ಹುಡುಕಿ

2024.12.09 Mons. Jean Khamsé Vithavong Laos Vientiane OMI 2024.12.09 Mons. Jean Khamsé Vithavong Laos Vientiane OMI 

ಲಾವೋಸ್: ವಿಯೆಂಟಿಯಾನ್‌ನ ಮಾಜಿ ಶ್ರೇಷ್ಠ ಗುರು, ಪ್ರೇಷಿತ ಧರ್ಮಾಧ್ಯಕ್ಷರಾದ ಖಾಮ್ಸೆ ರವರು 82 ನೇ ವಯಸ್ಸಿನಲ್ಲಿ ನಿಧನರಾದರು

ಲಾವೋಸ್‌ನ ವಿಯೆಂಟಿಯಾನ್‌ನ ಗೌರವಾನ್ವಿತ ಪ್ರೇಷಿತ ಶ್ರೇಷ್ಠ ಗುರುವೂ ಮತ್ತು ಸೇವಾ ಜೀವನಕ್ಕೆ ತಮ್ಮ ಜೀವನವನ್ನು ಮೀಸಲಿಟ್ಟ ಧರ್ಮಪ್ರಚಾರಕರಾದ ಧರ್ಮಾಧ್ಯಕ್ಷ ಜೀನ್ ಖಾಮ್ಸೆ ವಿಥಾವೊಂಗ್ಥೆ OMI ರವರು 82 ನೇ ವಯಸ್ಸಿನಲ್ಲಿ ನಿಧನರಾದರು.

ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈ ರವರಿಂದ, ಲಿಕಾಸ್‌ ಸುದ್ಧಿಯ ಪ್ರಕಾರ

ಧರ್ಮಾಧ್ಯಕ್ಷರಾದ ಖಾಮ್ಸೆರವರು, ಮಿಷನರಿ ಒಬ್ಲೇಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (OMI)/ಅಮಲೋದ್ಭವ ಮಾತೆಯ ಧರ್ಮಪ್ರಚಾರಕ ನಿವೇದಿತ ಸಭೆ ಮತ್ತು ಲಾವೋಸ್‌ನ ಗೌರವಾನ್ವಿತ ಪ್ರೇಷಿತ ಶ್ರೇಷ್ಠ ಗುರು ಸದಸ್ಯರಾದ ಇವರು, ಹಲವಾರು ಸವಾಲುಗಳ ನಡುವೆಯೂ ತನ್ನ ಜೀವನವನ್ನು ಪಾಲನಾ ಸೇವಾಕಾರ್ಯಕ್ಕೆ ಮುಡಿಪಾಗಿಟ್ಟು, ಡಿಸೆಂಬರ್ 8 ರಂದು ನಿಧನರಾದರು.

“ಅವರಿಗೆ ಅನೇಕ ಕಾಯಿಲೆಗಳು, ವಿಶೇಷವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವಿತ್ತು. ಕಳೆದ ಕೆಲವು ವರ್ಷಗಳಿಂದ, ಅವರು ಹಾಸಿಗೆ ಹಿಡಿದಿದ್ದರು, ಇದರಿಂದಾಗಿ ಮಾತನಾಡಲು ಕಷ್ಟವಾಯಿತು,” ಎಂದು ಥೈಲ್ಯಾಂಡ್‌ನ ಮಾಜಿ ಉನ್ನತಾಧಿಕಾರಿ ಧರ್ಮಗುರು . ಪೀಟರ್ ಪ್ರೀಚಾ ತಮ್ನಿಯೋಮ್ ರವರು, OMI ಹೇಳಿದರು.

"ಅವರು, ನನ್ನ ಆತ್ಮೀಯ ಸ್ನೇಹಿತ, ಸಂಗೀತವನ್ನು ಪ್ರೀತಿಸುವ ಒಬ್ಬ ಭಕ್ತ, ಬುದ್ಧಿವಂತ ವ್ಯಕ್ತಿ. ಅವರು ಧರ್ಮಾಧ್ಯಕ್ಷರಾಗುವ ಮೊದಲು, ನಾವು ಆಗಾಗ್ಗೆ ನಮ್ಮ ಆಲೋಚನೆಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ ಮತ್ತು ಅವರು ನನ್ನನ್ನು ಆಳವಾಗಿ ನಂಬುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಅವರಿಗೆ ಅನೇಕ ವಿಧಗಳಲ್ಲಿ ಸಹಾಯ ಮಾಡಲು ನನಗೆ ಒಂದು ಅವಕಾಶ ಸಿಕ್ಕಿತು,” ಎಂದು ಧರ್ಮಗುರು ಹೇಳಿದರು.

ಥೈಲ್ಯಾಂಡ್‌ನ ಪ್ರೇಷಿತ ರಾಯಭಾರಿಯು ಬಿಡುಗಡೆ ಮಾಡಿದ ಸಂದೇಶವು ಹೀಗೆ ಹೇಳುತ್ತದೆ, “[ಧರ್ಮಾಧ್ಯಕ್ಷ ಜೀನ್ ಖಾಮ್ಸೆ] ಲಾವೋಸ್‌ನ ಕಥೋಲಿಕ ಧರ್ಮಸಭೆಗೆ ಮೀಸಲಿಟ್ಟ ನಾಯಕರಾಗಿದ್ದರು, ಅವರ ಅಚಲ ನಂಬಿಕೆ ಮತ್ತು ಲಾವೋತಿಯನ್ ಜನರಿಗೆ, ತಮ್ಮ ಸೇವೆಯ ಮುಖಾಂತರ, ಧರ್ಮಾಧ್ಯಕ್ಷ ಖಾಮ್ಸೆರವರು ಹೆಸರುವಾಸಿಯಾಗಿದ್ದಾರೆ.

ಒಬ್ಬ ಒಳ್ಳೆಯ ಕುರುಬನಾಗಿ, ಧರ್ಮಾಧ್ಯಕ್ಷ ಜೀನ್ ಖಾಮ್ಸೆ ತನ್ನ ಹಿಂಡಿನೊಂದಿಗೆ ಉಳಿಯಲು ಬಲವಾದ ನಿರ್ಣಯವನ್ನು ಪ್ರದರ್ಶಿಸಿದರು, ಅವರು ಒಮ್ಮೆ ಹೇಳಿದರು, "ನಾನು, ಯಾವುದೇ ಸವಾಲುಗಳು ಎದುರಾದರೂ ದೇಶವನ್ನು ಬಿಟ್ಟು ಮಾತ್ರ ತೊರೆಯಲು ಬಯಸುವುದಿಲ್ಲ." ಎಂದು ಹೇಳಿದರು.

ಧರ್ಮಾಧ್ಯಕ್ಷ ಜೀನ್ ಖಾಮ್ಸೆರವರು ಸುಮಾರು ಏಳು ವರ್ಷಗಳ ಹಿಂದೆ ಮೂರು ಬಾರಿ ಪಾರ್ಶ್ವವಾಯು ರೋಗ (ಸ್ಟ್ರೋಕ್‌ಗಳನ್ನು) ಒಳಗೊಂಡಂತೆ ಗಮನಾರ್ಹವಾದ ಆರೋಗ್ಯದ ಸವಾಲುಗಳನ್ನು ಎದುರಿಸಿದರು, ಅದು ಅವರನ್ನು ಅಧಿಕವಾಗಿ ದುರ್ಬಲಗೊಳಿಸಿತು ಮತ್ತು ಅಂತಿಮವಾಗಿ 74ನೇ ವಯಸ್ಸಿನಲ್ಲಿ ಅವರ ರಾಜೀನಾಮೆಗೆ ಕಾರಣವಾಯಿತು.

ಲುವಾಂಗ್ ಪ್ರಬಾಂಗ್ ಮತ್ತು ಕ್ಸಾಮ್ ನ್ಯೂವಾ ಮುಂತಾದ ಉತ್ತರ ಲಾವೋಸ್‌ನ ಪ್ರದೇಶಗಳಲ್ಲಿ ಧರ್ಮಾಧ್ಯಕ್ಷ ಜೀನ್ ಖಾಮ್ಸೆರವರು ಆರೋಗ್ಯದ ವಿಷಯದಲ್ಲಿ ಅಪಾರ ತೊಂದರೆಗಳನ್ನು ಎದುರಿಸುತ್ತದ್ದರೂ ಸೇವೆ ಮಾಡುವ ಅವರ ಅಧಿಕಾರಾವಧಿಯು ಪಾಲನಾ ಸೇವೆಗೆ ಮೀಸಲಿಟ್ಟಿದ್ದರು ಎಂಬುದನ್ನು ತೋರ್ಪಡಿಸಿದ್ದಾರೆ.

"ನಾನು ಸುಮಾರು 20 ವರ್ಷಗಳ ಹಿಂದೆ FABC ಸಭೆಯಲ್ಲಿ ಧರ್ಮಾಧ್ಯಕ್ಷ ಜೀನ್ ಖಾಮ್ಸೆ ರವರನ್ನು ಮೊದಲು ಭೇಟಿಯಾದೆ, ಮತ್ತು ಅಂದಿನಿಂದ ನಾವು ಯಾಜಕ ಅಭ್ಯರ್ಥಿಗಳ ರಚನೆಯನ್ನು ಬೆಂಬಲಿಸಲು ಮತ್ತು ಪಾಲನಾ ಸೇವಾಕಾರ್ಯದವರನ್ನು ಬೆಂಬಲಿಸಲು ಸಹಕರಿಸುತ್ತಿದ್ದೇವೆ" ಎಂದು ಪೋರ್ಟಿಕಸ್ ಏಷ್ಯಾದ ಸಲಹೆಗಾರ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಫಾರ್ಮೇಶನ್‌ ಫೊಂಡಾಸಿಯೊ ಏಷ್ಯಾ (IFFAsia)ದ ಮಾಜಿ ನಿರ್ದೇಶಕ ಚಾರ್ಲ್ಸ್ ಬರ್ಟಿಲ್ಲೆ ರವರು ವಿವರಿಸಿದರು. ಅಲ್ಲಿನ ಧರ್ಮಸಭೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ನಂತರ ಧರ್ಮಾಧ್ಯಕ್ಷ ಜೀನ್ ಖಾಮ್ಸೆರವರನ್ನು ಭೇಟಿಯಾಗಲು ಪ್ರೇರೇಪಿಸಲಾಯಿತು ಎಂದು ಅವರು ಹೇಳಿದರು.

ಆರಂಭಿಕ ಜೀವನ ಮತ್ತು ರಚನೆ
ಅಕ್ಟೋಬರ್ 18, 1942ರಂದು ಉತ್ತರ ಲಾವೋಸ್‌ನ ಅತ್ಯಂತ ಹಳೆಯ ಕ್ರೈಸ್ತ ಗ್ರಾಮವಾದ ಕೆಂಗ್‌ಸಡಾಕ್‌ನಲ್ಲಿ ಜನಿಸಿದ ಧರ್ಮಾಧ್ಯಕ್ಷ ಜೀನ್ ಖಾಮ್ಸೆರವರು ಪಕ್ಸಾನೆಯಲ್ಲಿರುವ ಮಹಾವಿದ್ಯಾಲಯವಾದ ಡಿ ಮಜೆನೋಡ್‌ನಲ್ಲಿ ತಮ್ಮ ವಿಶ್ವಾಸ ಮತ್ತು ಶಿಕ್ಷಣದ ಪ್ರಯಾಣವನ್ನು ಪ್ರಾರಂಭಿಸಿದರು.

1959ರಲ್ಲಿ, ಅವರು ಯಾಜಕಾಭ್ಯರ್ಥಿಗಳ ಕಿರಿಯ ಅಧ್ಯಯನಕ್ಕಾಗಿ ಫ್ರಾನ್ಸ್‌ಗೆ ಪ್ರಯಾಣಿಸಿದರು ಮತ್ತು ನಂತರ 1963ರಲ್ಲಿ ಲಾ ಬ್ರೋಸ್ಸೆ-ಮಾಂಟ್‌ಸಿಯಾಕ್ಸ್‌ನಲ್ಲಿ ನವದೀಕ್ಷಿತ ಹಂತವನ್ನು ಪ್ರವೇಶಿಸಿದರು. ಅವರು 1964ರಲ್ಲಿ ತಮ್ಮ ಮೊದಲ ಧರ್ಮಗುರುವಿನ ಪ್ರತಿಜ್ಞೆಗಳನ್ನು ಪ್ರತಿಪಾದಿಸಿದರು ಮತ್ತು ಸೊಲಿಗ್ನಾಕ್‌ನಲ್ಲಿ ತಾತ್ವಿಕ ಅಧ್ಯಯನವನ್ನು ಮಾಡಿದರು.

ಪಾಲನಾ ಸೇವಾಕಾರ್ಯ ನಿರ್ವಹಿಸವ ಅವಧಿಯಲ್ಲಿ ಲಾವೋಸ್‌ಗೆ ಹಿಂದಿರುಗಿದ ನಂತರ, ಅವರು ಫಿಲಿಪೈನ್ಸ್‌ನ ಅಟೆನಿಯೊ ಡಿ ಮನಿಲಾದಲ್ಲಿ ತಮ್ಮ ದೈವಶಾಸ್ತ್ರದ ಅಧ್ಯಯನವನ್ನು ಮುಂದುವರೆಸಿದರು. ಅವರು 1971ರಲ್ಲಿ ತಮ್ಮ ಯಾಜಕಾ ದೀಕ್ಷೆಯ ಶಾಶ್ವತ ಪ್ರತಿಜ್ಞೆಗಳನ್ನು ಮಾಡಿದರು ಮತ್ತು ಜನವರಿ 25, 1975 ರಂದು ತಮ್ಮ ಹುಟ್ಟೂರಿನಲ್ಲಿ ಯಾಜಕರಾಗಿ ದೀಕ್ಷೆ ಪಡೆದರು.

ಮೇರಿ ಇಮ್ಯಾಕ್ಯುಲೇಟ್‌ನ ಓಬ್ಲೇಟ್‌ಗಳು/ ಅಮಲೋದ್ಭವ ಮಾತೆಯ ಧರ್ಮಪ್ರಚಾರಕ ನಿವೇದಿತ ಸಭೆ 50 ವರ್ಷಗಳಿಂದ ಲಾವೋಸ್‌ನಲ್ಲಿದ್ದಾರೆ, ತಮ್ಮ ಪಾಲನಾ ಸೇವಾಕಾರ್ಯವನ್ನು ಉಳಿಸಿಕೊಳ್ಳಲು ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ.

ಬಿಕ್ಕಟ್ಟಿನಲ್ಲಿ ಧರ್ಮಾಧ್ಯಕ್ಷೀಯ ಸಚಿವಾಲಯ
1982 ರಲ್ಲಿ, ವಿಶ್ವಗುರು ದ್ವಿತೀಯ ಜಾನ್ ಪಾಲ್ ರವರು ಜೀನ್ ಖಾಮ್ಸೆ ಅವರನ್ನು ವಿಯೆಂಟಿಯಾನ್‌ನ ಸಹಾಯಕ ಪ್ರೇಷಿತ ಶ್ರೇಷ್ಠಗುರುವಾಗಿ ಮತ್ತು ಮೊಗ್ಲೇನಾದ ಧರ್ಮಾಧ್ಯಕ್ಷರಾಗಿ ನೇಮಿಸಿದರು. ಜನವರಿ 16, 1983 ರಂದು ಅವರ ಧರ್ಮಾಧ್ಯಕ್ಷೀಯ ದೀಕ್ಷೆಯ ಸಾಂಭ್ರಮಿಕ ದೈವಾರಾಧನೆಯ ವಿಧಿಯು ನಡೆಯಿತು.

41 ನೇ ವಯಸ್ಸಿನಲ್ಲಿ, ಅವರು 1984ರಲ್ಲಿ ಧರ್ಮಾಧ್ಯಕ್ಷ ಥಾಮಸ್ ನಂಥಾರವರ ನಂತರ ಪ್ರೇಷಿತ ಶ್ರೇಷ್ಠಗುರುವಾದರು, 1999 ರವರೆಗೆ ಲೂವಾಂಗ್ ಪ್ರಬಾಂಗ್‌ನ ಪ್ರೇಷಿತ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು.

ಕಷ್ಟಗಳ ಹೊರತಾಗಿಯೂ, ಅವರ ಸಚಿವಾಲಯವು ಫಲವನ್ನು ನೀಡಿತು, ವಿಶೇಷವಾಗಿ 1990 ರ ದಶಕದ ಉತ್ತರಾರ್ಧದಲ್ಲಿ, ಲಾವೋಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳಲು ಪ್ರಾರಂಭಿಸಿದಾಗ ವಿದೇಶಿ ಧರ್ಮಪ್ರಚಾರಕರು ಮತ್ತು ಧಾರ್ಮಿಕ ಸಹೋದರಿಯರ ಆಗಮನವು ಸ್ಥಳೀಯ ಧರ್ಮಸಭೆಗೆ ಹೆಚ್ಚು ಅಗತ್ಯವಿರುವ ಬೆಂಬಲವನ್ನು ಒದಗಿಸಿತು.

ಪರಂಪರೆ ಮತ್ತು ಅಂತಿಮ ವರ್ಷಗಳು
2016 ರಲ್ಲಿ ವಿಯೆಂಟಿಯಾನ್‌ನಲ್ಲಿ 15 ರಕ್ತಸಾಕ್ಷಿಗಳ ದೀಕ್ಷೆಯನ್ನು ಒಳಗೊಂಡಂತೆ ಮಹತ್ವದ ಮೈಲಿಗಲ್ಲುಗಳಿಗಾಗಿ ಲಾವೋಸ್‌ನಲ್ಲಿ ಕಥೋಲಿಕ ಸಮುದಾಯವನ್ನು ಸಿದ್ಧಪಡಿಸುವಲ್ಲಿ ಧರ್ಮಾಧ್ಯಕ್ಷ ಖಾಮ್ಸೆರವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಆರೋಗ್ಯದ ಕಾಳಜಿಯಿಂದಾಗಿ 2016 ರಲ್ಲಿ ಕೆಳಗಿಳಿದ ನಂತರ, ಧರ್ಮಾಧ್ಯಕ್ಷ ಖಾಮ್ಸೆರವರು ಶಾಂತ, ಪ್ರಾರ್ಥನಾಶೀಲ ಜೀವನವನ್ನು ನಡೆಸಿದರು. ಅವರ ಮರಣವು ಲಾವೋಸ್‌ನಲ್ಲಿ ಧರ್ಮಸಭೆಗೆ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ, ಆದರೆ ಅವರ ಸ್ಥಿತಿಸ್ಥಾಪಕತ್ವ ಮತ್ತು ಭಕ್ತಿಯ ಪರಂಪರೆಯು ಎಲ್ಲರಿಗೂ ಸ್ಫೂರ್ತಿ ನೀಡುತ್ತಿದೆ.

09 December 2024, 12:57