧರ್ಮಸಭೆಯು ಅಲ್ಪಸಂಖ್ಯಾತರಾಗಿದ್ದರೂ (ಜನಸಂಖ್ಯೆಯ ಎರಡು ಶೇಕಡಾಕ್ಕಿಂತ ಕಡಿಮೆ), ಸಾಮಾಜಿಕ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅವರ ಪ್ರಭಾವವು ಮುಖ್ಯವಾಗಿದೆ.
ತನ್ನ ಜಾಲಸಂಪರ್ಕದ ಮೂಲಕ, ಧರ್ಮಸಭೆಯು ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಸಂರಕ್ಷಣಾ ಕಾರ್ಯದ ವಲಯದಲ್ಲಿ ಅಗಾಧ ಸಾಮರ್ಥ್ಯವನ್ನು ಹೊಂದಿದೆ.